Menu

ಆರನೇ ಕ್ಲಾಸ್‌ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ

ಶಿವಮೊಗ್ಗ ನಗರದ ಬೊಮ್ಮನ ಕಟ್ಟೆ ಬಡಾವಣೆಯ ಎ- ಬ್ಲಾಕ್‌ನಲ್ಲಿ ಆರನೇ ಕ್ಲಾಸ್‌ನಲ್ಲಿ ಓದುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪೋಷಕರೊಂದಿಗೆ ವಾಸ ಮಾಡುತ್ತಿದ್ದ 12 ವರ್ಷದ ಜೀವಿತಾ ಮೃತಪಟ್ಟವಳು.

ಆಕೆ ಬೊಮ್ಮನ ಕಟ್ಟೆಯ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆ ಮುಗಿದು ರಜೆ ಇದ್ದ ಕಾರಣ ಮನೆಯಲ್ಲೇ ಒಬ್ಬಳೇ ಇದ್ದಳು. ಪೋಷಕರು ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದ ವೇಳೆ ಬಾಲಕಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಜೆ ಪೋಷಕರು ಮನೆಗೆ ಮರಳಿದಾಗ ಬೆಳಕಿಗೆ ಬಂದಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷ್ಣಾ ನದಿಯಲ್ಲಿ ಈಜಲು ಹೋದ ಬಾಲಕ ಸಾವು

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಗೆಳೆಯರೊಂದಿಗೆ ಕೃಷ್ಣಾ ನದಿಗೆ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. 14 ವರ್ಷದ ನೌಮನ್ ಡೌವ್ ಮೃತಪಟ್ಟ ಬಾಲಕ. ಕುಡಚಿ ಪಟ್ಟಣದ ಪಕ್ಕದಲ್ಲಿಯೇ ಕೃಷ್ಣಾ ನದಿ ಹರಿಯುತ್ತಿದ್ದು, ಮಧ್ಯಾಹ್ನ ಈಜಲು ಹೋಗಿದ್ದ ಬಾಲಕ ಕಣ್ಮರೆಯಾಗಿದ್ದಾನೆ.

ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ನಡೆಸಿದ ಬಳಿಕ ಬಾಲಕನ ಶವ ಸಿಕ್ಕಿದೆ. ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *