Menu

ಕರ್ನಾಟಕ ಬಜೆಟ್ 2026: ಶಕ್ತಿಗೆ 5,300 ಕೋಟಿ ರೂ., ಗೃಹಲಕ್ಷ್ಮೀಗೆ 28,608 ಕೋಟಿ ರೂ. ಇಂದಿರಾ ಕಿಟ್‌ಗೆ 6,200 ಕೋಟಿ ರೂ.

ಶಕ್ತಿ ಯೋಜನೆಗೆ ಈ ವರ್ಷ ಬಜೆಟ್‌ನಲ್ಲಿ 5,300 ಕೋಟಿ ಮೀಸಲಿಟ್ಟಿರುವುದಾಗ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ 28,608 ಕೋಟಿ ರೂ. ಮೀಸಲಿಡಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗಾಗಿ 100 ಸಂಖ್ಯಾ ಬಲದ ಎರಡು ಮಹಿಳಾ ವೃದ್ದಾಶ್ರಮ ಪ್ರಾರಂಭ. ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ 5000 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಗೆ ತಲಾ 50 ಸಾವಿರ ರೂ. ನೀಡಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರುಗಳಿಗೆ 90 ದಿನಗಳ ಮಾತೃತ್ವ ರಜೆಯ ಸೌಲಭ್ಯವನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ಜಾರಿ ಘೋಷಣೆಯಾಗಿದೆ.

ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಇಂದಿರಾ ಕಿಟ್ ವಿತರಣೆಗೆ 2026- 27ನೇ ಸಾಲಿನಲ್ಲಿ 6,200 ಕೋಟಿ ನೀಡಲಾಗುವುದು, ಬೆಂಗಳೂರಿನಲ್ಲಿ ಎರಡು ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್​, ಧಾರವಾಡದಲ್ಲಿ 4 ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್, ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿಯಲ್ಲಿ ಬಿಸಿಯೂಟ, ಮನೆಗಳಿಗೆ ನೀಡಲಾಗುತ್ತಿದ್ದ ಪಡಿತರ ರದ್ದು ಮಾಡಿ ಈ ಕ್ರಮ ಪ್ರಕಟ.

ಜಿಲ್ಲೆಗಳಲ್ಲಿ ‘ಅಕ್ಕ ಪಡೆ’ ಯೋಜನೆ ಜಾರಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಸಮವಸ್ತ್ರ, ಧನಶ್ರೀ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹ ಧನ 30 ಸಾವಿರ ರೂಪಾಯಿಯಿಂದ 45 ಸಾವಿರ ರೂ.ಗೆ ಹೆಚ್ಚಳ ,
ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ, ಉದ್ಯೋಗಸ್ಥ ಎಸ್​ಸಿ-ಎಸ್​ಟಿ ಮಹಿಳೆಯರಿಗೆ ಹಾಸ್ಟೆಲ್​, ಮೈಸೂರು, ಬೆಂಗಳೂರು, ಮಂಗಳೂರು ಬೆಳಗಾವಿಯಲ್ಲಿ ಹಾಸ್ಟೆಲ್, ರಾಜ್ಯದ 9 ಜಿಲ್ಲೆಗಳಲ್ಲಿ 50 ಒಬಿಸಿ ಹಾಸ್ಟೆಲ್​ ನಿರ್ಮಾಣ ಘೋಷಣೆ.

ರೈತರಿಗೆ ಹಸು, ಹೆಮ್ಮೆ ಖರೀದಿಸಲು 40 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಸಿಎಂ ಪ್ರಕಟಿಸಿದರು.  ಮೈಸೂರನ್ನು ರಾಜ್ಯದ ಎರಡನೇ ಐಟಿ ಸಿಟಿಯಾಗಿ ನಿರ್ಮಾಣ ಮಾಡಲು ಈ ಬಾರಿ ಬಜೆಟ್​​ನಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *