Menu

ತಂದೆ, ಆತನ ಸ್ನೇಹಿತನಿಂದ ಮಗಳ ಮೇಲೆ ಅತ್ಯಾಚಾರ

rape case

ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಜನತಾ ಕಾಲೋನಿಯಲ್ಲಿ ತಂದೆಯೊಬ್ಬ ಅಪ್ರಾಪ್ತ ವಯಸ್ಕ ಮಗಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.

ಈ ಕೃತ್ಯವನ್ನು ಯಾರಿಗೂ ತಿಳಿಸಬಾರದು ಎಂದು ಮಗಳಿಗೆ ಬೆದರಿಕೆ ಹಾಕಿ ಬಾಯಿ ಮುಚ್ಚಿಸಿದ್ದ. ತಾಯಿಗೆ ವಿಷಯ ತಿಳಿಯಬಾರದೆಂದು ಮಗಳಿಗೆ ಧಮ್ಕಿ ಹಾಕುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಯು ಮಗಳ ಮೇಲೆ ಸ್ನೇಹಿತನಿಗೂ ಅತ್ಯಾಚಾರವೆಸಗಲು ಅವಕಾಶ ನೀಡಿದ್ದಾನೆ. ಕೊನೆಗೂ ಬಾಲಕಿ ಪೊಲೀಸರಿಗೆ ದೂರು ನೀಡಿದ್ದು, ಅತ್ಯಾಚಾರ ಆರೋಪದಡಿ ಆರೋಪಿಗಳಿಬ್ಬರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಅಮರೇಶ್ (40) ಹಾಗೂ ಶೀನು (33) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

 

Related Posts

Leave a Reply

Your email address will not be published. Required fields are marked *