Menu

ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಅಥ್ಲೆಟಿಕ್ಸ್‌: ದಿಲೀಪ್‌ ಗಾವಿತ್‌ಗೆ ಚಿನ್ನ, ಮೊಹಮ್ಮದ್ ಬಸಿಲ್‌ಗೆ ಬೆಳ್ಳಿ

ಸ್ಕಾಟ್ಲೆಂಡ್‌ ದೇಶದ ಗ್ಲಾಸ್ಗೋ ನಗರದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ದಾಖಲಿಸಿದ್ದಾರೆ. ಪುರುಷರ ಟಿ47 ವಿಭಾಗದ 100 ಮೀಟರ್ ಓಟ ಸ್ಪರ್ಧೆಯಲ್ಲಿ ಮೊದಲೆರಡು ಸ್ಥಾನಗಳನ್ನು ಭಾರತ ತನ್ನದಾಗಿಸಿಕೊಂಡಿದೆ. ದಿಲೀಪ್‌ ಮಹದೂ ಗಾವಿತ್ ಅಗ್ರಸ್ಥಾನ ಪಡೆಯುವ ಮೂಲಕ ಚಿನ್ನ ಗೆದ್ದರೆ, ಮೊಹಮ್ಮದ್ ಬಸಿಲ್ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಪಾತ್ರರಾಗಿದ್ದಾರೆ.

ದಿಲೀಪ್ 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದುಕೊಂಡರು, ಮೊಹಮ್ಮದ್ ಬಸಿಲ್ 10.83 ಸೆಕೆಂಡುಗಳಲ್ಲಿ ಗುರಿ ತಲುಪುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್‌ನ ಕೆವಿನ್ ಸ್ಯಾಂಟೋಸ್ 10.85 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗಳಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನ ಲಾಂಗ್ ಜಂಪ್‌ ಸ್ಪರ್ಧೆಯಲ್ಲಿ 28 ವರ್ಷದ ಮುರಳಿ ಶ್ರೀಶಂಕರ್ 8.09 ಮೀಟರ್ ದೂರ ಜಿಗಿಯುವ ಮೂಲಕ ಸತತ 2ನೇ ಬಾರಿಗೆ ಬೆಳ್ಳಿ ಪದಕವನ್ನು ಗಳಿಸಿದರು. ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಸತತ ಎರಡು ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಶ್ರೀಶಂಕ‌ರ್ ಅವರದು. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಯೂ ಬೆಳ್ಳಿ ಗೆದ್ದಿದ್ದರು.

ಭಾರತವು ಪ್ರಸ್ತುತ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮೂರು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಮೂರು ಕಂಚು ಪದಕ ಗೆದ್ದುಕೊಂಡಿದೆ. ಗ್ಲಾಸ್ಗೋ ನಗರದಲ್ಲಿ ಜುಲೈ ೨೩ ರಿಂದ ಆಗಸ್ಟ್ ೨ ರವರೆಗೆ ಪಂದ್ಯಗಳು ನಡೆಯುತ್ತಿದೆ. ೧೦ ಪಂದ್ಯಗಳ ಸ್ಪರ್ಧೆ ಇದ್ದು, ಆರು ಪ್ಯಾರಾ ಕ್ರೀಡೆಗಳು ಸೇರಿವೆ.

Related Posts

Leave a Reply

Your email address will not be published. Required fields are marked *