Menu

ಜೀ ಕನ್ನಡ ಡಾನ್ಸ್ ಕರ್ನಾಟಕ ಡಾನ್ಸ್ ಸೂಪರ್ ಮಾಮ್ ಶೋ ಆಡಿಷನ್ ಬೆಂಗಳೂರಿನಲ್ಲಿ 

ಜೀ ಕನ್ನಡದಲ್ಲಿ ಪ್ರಸಾರವಾಗುವ ಡಾನ್ಸಿಂಗ್‌  ರಿಯಾಲಿಟಿ ಶೋ  ಡಾನ್ಸ್ ಕರ್ನಾಟಕ ಡಾನ್ಸ್‌ನಲ್ಲಿ   ಮಕ್ಕಳಿಂದ, ಸೆಲೆಬ್ರಿಟಿ ಗಳ ವರೆಗೆ ಎಲ್ಲರೂ ಭಾಗವಹಿಸಿ ಜನರನ್ನು ಮನರಂಜಿಸಿದ್ದಾರೆ. ಈಗ ಕರ್ನಾಟಕದ ಅಮ್ಮಂದಿರ ಸರಣಿ. ಕನ್ನಡಿಗರನ್ನು ಕುಣಿಸಿ, ಮನರಂಜಿಸಲು ಡಾನ್ಸ್ ಕರ್ನಾಟಕ ಡಾನ್ಸ್‌ ಸೂಪರ್ ಮಾಮ್ ಶೋ ಅತೀ ಶೀಘ್ರದಲ್ಲಿ ಶುರುವಾಗಲಿದ್ದು ಇದರ ಆಡಿಷನ್ ಇದೇ ತಿಂಗಳ 2 ರಂದು ನಡೆಯಲಿದೆ.

ಮನೆ, ಆಫೀಸ್, ಗಂಡ, ಮಕ್ಕಳು, ಅತ್ತೆ, ಮಾವ ಹೀಗೆ ಸದಾ ಪರರಿಗೋಸ್ಕರ ದುಡಿಯುವ ಅಮ್ಮಂದಿರಿಗೆ ಇದೊಂದು ಉತ್ತಮ ಅವಕಾಶ, ಡಾನ್ಸ್ ಬಗ್ಗೆ ಆಸಕ್ತಿ ಇರುವ, ಚೆನ್ನಾಗಿ ಹೆಜ್ಜೆ ಹಾಕಬಲ್ಲ ಅಮ್ಮಂದಿರು ಈ ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ.

ಆಡಿಷನ್ ನಲ್ಲಿ ಭಾಗವಹಿಸಲು ಪಾಸ್ಪೋರ್ಟ್ ಸೈಜ್ ಫೋಟೋ, ಅಡ್ರೆಸ್ ಪ್ರೂಫ್ ಜೆರಾಕ್ಸ್ ಕಡ್ಡಾಯ. ದಿನಾಂಕ 2 ಆಗಸ್ಟ್ 2026 ಭಾನುವಾರದಂದು ಬೆಳಗ್ಗೆ 9 ಗಂಟೆಗೆ,ಮಧು ಆರ್ಟ್ಸ್ ಸ್ಟುಡಿಯೋ (ಅಬ್ಬಯ್ಯ ನಾಯ್ಡು ಸ್ಟುಡಿಯೋ), ನಾಯ್ಡು ಲೇಔಟ್ , ಹನುಮಗಿರಿ , ಚಿಕ್ಕಲಸಂದ್ರ , ಉತ್ತರಹಳ್ಳಿ ಹೋಬಳಿ, ಬೆಂಗಳೂರು ಇಲ್ಲಿ ಆಡಿಷನ್ ನಡೆಯಲಿದೆ.

ಆಡಿಷನ್ ನಲ್ಲಿ ಭಾಗವಹಿಸಲು ಜೀ ಕನ್ನಡ ವಾಹಿನಿ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ. ಅಮ್ಮಂದಿರಿಗೆ ಸಿಕ್ಕಿದೆ ಹೆಜ್ಜೆ ಹಾಕೋ ಅವಕಾಶ; ತಡ ಯಾಕೆ, ಆಡಿಷನ್ ನಲ್ಲಿ ಭಾಗವಹಿಸಿ ಮುಂದಿನ ಸುತ್ತಿಗೆ ಆಯ್ಕೆಯಾಗಿ!

 

Related Posts

Leave a Reply

Your email address will not be published. Required fields are marked *