Menu

ಅಮೆರಿಕ ಸೇನೆಯಿಂದ ಇರಾನ್‌ ನೆಲೆಗಳ ಮೇಲೆ ಕ್ಷಿಪಣಿ ದಾಳಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಯುದ್ಧ ಭೀತಿ

ಇರಾನ್ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ ಸೇನೆ ಇರಾನ್ ನೆಲೆಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಈ ಬೆಳವಣಿಗೆಯಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಮತ್ತಷ್ಟು ತೀವ್ರಗೊಂಡಿದೆ.

ಈ ದಾಳಿ ಇರಾನ್ ನಡೆಸಿದ ದಾಳಿಗೆ ನೀಡಿದ ಪ್ರಬಲ ಪ್ರತಿಕ್ರಿಯೆ, ಇರಾನ್‌ನ ಪ್ರಮುಖ ಸೇನಾ ಗುರಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಹೇಳಿದೆ. ಅಮೆರಿಕ ಮತ್ತು ಸೌದಿ ಅರೇಬಿಯಾ ಜಂಟಿಯಾಗಿ ಇರಾಕ್‌ನ ಪೂರ್ವ ಭಾಗದಲ್ಲಿರುವ ಇರಾನ್ ಬೆಂಬಲಿತ ಅರೆಸೇನಾಪಡೆ ಸಂಘಟನೆಗಳ ಶಸ್ತ್ರಾಸ್ತ್ರ ಹಾಗೂ ಲಾಜಿಸ್ಟಿಕ್ಸ್ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದವು.

ಈ ದಾಳಿಯಲ್ಲಿ ಕನಿಷ್ಠ 20 ಅರೆಸೇನಾಪಡೆ ಯೋಧರು ಮೃತಪಟ್ಟು 32ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್ ತಿಳಿಸಿದೆ. ಜೊತೆಗೆ ಆರು ಮಂದಿ ಇರಾನಿ ಸೇನಾ ಸಲಹೆಗಾರರು ಕೂಡ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೋರ್ಡಾನ್‌ನಲ್ಲಿರುವ ಮೆರಿಕದ ಪ್ರಮುಖ ವಾಯುನೆಲೆ ಮುವಾಫಕ್ ಸಲ್ತಿ ಏರ್ ಬೇಸ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿ ಈ ಎಲ್ಲ ಬೆಳವಣಿಗೆಗೆ ಕಾರಣವಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಈ ದಾಳಿಯ ಹೊಣೆ ಹೊತ್ತು, ಅಮೆರಿಕದ ಸೇನೆಯ ನಿಯೋಜನೆಗೆ ಉತ್ತರವಾಗಿ ಕ್ಷಿಪಣಿಗಳನ್ನು ಉಡಾಯಿಸಿದ್ದಾಗಿ ಹೇಳಿಕೊಂಡಿತ್ತು.

ಜೋರ್ಡಾನ್‌ ಜೋರ್ಡನ್ ಸೇನೆಯು ಇರಾನ್ ಉಡಾಯಿಸಿದ್ದ ಐದು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಗಾಳಿಯಲ್ಲೇ ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ. ಇದು ಮುಂದುವರಿಯುತ್ತಿರುವ ಸಂಘರ್ಷದ ಭಾಗ. ನಾವು ಅವರನ್ನು ಅತ್ಯಂತ ಕಠಿಣವಾಗಿ ಹೊಡೆಯಲಿದ್ದೇವೆ ಎಂದು ಟ್ರಂಪ್ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಭೀಕರ ದಾಳಿ ನಡೆಸಲಾಗಿದೆ.

ಎರಡೂ ರಾಷ್ಟ್ರಗಳು ದಾಳಿಗಳನ್ನು ನಿಲ್ಲಿಸುವ ಯಾವುದೇ ಲಕ್ಷಣ ತೋರಿಸುತ್ತಿಲ್ಲ. ಪರಿಸ್ಥಿತಿ ಅಪಾಯಕಾರಿ ಹಂತದಲ್ಲಿದೆ.ಶಾಂತಿ ಸಾಧ್ಯತೆಗಳು ತುಂಬಾ ಕ್ಷೀಣವಾಗಿವೆ ಎಂದು ಅರಬ್ ದೇಶದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದಾಳಿ-ಪ್ರತಿದಾಳಿಗಳ ನಡುವೆ ಜಾಗತಿಕ ತೈಲ ಮಾರುಕಟ್ಟೆಯಲ್ಲೂ ತೀವ್ರ ಂಚಲನವುಂಟಾಗಿದೆ. ಕಚ್ಚಾ ತೈಲದ ಬೆಲೆ ಶೇಕಡಾ 7.3ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 88.09 ಡಾಲರ್ ತಲುಪಿದೆ. ಹರ್ಮುಜ್ ಜಲಸಂಧಿ ಮತ್ತು ಕೆಂಪು ಸಮುದ್ರದ ವ್ಯಾಪಾರ ಮಾರ್ಗಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಜಾಗತಿಕ ಇಂಧನ ಪೂರೈಕೆಯ ಮೇಲೂ ಆತಂಕ ವ್ಯಕ್ತವಾಗಿದೆ. ಗೆ ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ತೈಲ ಮೂಲಸೌಕರ್ಯಗಳ ಮೇಲೂ ಡ್ರೋನ್ ದಾಳಿ ನಡೆಸಿರುವುದಾಗಿ ಘೋಷಿಸಿದ್ದಾರೆ.

ಮಧ್ಯಪ್ರಾಚ್ಯದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಕ್ಷಿಪಣಿ ದಾಳಿ, ಡ್ರೋನ್ ದಾಳಿ, ವೈಮಾನಿಕ ಕಾರ್ಯಾಚರಣೆಗಳು ಹಾಗೂ ತೈಲ ಮೂಲಸೌಕರ್ಯಗಳ ಮೇಲಿನ ದಾಳಿಗಳು ಜಾಗತಿಕ ಮಟ್ಟದಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿವೆ.

Related Posts

Leave a Reply

Your email address will not be published. Required fields are marked *