ಬೆಂಗಳೂರಿನ ನಾಗರಿಕರಿಗೆ ಜಿಬಿಎ ಇ-ಖಾತಾ ಮನೆ ಬಾಗಿಲಿಗೆ ತಲುಪಿಸಲು ಕ್ರಮ ಕೈಗೊಂಡಿದ್ದು, ಮೇ 16ರಿಂದ ಬೃಹತ್ ಇ- ಖಾತಾ ಮೇಳ ನಡೆಸಲಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 50 ಕಡೆಗಳಲ್ಲಿ ಇ-ಖಾತಾ ಮೇಳ ನಡೆಯಲಿದ್ದು, 25 ಲಕ್ಷ ಖಾತಾಗಳನ್ನ ಇ-ಖಾತಾ ವ್ಯಾಪ್ತಿಗೆ ತರುವುದಕ್ಕೆ ಮುಂದಾಗಿದೆ. ಮೇ 16ರ ನಂತರ ಪ್ರತಿ ಶನಿವಾರ ಇ-ಖಾತಾ ಮೇಳ ನಡೆಸಲಿದ್ದು, ಬೆಂಗಳೂರಿಗರು ಅಗತ್ಯ ದಾಖಲೆಗಳನ್ನ ತೆಗೆದುಕೊಂಡು ಇ-ಖಾತಾಗೆ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ.
25 ಲಕ್ಷ ಆಸ್ತಿಯನ್ನು ಇ-ಖಾತಾ ವ್ಯಾಪ್ತಿಗೆ ತರುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ 10 ಲಕ್ಷ ಇ-ಖಾತಾ ವಿತರಿಸಲಾಗಿದೆ. ಇ-ಖಾತಾ ಮೇಳದಲ್ಲಿ ನೇರವಾಗಿ ಸಾರ್ವಜನಿಕರು ಇ-ಖಾತಾ ಪಡೆಯಬಹುದು. ಮಧ್ಯವರ್ತಿಗಳ ಉಪಟಳ ಇರುವುದಿಲ್ಲ. ಲಂಚ ನೀಡಬೇಕಾಗಿಲ್ಲ.
ಅರ್ಜಿ ಜೊತೆ ಸೇಲ್ ಡೀಡ್ / ಟೈಟಲ್ ಡೀಡ್, ಪ್ರಾಪರ್ಟಿ ಟ್ಯಾಕ್ಸ್ ರಸೀದಿ, ಎಸ್‌ಎಎಸ್ ಪ್ರಾಪರ್ಟಿ ಟ್ಯಾಕ್ಸ್ ಐಡಿ, ಆಧಾರ್ ಕಾರ್ಡ್– ಇ ಕೈವೈಸಿ ಆಗಿದ್ದರೆ ಉತ್ತಮ, ಇಸಿ, ಬೆಸ್ಕಾಂ ಬಿಲ್, ಆಸ್ತಿಯ ಜಿಪಿಎಸ್ ಲೊಕೇಷನ್ ಸಲ್ಲಿಸುವುದು ಅಗತ್ಯವಾಗಿದೆ.


