ಜಗತ್ತಿನಾದ್ಯಂತ ಚಿತ್ರೀಕರಿಸಲಾದ ‘ದಿ ಒಡಿಸ್ಸಿ’ ಸಂಪೂರ್ಣವಾಗಿ ಅತ್ಯಾಧುನಿಕ ಐಮ್ಯಾಕ್ಸ್ ಫಿಲ್ಮ್ ತಂತ್ರಜ್ಞಾನವನ್ನು ಬಳಸಿ ಐಮ್ಯಾಕ್ಸ್ ಕ್ಯಾಮೆರಾಗಳಲ್ಲೇ ಚಿತ್ರೀಕರಣಗೊಂಡ ಮೊದಲ ಚಲನಚಿತ್ರ, ಇದು ಜುಲೈ 17, 2026 ರಂದು ಭಾರತದಾದ್ಯಂತ ಮತ್ತು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಜೂನ್ 8 ರಂದು ಭಾರತದಲ್ಲಿ ಅಭಿಮಾನಿಗಳು ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹೋಮರ್ ಅವರ ಪ್ರಸಿದ್ಧ ಕಥೆಯನ್ನು ತೆರೆಮೇಲೆ ತರುತ್ತಿದ್ದಾರೆ. ಟ್ರಾಯ್ ಯುದ್ಧ ಮುಗಿದ ನಂತರ ಇಥಾಕಾದ ರಾಜ ಒಡಿಸ್ಸಿಯಸ್ ತನ್ನ ಮನೆಗೆ ಮರಳುವ ಅಪಾಯಕಾರಿ ಪ್ರಯಾಣವೇ ಈ ಚಿತ್ರದ ಕಥೆ.
ಇದರಲ್ಲಿ ಮ್ಯಾಟ್ ಡಾಮನ್ (ಒಡಿಸ್ಸಿಯಸ್ ಆಗಿ), ಟಾಮ್ ಹಾಲೆಂಡ್ (ಟೆಲಿಮ್ಯಾಕಸ್ ಆಗಿ) ಮತ್ತು ಆನ್ ಹ್ಯಾಥ್‌ವೇ (ಪೆನೆಲೋಪ್ ಆಗಿ) ನಟಿಸಿದ್ದಾರೆ. ಜೊತೆಗೆ ಝೆಂಡಾಯಾ, ರಾಬರ್ಟ್ ಪ್ಯಾಟಿನ್ಸನ್ ಮತ್ತು ಚಾರ್ಲಿಜ್ ಥೆರಾನ್ ಅವರಂತಹ ದೊಡ್ಡ ತಾರಾಗಣವಿದೆ.
ಭಾರತದಲ್ಲಿ ‘ದಿ ಒಡಿಸ್ಸಿ’ ಚಿತ್ರದ ಐಮ್ಯಾಕ್ಸ್ ಟಿಕೆಟ್ ಬುಕ್ಕಿಂಗ್ ಆರಂಭದ ಕುರಿತು ವಾರ್ನರ್ ಬ್ರದರ್ಸ್ ಡಿಸ್ಕವರಿ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡೆನ್ಜಿಲ್ ಡಿಯಾಸ್ ಮಾತನಾಡಿ, ಚಲನಚಿತ್ರ ಇತಿಹಾಸದಲ್ಲೇ ಸಂಪೂರ್ಣವಾಗಿ ಐಮ್ಯಾಕ್ಸ್ ಕ್ಯಾಮೆರಾಗಳಲ್ಲೇ ಚಿತ್ರೀಕರಿಸಲಾದ ಮೊದಲ ಸಿನಿಮಾ ‘ದಿ ಒಡಿಸ್ಸಿ’. ಇದಕ್ಕೆ ಕ್ರಿಸ್ಟೋಫರ್ ನೋಲನ್ ಇಪ್ಪತ್ತು ವರ್ಷಲ ಶ್ರಮಿಸಿದ್ದಾರೆ. ಜೂನ್ 8 ರಂದು ಭಾರತದಲ್ಲಿ ನೋಲನ್ ಅಭಿಮಾನಿಗಳು ಟಿಕೆಟ್ ಬುಕ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
‘ದಿ ಒಡಿಸ್ಸಿ’ ಚಿತ್ರದ ಐಮ್ಯಾಕ್ಸ್ ಟಿಕೆಟ್‌ಗಳು ಜೂನ್ 8, 2026 ರಿಂದ ಮಾರಾಟವಾಗಲಿವೆ. ಸಿನಿಮಾ ಜುಲೈ 17, 2026 ರಂದು ಭಾರತದಾದ್ಯಂತ ರಿಲೀಸ್ ಆಗಲಿದೆ.


