ಪಾಕ್ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಕಾರಣಕ್ಕೆ ಕಲಬುರಗಿಯಲ್ಲಿ ಭಯೋತ್ಪಾದನಾ ನಿಗ್ರಹ ದಳದಿಂದ ಬಂಧಿತನಾಗಿರುವ ಸಮೀರ್ ಮೊಬೈಲ್ ಪರಿಶೀಲನೆ ನಡೆಸಿದಾಗ ಸಿಕ್ಕ ವೀಡಿಯೊದಲ್ಲಿರುವ ಭಾರತದ ನಕ್ಷೆಯಿಂದ ಕಾಶ್ಮೀರವನ್ನು ಹೊರಗಿಟ್ಟಿರುವುದು ಪತ್ತೆಯಾಗಿದೆ.
ಸಮೀರ್ ಮೊಬೈಲ್ ನಲ್ಲಿ ಸಿಕ್ಕವೀಡಿಯೊದಲ್ಲಿ ಭಾರತದ ನಕ್ಷೆ ಚಿತ್ರೀಕರಣಗೊಂಡಿದೆ. ಜಮ್ಮು ಕಾಶ್ಮೀರವನ್ನು ಭಾರತದಿಂದ ಹೊರಗಿಟ್ಟ ವೀಡಿಯೊ ಚಿತ್ರೀಕರಣಗೊಂಡಿರುವುದು ಆತಂಕ ಸೃಷ್ಟಿಸಿದೆ.
ಸಮೀರ್ ಮೊಬೈಲ್ ಪರಿಶೀಲನೆ ವೇಳೆ ಆತ ಶಂಕಿತ ವೆಮನ್ ಮತ್ತು ಜಟ್ 333 ವಾಟ್ಸಪ್ ಗ್ರೂಪ್ ಸದಸ್ಯನಾಗಿರುವ ವಿಚಾರವೂ ಗೊತ್ತಾಗಿದೆ. ರಾಣಾ ಭಾಯ್ 333 ಗ್ರೂಪ್ ಸೇರಿ ಹಲವು ಗ್ರೂಪ್ ಸದಸ್ಯನಾಗಿದ್ದಾನೆ. ದೇಶ ವಿರೋಧಿ ಚಟುವಟಿಕೆ ಮತ್ತು ಕೋಮು ಸಂಘರ್ಷ ಉಂಟು ಮಾಡುವ ವಿಚಾರಗಳು ಮೊಬೈಲ್ ನಲ್ಲಿ ಸಿಕ್ಕಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾಕ್ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಸಮೀರ್ ನ ಹಲವು ಇನ್ಸ್ಟಾಗ್ರಂ ಖಾತೆಗಳನ್ನ ಹೊಂದಿದ್ದಾನೆ. 20 ಇನ್ಸ್ಟಾಗ್ರಂ ಐಡಿ ನಿರ್ವಹಣೆ ಮಾಡುತ್ತಿದ್ದಾನೆ. ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ. ಭಯೋತ್ಪಾದಕ ಕೃತ್ಯ ರೂಪಿಸಿಸುವ ಜೊತೆಗೆ ಭಯೋತ್ಪಾದಕ ಕೃತ್ಯಕ್ಕೆ ವ್ಯಕ್ತಿಗಳನ ನು ಸೇರಿಸುವ ಕೆಲಸ ಮಾಡುತ್ತಿದ್ದ ಎಂಬುದು ಬಹಿರಂಗಗೊಂಡಿದೆ.


