ದೇಶದಲ್ಲಿ ಇನ್ನು ಮುಂದೆ ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್ಗಳ್ಲಲಿ ಇಂಧನ ನಿರಾಕರಣೆ ಪ್ರಾಯೋಗಿಕ ಯೋಜನೆಯೊಂದನ್ನು ರೂಪಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ವಿಮೆ ಇಲ್ಲದೆ ಹೆಚ್ಚಿನ ಸಂಖ್ಯೆಯ ವಾಹನಗಳು ಸಂಚರಿಸುತ್ತಿವೆ. ವಿಮೆ ಇಲ್ಲದೆ ವಾಹನಗಳನ್ನು ಓಡಿಸುವುದರ ಮೇಲೆ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಈ ವಿಚಾರವನ್ನು ಕೇಂದ್ರದ ಮುಂದಿಟ್ಟಿದೆ.
ಪೆಟ್ರೋಲ್ ಪಂಪ್ಗಳು ಇಂಧನ ಪೂರೈಸುವ ಮೊದಲು ವಾಹನದ ವಿಮೆ ಪರಿಶೀಲಿಸುವಂತಹ ಪ್ರಾಯೋಗಿಕ ಯೋಜನೆಯನ್ನು ಸಿದ್ಧಪಡಿಸುವಂತೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮತ್ತು ರಸ್ತೆ ಸಾರಿಗೆ- ಹೆದ್ದಾರಿ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಮಾನ್ಯ ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ನಿರಾಕರಿಸಬಹುದು. ಈ ಕ್ರಮವು ನ್ಯಾಯಾಲಯವು ಪ್ರಸ್ತಾಪಿಸಿರುವ ರಸ್ತೆ ಸುರಕ್ಷತಾ ಕ್ರಮಗಳ ಭಾಗವಾಗಿದೆ ಎಂದು ಕೋರ್ಟ್ ಹೇಳಿದೆ. ಕಡ್ಡಾಯ ಮೋಟಾರು ವಿಮಾ ನಿಯಮಗಳ ಅನುಸರಣೆ ಹೆಚ್ಚಿಸುವುದು ಮತ್ತು ವಿಮೆ ಮಾಡದ ವಾಹನಗಳು ರಸ್ತೆಗಳಲ್ಲಿ ಸಂಚರಿಸುವುದನ್ನು ತಪ್ಪಿಸಲು ಈ ಕ್ರಮ ವಹಿಸಲು ಸಲಹೆ ನೀಡಲಾಗಿದೆ.


