Menu

ಬಿಸಿಲ ಬೇಗೆಗೆ ಯುರೋಪ್‌ ರಾಷ್ಟ್ರಗಳಲ್ಲಿ 1300 ಜನ ಬಲಿ

ಈ ಬಾರಿಯ ಬೇಸಿಗೆಯು ಯುರೋಪ್‌ ರಾಷ್ಟ್ರಗಳನ್ನು ತತ್ತರಗೊಳಿಸಿದೆ. 40ರಿಂದ 44 ಡಿಗ್ರಿವರೆಗಿನ ಬಿಸಿಲಿನ ಝಳಕ್ಕೆ ಜನ ಹೈರಾಣಾಗಿದ್ದಾರೆ. ಜೂ.21ರ ನಂತರ ಫ್ರಾನ್ಸ್‌ನಲ್ಲಿ ಈವರೆಗೆ 1 ಸಾವಿರಕ್ಕೂ ಹೆಚ್ಚು ಮಂದಿ ಸೇರಿ, ಯುರೋಪ್‌ನಾದ್ಯಂತ 1300 ಜನ ಬಿಸಿಲಿಗೆ ಬಲಿಯಾಗಿದ್ದಾರೆ.

ಬಿಸಿಲಿನ ತಾಪಕ್ಕೆ ಸು ನೀಗಿದವರಲ್ಲಿ ಹೆಚ್ಚಿನವರು 65 ವರ್ಷ ಮೇಲ್ಪಟ್ಟವರು. ಸ್ಕ್ಯಾಂಡಿನೇವಿಯಾ ಮತ್ತು ಆಲ್ಪ್ಸ್ ಪ್ರದೇಶದಲ್ಲಿ ತಾಪಮಾನ 40 ಡಿ.ಸೆ.ಗಿಂತಲೂ ಹೆಚ್ಚಿದೆ. ಸ್ವಿಸ್ ಹಿಮನದಿಗಳು ವೇಗವಾಗಿ ಕರಗುತ್ತಿವೆ, ರ ಮುಂದಿನ ದಿನಗಳಲ್ಲಿ ಸಮುದ್ರ ಮಟ್ಟ ಹೆಚ್ಚಳ, ಹಠಾತ್‌ ಪ್ರವಾಹಗಳು ಸಂಭವಿಸುವ ಆತಂಕ ಎದುರಾಗಿದೆ.

ಅತ್ತ 40 ಡಿಗ್ರಿಯಷ್ಟು ತಾಪದಲ್ಲಿ ಡೆನ್ಮಾರ್ಕ್‌ನಲ್ಲಿ ಜನ ಜೀವನ ದುಸ್ತರವಾಗಿದೆ. ಗುಂಪುಗೂಡಿರುವ ಜನರನ್ನು ಚದುರಿಸಲು ಬಳಸಲಾಗುವ ಜಲಫಿರಂಗಿಗಳನ್ನು (ವಾಟರ್‌ ಕೆನಾನ್) ಜರ್ಮನಿ ಪೊಲೀಸರು ಬೇಸಿಗೆಯನ್ನು ತಣಿಸಲು ಬಳಕೆ ಮಾಡಬೇಕಾದ ಸನ್ನಿವೇಶ ನಿರ್ಮಾಣಗೊಂಡಿದೆ. ಬರ್ಲಿನ್‌ ನಗರಕ್ಕೆ ತಂಪೆರೆಯಲು ಜಲಫಿರಂಗಿಗಳ ಮೂಲಕ ನೀರನ್ನು ಹಾಯಿಸಲಾಗುತ್ತಿದೆ.

ಪ್ಯಾರಿಸ್‌ನಲ್ಲಿ ಫ್ಯಾನ್‌ಗಳ ಬೇಡಿಕೆಯಲ್ಲಿ ಏರಿಕೆಯಾಗಿದೆ. ಆಸ್ಪತ್ರೆಗಳಿಗೆ ಬರುತ್ತಿರುವ ತುರ್ತು ಕರೆಗಳ ಪ್ರಮಾಣದಲ್ಲಿ ಶೇ.80 ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಟಲಿಯ 18 ನಗರಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಅಣು ವಿದ್ಯುತ್‌ ಸ್ಥಾವರಗಳ ರಿಯಾಕ್ಟರ್‌ಗಳನ್ನು ತಣ್ಣಗಾಗಿಸಲು ನೀರನ್ನು ಬಳಸಲಾಗುತ್ತದೆ. ಸ್ವಿಜರ್ಲೆಂಡ್‌ನ ಆರೆ ನದಿಯ ನೀರು ಬಿಸಿಯಾಗಿರುವ ಕಾರಣ ಅಣು ವಿದ್ಯುತ್‌ ಸ್ಥಾವರದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

Related Posts

Leave a Reply

Your email address will not be published. Required fields are marked *