Menu

ಇರಾನ್‌ ಹಡಗುಗಳನ್ನು ಮುಳುಗಿಸುವುದೇ ಮಜಾವೆಂದ ಅಮೆರಿಕ ಸೇನೆ

donald trump

ಇರಾನ್ ಹಡಗುಗಳನ್ನು ಮುಳುಗಿಸುವುದೇ ನಮಗೆ ಮಜಾ ಎಂದು ಅಮೆರಿಕ ಸೇನೆ ಹೇಳಿಕೊಂಡಿದ್ದಾಗಿ ಡೋರಲ್‌ನಲ್ಲಿ ನಡೆದ ನ್ಯಾಷನಲ್ ರಿಪಬ್ಲಿಕನ್ ಸಭೆಯಲ್ಲಿ ಅಮೆರಿಕ ಅಧ್ಯಕ್ಷ್ಯ ಡೊನಾಲ್ಡ್‌ ಟ್ರಂಪ್‌ ಮಾಹಿತಿ ನೀಡಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ದಾಳಿಯಲ್ಲಿ ಇರಾನ್‌ನ ನೌಕಾಪಡೆಗೆ ದೊಡ್ಡ ಪ್ರಮಾಣದ ಹಾನಿಯುಂಟಾಗಿದೆ. ಅಮೆರಿಕ ನೌಕಾಪಡೆಯು ಮೂರುವರೆ ದಿನಗಳಲ್ಲಿ 46 ಇರಾನ್ ನೌಕಾಪಡೆಯ ಹಡಗುಗಳನ್ನು ಮುಳುಗಿಸಿದೆ.

ಇರಾನ್‌ನ ಹಡಗುಗಳು ಉತ್ತಮ ಗುಣಮಟ್ಟದವು, ಅವುಗಳನ್ನು ಏಕೆ ವಶಕ್ಕೆ ಪಡೆದು ಬಳಸಬಾರದು, ಅವುಗಳನ್ನು ನಾವು ಬಳಸಬಹುದಿತ್ತು, ಏಕೆ ಮುಳುಗಿಸಿದ್ದೀರಿ ಎಂದು ನಾನು ಕೇಳಿದೆ. ಸೈನಿಕರು ಅದಕ್ಕೆ, ಅವುಗಳನ್ನು ಮುಳುಗಿಸುವುದೇ ಹೆಚ್ಚು ಮಜಾ ಕೊಡುತ್ತದೆ ಎಂದು ಉತ್ತರಿಸಿದ್ದಾಗಿ ಟ್ರಂಪ್ ತಿಳಿಸಿದ್ದಾರೆ.

ಸೈನಿಕರು ಇರಾನ್‌ ಹಡಗುಗಳನ್ನು ಮುಳುಗಿಸುವುದನ್ನೇ ಇಷ್ಟಪಡುತ್ತಾರೆ. ಅದು ಹೆಚ್ಚು ಸುರಕ್ಷಿತ ಎಂದು ಹೇಳುತ್ತಾರೆ. ಬಹುಶಃ ಅದು ಸರಿಯೇ ಇರಬಹುದು ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್‌ನ ಡ್ರೋನ್ ಮತ್ತು ಕ್ಷಿಪಣಿ ಸಾಮರ್ಥ್ಯವೂ ಸಂಪೂರ್ಣವಾಗಿ ನಾಶವಾಗುತ್ತಿದೆ. ಇರಾನ್ ಸೇನೆಗೆ ಸಂಪೂರ್ಣವಾಗಿ ಸೋಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಯುದ್ಧ ನಿಲ್ಲಿಸುವುದು ಅಮೆರಿಕದ ನಿರ್ಧಾರವಲ್ಲ, ಅದು ನಮ್ಮ ನಿರ್ಧಾರ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ತಿರುಗೇಟು ನೀಡಿದೆ.
ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬ ಟ್ರಂಪ್‌ ಹೇಳಿಕೆಗೆ ಐಆರ್‌ಜಿಸಿ ಪಡೆ ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಮುಂದುವರಿದರೆ ಈ ಪ್ರದೇಶದಿಂದ ತೈಲ ರಫ್ತು ಮಾಡಲು ಇರಾನ್ ಅನುಮತಿಸುವುದಿಲ್ಲ ಎಂದು ಐಆರ್‌ಜಿಸಿ ಎಚ್ಚರಿಕೆ ನೀಡಿದೆ.

Related Posts

Leave a Reply

Your email address will not be published. Required fields are marked *