Saturday, September 12, 2026
Menu

ಇರಾನ್‌ ಪ್ರತಿದಾಳಿಯಲ್ಲಿ ಅಮೆರಿಕದ 560 ಸೈನಿಕರ ಸಾವು?

ಅಮೆರಿಕದ ವಿರುದ್ಧ ನಡೆಸಿದ ಪ್ರತಿದಾಳಿಯ ಭಾಗವಾಗಿ ಆ ದೇಶದ ಮಿಲಿಟರಿ ನೆಲೆಗಳ ಮೇಲೆ ಎರಡು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದ್ದು, ಅಮೆರಿಕದ 560 ಸೈನಿಕರು ಹತರಾಗಿರುವುದಾಗಿ ಎಂದು ಇರಾನ್‌ ಹೇಳಿದೆ.

ಕುವೈತ್‌ನಲ್ಲಿರುವ ಅಮೆರಿಕ ನೆಲೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಬಹ್ರೇನ್‌ನಲ್ಲಿರುವ ಅಮೆರಿಕದ ನೆಲೆಯೂ ಡ್ರೋನ್‌ ದಾಳಿಯಲ್ಲಿ ಧ್ವಂಸಗೊಂಡಿದೆ. ಅಮೆರಿಕದ ವಿಮಾನವಾಹಕ ನೌಕೆ ಅಬ್ರಹಾಂ ಲಿಂಕನ್‌ ಮೇಲೆ ನಾಲ್ಕು ಕ್ಷಿಪಣಿಗಳ ದಾಳಿ ನಡೆಸಲಾಯಿತು. ಎಲ್ಲ ದಾಳಿಗಳಲ್ಲಿ ಅಮೆರಿಕದ 560 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆಂದು ಇರಾನ್‌ ಪ್ರಕಟಿಸಿದೆ.

ಆದರೆ ಅಮೆರಿಕದ ಸೆಂಟ್ರಲ್ ಕಮಾಂಡ್‌ನ ಘೋಷಣೆ ಪ್ರಕಾರ, ಮೂರು ಅಮೆರಿಕದ ಸೈನಿಕರು ಮೃತಪಟ್ಟಿದ್ದು, ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಲ್ಕು ಖಂಡಾಂತರ ಕ್ಷಿಪಣಿಗಳಿಂದ ಲಿಂಕನ್ ಅನ್ನು ಹೊಡೆದಿರುವುದಾಗಿ ಇರಾನ್‌ ಹೇಳಿಕೊಂಡರೆ, ಯುಎಸ್ ಸೇನೆಯು ‘ಇರಾನ್‌ನ ಕ್ಷಿಪಣಿಗಳು ಹತ್ತಿರ ಬರಲಿಲ್ಲ’ ಎಂದು ಹೇಳಿದೆ.

ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿಲಿಟರಿ ಸೌಲಭ್ಯಗಳ ಮೇಲೆ ದಾಳಿ ನಡೆಸುತ್ತಿರುವುದಾಗಿ ಇರಾನ್ ಹೇಳಿದ್ದು, ಈ ದಾಳಿಯಲ್ಲಿ ವಿಮಾನ ನಿಲ್ದಾಣಗಳು, ಹೋಟೆಲ್‌ಗಳು ಮತ್ತು ವಸತಿ ವಲಯಗಳಂತಹ ನಾಗರಿಕ ಪ್ರದೇಶಗಳು ಹಾನಿಗೊಳಗಾಗಿವೆ. ಅಮೆರಿಕದ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೇವೆ ಎಂಬ ಇರಾನ್‌ನ ಹೇಳಿಕೆ ಸುಳ್ಳು. ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆದಿದೆ. 12 ಕ್ಕೂ ಹೆಚ್ಚು ಪ್ರದೇಶಗಳ ಮೇಲೆ ದಾಳಿ ಮಾಡಿದೆ ಎಂದು ಅಮೆರಿಕದ ಕೇಂದ್ರೀಯ ಕಮಾಂಡ್ ಹೇಳಿದೆ.

Related Posts

Leave a Reply

Your email address will not be published. Required fields are marked *