Wednesday, September 23, 2026
Menu

ಹುಡುಗಿ ದಪ್ಪಗಿದ್ದರೂ ಹಣಕ್ಕಾಗಿ ಮದುವೆಯಾಗಿದ್ದ, ಸಣ್ಣಗಾಗುತ್ತಿಲ್ಲವೆಂದು ಕೊಲೆಗೈದ

ಹಣ, ಆಸ್ತಿ ಮೇಲೆ ಕಣ್ಣಿಟ್ಟಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಯುವಕನೊಬ್ಬ ಹುಡುಗಿ ದಪ್ಪಗಿದ್ದರೂ ಮದುವೆಯಾಗಿ ಮನೆ ಅಳಿಯನಾಗಿದ್ದ. ಇವರಿಗೆ ಹೆಣ್ಣು ಮಗುವೂ ಇದೆ.ಹೆಂಡತಿ ಸಣ್ಣಗಾಗುತ್ತಿಲ್ಲವೆಂದು ಕೊಂದೇ ಬಿಟ್ಟಿದ್ದಾನೆ.

ಇತ್ತೀಚೆಗೆ ಗಂಡ ಕಿರಣ್ ಹೆಂಡತಿ ಪದ್ಮಜಾ ದಪ್ಪಗಿದ್ದು, ಸುಂದರವಾಗಿಲ್ಲ ಎಂದು ದ್ವೇಷಿಸುತ್ತಿದ್ದ, ಸಣ್ಣಗಾಗುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ. ಪದ್ಮಜಾ ತೂಕ ಇಳಿಸಿಕೊಳ್ಳದಿದ್ದಾಗ ಆಕೆಯನ್ನು ಕೊಲೆ ಮಾಡಿತನ್ನ ಜೀವನದಿಂದ ತೊಲಗಿಸಿಕೊಂಡಿದ್ದಾನೆ.

ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪ್ರೊದ್ದುಟೂರು ನಿವಾಸಿ ಕಿರಣ್, ಮದ್ದೂರಿನ ಪದ್ಮಜಾಳನ್ನು ಮದುವೆಯಾಗಿದ್ದ. ದಂಪತಿ ಮದ್ದೂರಿನ ಹೊಸಕೋಟೆಯಲ್ಲಿ ವಾಸವಾಗಿದ್ದರು. ಸಾಫ್ಟ್‌ವೇರ್ ಇಂಜಿನಿಯರ್ ಕಿರಣ್ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ.ದಪ್ಪಗಿರುವ ಪತ್ನಿಯನ್ನು ತೊಲಗಿಸುವುದು ಹೇಗೆಂದು ಯೂಟ್ಯೂಬ್‌ನಲ್ಲಿ ಸರ್ಚ್‌ ಮಾಡುತ್ತಿದ್ದ. ಆತನಿಗೆ ಒಂದು ಫೋನ್ ನಂಬರ್ ಸಿಕ್ಕಿದ್ದು, ಅವರಿಗೆ ಕರೆ ಮಾಡಿ ಕೊರಿಯರ್ ಮೂಲಕ ವಿಷ ತರಿಸಿಕೊಂಡಿದ್ದಾನೆ. ಪದ್ಮಜಾ ಕುಟುಂಬದವರಿಗೆ ಅನುಮಾನ ಬಾರದಿರಲೆಂದು ಸ್ವಂತ ಊರಾದ ಪ್ರೊದ್ದುಟೂರಿನಲ್ಲಿ ತಂದೆ-ತಾಯಿಯನ್ನು ನೋಡಿ ಬರೋಣ ಎಂದು ಹೇಳಿ ಪದ್ಮಜಾಳನ್ನು ಕರೆದೊಯ್ದಿದ್ದಾನೆ. ಅಲ್ಲಿ ಪಾಲ್‌ಕೋವಾ ತಂದು ವಿಷ ಬೆರೆಸಿ ಪದ್ಮಜಾಗೆ ತಿನ್ನಿಸಿದ್ದಾನೆ. ಗಂಡ ಪ್ರೀತಿಯಿಂದ ಕೊಡುತ್ತಿದ್ದಾನೆ ಪಾಲ್‌ಕೋವಾ ತಿಂದಿದ್ದಾಳೆ. ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.

ವಿಷ ತಿಂದರೂ ಪದ್ಮಜಾ ಸಾಯಲಿಲ್ಲ. ಕಿರಣ್ ಆಕೆಯ ಮುಖದ ಮೇಲೆ ದಿಂಬಿಟ್ಟು ಉಸಿರುಗಟ್ಟಿಸಿದ್ದಾನೆ. ಕೊನೆಗೆ ಪ್ರಾಣ ಬಿಟ್ಟಿದ್ದಾಳೆ. ಹೆಂಡತಿ ಹೃದಯಾಘಾತದಿಂದ ಸತ್ತಿದ್ದಾಳೆಂದು ಎಲ್ಲರನ್ನೂ ನಂಬಿಸಲು ಪ್ರಯತ್ನಿಸಿದ್ದಾನೆ. ಕಿರಣ್ ಹೇಳಿದ ಮಾತನ್ನು ಪದ್ಮಜಾಳ ತವರು ಮನೆಯವರೂ ನಂಬಿದ್ದರು. ಪೊಲೀಸರ ಪ್ರವೇಶದಿಂದ ಸಿಕಿ ಹಾಕಿಕೊಂಡ. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿ ಪೋಸ್ಟ್‌ಮಾರ್ಟಂ ಮಾಡಿಸಿದರು. ಆಕೆಯ ದೇಹದಲ್ಲಿ ವಿಷದ ಅಂಶ ಪತ್ತೆಯಾಯಿತು. ನಂತರ ಪೊಲೀಸರು ಕಿರಣ್‌ನನ್ನು ವಿಚಾರಿಸಿದಾಗ ಬಾಯ್ಬಿಟ್ಟಿದ್ದಾನೆ. ತಾನೇ ಹೆಂಡತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಬಂಧಿಸಿದ್ದಾರೆ.

Related Posts

Leave a Reply

Your email address will not be published. Required fields are marked *