Menu

ಸಂಪುಟ ಬದಲಾವಣೆ: ಹೈಕಮಾಂಡ್ ಉತ್ತರ ನೀಡಬೇಕಿದೆ ಎಂದ ಶಾಸಕ ಕೋನರಡ್ಡಿ

ಮೇ 15 ರ ನಂತರ ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಹೈಕಮಾಂಡ್ ಹೇಳಬೇಕಿದೆ. ಕೇರಳ ಮತ್ತು ತಮಿಳುನಾಡಿನ ಸ್ಥಿತಿಗತಿ ನೋಡಿ ಹೈಕಮಾಂಡ್ ಸಿಎಂ ಅವರನ್ನು ಕರೆಯಬೇಕು. ಕರೆದು ಅವರ ಜೊತೆ ಹೈಕಮಾಂಡ್ ಮಾತಾಡಬೇಕು ಎಂದು ನವಲಗುಂದ ಶಾಸಕ ಎಚ್.ಕೋನರೆಡ್ಡಿ ಹೇಳಿದರು

ಸಿಎಂ  ಸಿದ್ದರಾಮಯ್ಯ ಅವರನ್ನು ಕರೆದು ಹೈಕಾಂಡ್‌  ಮಾತಾಡಿದರೆ ಎಲ್ಲವೂ ಬಗೆಹರಿಯುತ್ತದೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದೇ ಫೈನಲ್ ಎಂದು ಅವರು  ಹೇಳಿದರು.

ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮೇ 15 ರ ನಂತರ ಸಚಿವ ಸಂಪುಟ ಬದಲಾವಣೆಯಾಗಲಿದೆ ಎಂಬ ವಿಚಾರಕ್ಕೆ ಅವರು ಹೀಗೆ ಪ್ರತಿಕ್ರಿಯಿಸಿದರು.  ತಮಿಳುನಾಡಿನಲ್ಲಿ ವಿಜಯ್‌ ಗೆ ಕಾಂಗ್ರೆಸ್ ಸಪೋರ್ಟ್ ನೀಡಿದೆ. ಆದರೆ ನಾಲೈದು ದಿನ ಅಲ್ಲಿ ರಾಜಕೀಯ ಸರ್ಕಸ್ ಆಯಿತು, ಕಾಂಗ್ರೆಸ್ ಅಲ್ಲಿಯೂ ಕೂಡ ಬೆಂಬಲ ಕೊಟ್ಟಿದೆ ಎಂದ ಅವರು, ಇಡೀ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಹೇಗಾಯಿತು ಅನ್ನೋದು ಎಲ್ಲರಿಗೂ ಗೊತ್ತು ಎಂದರು. ದೀದಿ ಅವರು ಒಳ್ಳೆಯ ಕೆಲಸ ಮಾಡಿದರು ಸೋಲು ಅನುಭವಿಸಿದರು. ಪಂಚರಾಜ್ಯ ಗೆದ್ದಿವೆ ಅಂತ ಬಿಜೆಪಿ ಬೀಗುವಂತಿಲ್ಲ, ಗೆದ್ದಿವೆ ಅಂತ ಬಿಜೆಪಿ ಬೀಗುವಂತಿಲ್ಲ, ಅವರೆಷ್ಟು ಗೆದ್ದಿದ್ದಾರೋ ಇತರೆ ಪಕ್ಷಗಳು ಅಷ್ಟೇ ಗೆದ್ದಿವೆ ಎಂದರು.

Related Posts

Leave a Reply

Your email address will not be published. Required fields are marked *