Menu

ನ್ಯೂಯಾರ್ಕ್‌ನಲ್ಲಿ ಇನ್ಮುಂದೆ ತಂದೆ, ತಾಯಿ ಪದ ಬಳಕೆ ಇಲ್ಲ: ವಿಧೇಯಕ ಅಂಗೀಕಾರ

ಅಮೆರಿಕದ ನ್ಯೂಯಾರ್ಕ್ ರಾಜ್ಯವು ಇನ್ನು ಮುಂದೆ ತಾಯಿ (Mother) ಮತ್ತು ತಂದೆ (Father) ಎಂಬ ಪದ ಬಳಕೆ ಮಾಡದಂತೆ ಮಸೂದೆ ರೂಪಿಸಿದ್ದು, ಸಂಬಂಧಿಸಿದ ವಿಧೇಯಕವು ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಈ ವಿಧೇಯಕ್ಕಕೆ ಇನ್ನು ಗವರ್ನರ್‌ ಅಂಕಿ ಬಿದ್ದ ಬಳಿಕ ಕಾನೂನು ಆಗಿ ಜಾರಿಯಾಗಲಿದೆ.

ಆಡಳಿತಾರೂಢ ಡೆಮೋಕ್ರಾಟ್ ಪಕ್ಷದ ನಾಯಕರು ಜಾರಿಗೊಳಿಸಲು ಮುಂದಾಗಿರುವ ಈ ವಿಧೇಯಕ ಜಾಗತಿಕವಾಗಿ ಚರ್ಚೆ ಮತ್ತು ವಿವಾದವನ್ನು ಹುಟ್ಟು ಹಾಕಿದೆ. ತಾಯಿ ಮತ್ತು ತಂದೆ ಎಂಬ ಸಾಂಪ್ರದಾಯಿಕ ಹಾಗೂ ಭಾವನಾತ್ಮಕ ಪದಗಳನ್ನು ತೆಗೆದುಬದಲಿಗೆ ಲಿಂಗ-ತಟಸ್ಥ ಪದಗಳನ್ನು ಬಳಸುವ ವಿಧೇಯಕ ಅಂಗೀಕಾರಗೊಂಡಿದೆ.

ಇನ್ಮುಂದೆ ಫ್ಯಾಮಿಲಿ ಕೋರ್ಟ್, ಶಿಕ್ಷಣ ಇಲಾಖೆ ಹಾಗೂ ಕೌಟುಂಬಿಕ ದಾಖಲೆಗಳಲ್ಲಿ ತಾಯಿ ಎಂಬ ಪದದ ಜಾಗದಲ್ಲಿ ಗರ್ಭ ಧರಿಸಿದ ಪೋಷಕರು , ತಂದೆ ಎಂಬ ಪದದ ಬದಲಿಗೆ ಗರ್ಭ ಧರಿಸದ ಪೋಷಕರು ಅಥವಾ ‘ಪೋಷಕರು’ ಎಂದು ಉಲ್ಲೇಖಿಸಲಾಗುತ್ತದೆ. ಮಗುವಿನ ಜೈವಿಕ ತಂದೆಯನ್ನು ಗುರುತಿಸುವ ಪ್ರಕ್ರಿಯೆಯಾದ ವಿಚಾರಣೆಗಳನ್ನು ಇನ್ಮುಂದೆ ಪೇರೆಂಟೇಜ್ ಎಂದು ಕರೆಯಲಾಗುತ್ತದೆ.

ಈ ನಿರ್ಧಾರದ ವಿರುದ್ಧ ರಿಪಬ್ಲಿಕನ್ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿ, ಇದು ಅತಿರೇಕದ ವರ್ತನೆ. ಸಾಮಾನ್ಯ ಜನರು ಬೆಲೆ ಏರಿಕೆ ಹಾಗೂ ಸುರಕ್ಷತೆಯ ಸಮಸ್ಯೆಗಳಿಂದ ಪರದಾಡುತ್ತಿದ್ದರೆ, ಸರ್ಕಾರ
ಅಮ್ಮ-ಅಪ್ಪ ಎಂಬ ಪದಗಳನ್ನು ಬದಲಾಯಿಸುವ ಅಪ್ರಸ್ತುತ ವಿಷಯಗಳಿಗೆ ಸಮಯ ವ್ಯಯಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರತಿಪಕ್ಷ ನಾಯಕ ಬ್ರೂಸ್ ಬ್ಲೇಕ್‌ಮನ್ ಮಾತನಾಡಿ, ಡೆಮೋಕ್ರಾಟ್‌ಗಳು ನ್ಯೂಯಾರ್ಕ್‌ನ ಕುಟುಂಬಗಳ ಸೌಹಾರ್ದತೆಯ ವಿರುದ್ಧ ಯುದ್ಧ ಸಾರಿದ್ದಾಗಿ ಹೇಳಿದ್ದಾರೆ. ವಿಧೇಯಕವನ್ನು ಬೆಂಬಲಿಸಿರುವ ಸೆನೆಟರ್ ಲೂಯಿಸ್ ಸೆಪುಲ್ವೆಡಾ, ಸಮಾಜದಲ್ಲಿ ಸಲಿಂಗಕಾಮಿ ದಂಪತಿಗಳ ಹಾಗೂ ಬಾಡಿಗೆ ತಾಯಿ ಪ್ರಕರಣಗಳು ಹೆಚ್ಚುತ್ತಿವೆ. ಇಬ್ಬರು ತಾಯಂದಿರು ಅಥವಾ ಇಬ್ಬರು ತಂದೆಯಂದಿರು ಇರುವ ಕುಟುಂಬಗಳ ಕಾನೂನು ಪ್ರಕ್ರಿಯೆಗಳನ್ನು ಸರಳಗೊಳಿಸಲು ಲಿಂಗ-ತಟಸ್ಥ ಪದಬಳಕೆ ಅನಿವಾರ್ಯ ಎಂದು ಸಮರ್ಥಿಸಿಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *