ಜುಲೈ 25 ಮತ್ತು 26 ರಂದು ನಗರದ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
66/11 ಕೆ.ವಿ ಎಸ್ಆರ್ಟಿ, ವಿಕ್ಟೋರಿಯಾ, ಬ್ಯಾಡರಹಳ್ಳಿ ಹಾಗೂ ತಾವರೆಕೆರೆ ವಿದ್ಯುತ್ ಕೇಂದ್ರಗಳ ವ್ಯಾಪ್ತಿಯಲ್ಲಿ ಸರಬರಾಜು ಸ್ಥಗಿತಗೊಳ್ಳಲಿದೆ.
ವಿಕ್ಟೋರಿಯಾ ವಿದ್ಯುತ್ ವಿತರಣಾ ಕೇಂದ್ರದ ಸಿಟಿ ಮಾರ್ಕೆಟ್, ಅವಿನ್ಯೂ ರಸ್ತೆ, ಬಿ.ವಿ.ಕೆ ಅಯ್ಯಂಗಾರ್ ರಸ್ತೆ, ಆರ್ಟಿ ಸ್ಟ್ರೀಟ್, ಸಿಟಿ ಸ್ಟ್ರೀಟ್, ಚಿಕ್ಕಪೇಟೆ, ನಗರ್ಥಪೇಟೆ, ಎಸ್.ಪಿ. ರಸ್ತೆ, ಟೌನ್ ಹಾಲ್, ಜೆ.ಸಿ. ರಸ್ತೆ, ಮಿನರ್ವಾ ಸರ್ಕಲ್, ಕೆ.ಜಿ. ರಸ್ತೆ, ಗಾಂಧಿನಗರ, ಮೈಸೂರು ರಸ್ತೆ, ಪೊಲೀಸ್ ವಸತಿಗೃಹ, ಗೋರಿಪಾಳ್ಯ, ಬಿನ್ನಿಪೇಟೆ, ನ್ಯೂ ತರಗುಪೇಟೆ, ಚಾಮರಾಜಪೇಟೆ, ಎ.ಎಂ. ರಸ್ತೆ, ಕಲಾಲಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ, ಕಿಮ್ಸ್ ಮತ್ತು ಸುತ್ತಮುತ್ತಲಿನ ಭಾಗಗಳು.
ಎಸ್ಆರ್ಟಿ ಹಾಗೂ ಇತರ ವ್ಯಾಪ್ತಿಯ ನ್ಯೂ ಕೆ.ಹೆಚ್.ಬಿ ಕಾಲೋನಿ, ಬಂಡೇಮಠ, ಕೆ.ಎಸ್.ಆರ್ಟಿ, ಕೆ.ಹೆಚ್.ಬಿ, ಅರುಂಧತಿನಗರ, ಶೀರ್ಕೆ, ಹೊಯ್ಸಳ ಸರ್ಕಲ್, ಸಚ್ಚಿದಾನಂದನಗರ, ವಲೇಗರಹಳ್ಳಿ, ಚಿಕ್ಕನಹಳ್ಳಿ, ಸರ್.ಎಂ.ವಿ. ಲೇಔಟ್, ಜ್ಞಾನಭಾರತಿ ಲೇಔಟ್, ಕೋಡಿಗೇಹಳ್ಳಿ, ಕೆನ್ನಹಳ್ಳಿ, ಸೀಗೇಹಳ್ಳಿ, ಬಿಎಎಮ್ಎಲ್ ಲೇಔಟ್, ಮಾಗಡಿ ಮೇನ್ ರೋಡ್, ಅಂಜನಾನಗರ, ಅಂಬೇಡ್ಕರ್ ನಗರ, ಮಾರುತಿನಗರ, ಚೊಕ್ಕಸಂದ್ರ, ನಗದೆವನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ತಾವರೆಕೆರೆ ವ್ಯಾಪ್ತಿಯ ತಾವರೆಕೆರೆ, ಜಟ್ಟಿಕಾವಲು, ಚನ್ನೇನಹಳ್ಳಿ, ಯರಪ್ಪ ಇಂಡಸ್ಟ್ರಿಯಲ್ ಏರಿಯಾ, ಗಿಡ್ಡದಪಾಳ್ಯ, ಹುನಗನಹಟ್ಟಿ, ಗಾಣಕಲ್ ಇಂಡಸ್ಟ್ರಿಯಲ್ ಏರಿಯಾ, ಬಸವನಪಾಳ್ಯ, ವಟೂರು, ಮೆಟಿಪಾಳ್ಯ ಹಾಗೂ ಗಂಗೇನಹಳ್ಳಿ.
ಬ್ಯಾಡರಹಳ್ಳಿ ವ್ಯಾಪ್ತಿಯ ಬ್ಯಾಡರಹಳ್ಳಿ, ಅಂಜನಾನಗರ, ಬಿಎಎಮ್ಎಲ್ ಲೇಔಟ್, ಗಿಡ್ಡದಕೋನೇನಹಳ್ಳಿ, ಮುದ್ದಿನಪಾಳ್ಯ, ಹೆಗ್ಗಡದೇವನಪುರ, ಭವಾನಿ ಲೇಔಟ್, ಬಾಲಾಜಿ ಲೇಔಟ್, ಹೆಗ್ಗನಹಳ್ಳಿ, ತುಂಗಾನಗರ, ಕೆಂಪೇಗೌಡನಗರ, ಹೊಸಹಳ್ಳಿ, ಸುಂಕದಕಟ್ಟೆ ಇಂಡಸ್ಟ್ರಿಯಲ್ ಏರಿಯಾ, ನಾಗರಹೊಳೆನಗರ ಹಾಗೂ ಸಂಜೀವಿನಿ ನಗರಗಳಲ್ಲಿ ವಿದ್ಯುತ್ ವ್ಯತ್ಯಯ ಇರುತ್ತದೆ. ಸಾರ್ವಜನಿಕರು ಹಾಗೂ ಗ್ರಾಹಕರು ಮುನ್ನೆಚ್ಚರಿಕೆಯಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಬೆಸ್ಕಾಂ ತಿಳಿಸಿದೆ.


