Menu

ಸಿರಪ್‌ ಖರೀದಿಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಕಡ್ಡಾಯ

ಮೆಡಿಕಲ್‌ ಶಾಪ್‌ಗಳಲ್ಲಿ ಯಾವುದೇ ಸಿರಪ್‌ ಖರೀದಿಸಬೇಕಾದರೆ ಇನ್ನು ಮುಂದೆ ಕಡ್ಡಾಯವಾಗಿ ವೈದ್ಯರ ಪ್ರಿಸ್ಕ್ರಿಪ್ಷನ್ ತೋರಿಸಲೇಬೇಕು. ಸಾರ್ವಜನಿಕರು ನೇರವಾಗಿ ಸಿರಪ್‌ ಖರೀದಿ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಔಷಧದ ಗುಣಮಟ್ಟ ಮತ್ತು ರೋಗಿಗಳ ಸುರಕ್ಷತೆಯ ಉದ್ದೇಶದಿಂದ  ವೈದ್ಯರ ಶಿಫಾರಸು ಇಲ್ಲದೆ ಸಿರಪ್‌ಗಳನ್ನು ಖರೀದಿಸುವ ಅವಕಾಶ ಇರುವುದಿಲ್ಲ, ಕೆಮ್ಮಿನ ಸಿರಪ್‌ಗೂ ವೈದ್ಯರ ಪ್ರಿಸ್ಕ್ರಿಪ್ಷನ್ ಕಡ್ಡಾಯ ಎಂದು ಕೇಂದ್ರ ಹೇಳಿದೆ. 1945 ರ ಔಷಧ ನಿಯಮಗಳನ್ನು ಕೇಂದ್ರ ತಿದ್ದುಪಡಿ ಮಾಡಿದೆ.

ವಿನಾಯಿತಿ ಪಡೆದ ಔಷಧಿಗಳ ವರ್ಗದಿಂದ ‘ಸಿರಪ್‌ಗಳು’ ಎಂಬ ಪದವನ್ನು ತೆಗೆದುಹಾಕಿದೆ. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮು ಸಿರಪ್‌ಗಳು ಸೇರಿದಂತೆ ಯಾವುದೇ ಸಿರಪ್‌ಗಳ ಓವರ್-ದಿ-ಕೌಂಟರ್ ಮಾರಾಟವನ್ನು ಬ್ಯಾನ್‌ ಮಾಡಲಿದೆ. ಕೆಮ್ಮಿನ ಸಿರಪ್‌ಗಳು ಮತ್ತು ಇತರ ದ್ರವ ಔಷಧಿಗಳನ್ನು ವೈದ್ಯರನ್ನು ಸಂಪರ್ಕಿಸದೆ ನೇರವಾಗಿ ಔಷಧಾಲಯಗಳಿಂದ ಖರೀದಿಸಬಹುದಿತ್ತು. ಇನ್ಮುಂದೆ ಅದು ಸಾಧ್ಯವಿಲ್ಲ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸರ್ಕಾರವು ಸಂಬಧಿಸಿದ ವಲಯದಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಕೋರಿ ಹೊರಡಿಸಿದ ಕರಡು ಅಧಿಸೂಚನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಔಷಧಗಳಿಗೆ ಸಂಬಂಧಿಸಿದ ತಾಂತ್ರಿಕ ವಿಷಯಗಳ ಕುರಿತು ಡ್ರಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ (ಡಿಟಿಎಬಿ) ಜೊತೆಗೆ ಸಮಾಲೋಚಿಸಿದ ನಂತರ ಈ ತಿದ್ದುಪಡಿಯನ್ನು ಅಂತಿಮಗೊಳಿಸುವ ಮೊದಲು ಸಾರ್ವಜನಿಕರಿಂದ ಸ್ವೀಕರಿಸಿದ  ಅಭಿಪ್ರಾಯಗಳನ್ನು ಪರಿಗಣಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಕೆಲವು ಕೆಮ್ಮು ಸಿರಪ್‌ಗಳು ಮಕ್ಕಳ ಸಾವಿಗೆ ಕಾರಣವಾದ ವರದಿಗಳ ನಂತರ ನಿಯಂತ್ರಕರು ನಿಯಮಗಳನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ.

Related Posts

Leave a Reply

Your email address will not be published. Required fields are marked *