Saturday, February 28, 2026
Menu

ಇರಾನ್‌-ಇಸ್ರೇಲ್‌ ಸಂಘರ್ಷ ತೀವ್ರ: ಇರಾನ್‌ ಶಾಲೆ ಮೇಲಿನ ದಾಳಿಗೆ ಐವರು ಬಲಿ

ಇರಾನ್ ಹಾಗೂ ಇಸ್ರೇಲ್ ಕದನ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಮೆರಿಕ ದಾಳಿ ಬೆನ್ನಲ್ಲೇ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದರಿಂದ ಇರಾನ್‌ನ ಪ್ರಾಥಮಿಕ ಶಾಲೆಯೊಂದು ಧ್ವಂಸಗೊಂಡು ಐವರು ಮೃತಪಟ್ಟಿದ್ದಾರೆ.

ಅಮೆರಿಕ ಆರಂಭಿಸಿದ ಯುದ್ಧದಲ್ಲಿ ಇಸ್ರೇಲ್ ಕೂಡ ಕೈ ಜೋಡಿಸಿದ್ದು, ಪರಿಸ್ಥಿತಿ ವಿಷಮಿಸುತ್ತಿದೆ. ಇರಾನ್ ನಾಯಕ ಖಮಿನೇನಿ ನಿವಾಸದ ಮೇಲೆ ಕ್ಷಿಪಣಿ ದಾಳಿಯಾಗಿದೆ. ಖಮಿನೇನಿ ಟೆಹರಾನ್ ತೊರೆದು ರಹಸ್ಯ ಸ್ಥಳದಲ್ಲಿದ್ದಾರೆ. ಇರಾನ್‌ನ ಪ್ರಾಥಮಿಕ ಶಾಲೆ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿಯಾಗುತ್ತಿದ್ದಂತೆ ಶಾಲೆಯ ಭಾಗ ಧ್ವಂಸಗೊಂಡಿದೆ. ದಾಳಿಯಲ್ಲಿ ಮೃತಪಟ್ಟವರ ಮಾಹಿತಿ ಲಭ್ಯವಾಗಿಲ್ಲ. ಇರಾನ್‌ನಲ್ಲಿ ಕಳೆದೆರಡು ದಿನಗಳಿಂದ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.

ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಗೆ ಕೆರಳಿರುವ ಇರಾನ್, ಇದೀಗ ಪ್ರತಿಯಾಗಿ ಅಮೆರಿಕ ಮೇಲೆ ದಾಳಿ ನಡೆಸುವುದು ಅಸಾಧ್ಯ. ಅಬುದಾಬಿ, ಬಹ್ರೈನ್ ಸೇರಿದಂತೆ ಮಧ್ಯ ಪ್ರಾಚ್ಯ ಹಾಗೂ ಮಧ್ಯ ಏಷ್ಯಾಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ. ಅಮೆರಿಕದ ಹಲವು ಸೇನಾ ನೆಲೆಗಳನ್ನು ಧ್ವಂಸಗೊಳಿಸಿದೆ. ಮಧ್ಯ ಏಷ್ಯಾದಲ್ಲಿ ಯುದ್ಧ ಭೀತಿ ಎದುರಾಗಿದೆ. ಮಧ್ಯ ಏಷ್ಯಾ ದೇಶಗಳಲ್ಲಿ ಅತಿ ಹೆಚ್ಚು ಭಾರತೀಯರು ನೆಲೆಸಿದ್ದಾರೆ.

ಇರಾನ್ ಮಧ್ಯ ಏಷ್ಯಾಗಳ ಮೇಲೆ ನಡೆಸಿದ ದಾಳಿಯನ್ನು ಯುರೋಪ್‌ ಒಕ್ಕೂಟ ಖಂಡಿಸಿದೆ.ಭಾರತೀಯ ನಾಗರಿಕರಿಗೆ ಇರಾನ್, ಅಬುದಾಬಿ ಸೇರಿದಂತೆ ಹಲವು ದೇಶಗಳ ರಾಯಭಾರಿ ಕಚೇರಿಯು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ.
ನ್ನ ವಾಯುಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಎರಡು ಖಂಡಾಂತರ ಕ್ಷಿಪಣಿಗಳನ್ನು ಜೋರ್ಡಾನ್ ಹೊಡೆದುರುಳಿಸಿದೆ. ಅದು ಯಾವ ದೇಶದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್ ಕ್ಷಿಪಣಿಗಳ ದಾಳಿ ಬಳಿಕ ಕೊಲ್ಲಿ ರಾಷ್ಟ್ರಗಳು ತಮ್ಮ ವಾಯುಗಡಿಯನ್ನು ಬಂದ್‌ ಮಾಡಿವೆ.

ಕತಾರ್‌ನ ದೋಹಾದಲ್ಲಿರುವ ಅಮೆರಿಕೆಯ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿತ್ತು. ಇರಾನ್‌ನ ಹಲವು ಕ್ಷಿಪಣಿಗಳನ್ನು ಕತಾರ್ ಹೊಡೆದುರುಳಿಸಿದ್ದು, ಬಹುತೇಕ ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ಕತಾರ್ ಅಧಿಕೃತ ಹೇಳಿಕೆ ನೀಡಿದೆ. ಎಲ್ಲಾ ಕ್ಷಿಪಣಿಗಳನ್ನು ಭೂಮಿ ತಲುಪುವ ಮೊದಲು ತಡೆಹಿಡಿಯಲಾಗಿದೆ ಎಂದು ಕತಾರ್ ರಕ್ಷಣಾ ಸಚಿವಾಲಯ ತಿಳಿಸಿದೆ.

Related Posts

Leave a Reply

Your email address will not be published. Required fields are marked *