Menu

56 ಸಾವಿರ ಖಾಲಿ ಹುದ್ದೆ ಭರ್ತಿಗೆ ಸಚಿವ ಸಂಪುಟ ಒಪ್ಪಿಗೆ

ಮೀಸಲಾತಿ ಮಿತಿ 50% ಮೀರದಂತೆ ಒಳಮೀಸಲಾತಿಯೊಂದಿಗೆ ರಾಜ್ಯದ ನಾನಾ ಇಲಾಖೆಗಳ 56 ಸಾವಿರ ಖಾಲಿ ಹುದ್ದೆ ಭರ್ತಿಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಉದ್ಯೋಗ ನೇಮಕಾತಿ ಸಂಬಂಧ ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ನೇಮಕಾತಿ ಪ್ರಕ್ರಿಯೆಗೆ ಇರುವ ಸಾಧಕ ಭಾಧಕಗಳ ಬಗ್ಗೆ ಚರ್ಚಿಸಿದ್ದು, ಮೀಸಲಾತಿ ಮಿತಿ 50% ಮೀರದಂತೆ ಒಳಮೀಸಲಾತಿಯೊಂದಿಗೆ ನೇಮಕಾತಿ ನಡೆಸಲು ಸರ್ಕಾರ ತೀರ್ಮಾನಿಸಿದೆ.

ಧಾರವಾಡದಲ್ಲಿ ದ್ಯೋಗಾಕಾಂಕ್ಷಿಗಳು ನಡೆಸಿದ ಪ್ರತಿಭಟನೆಯನ್ನು ಸಿದ್ದರಾಮಯ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರದ ಈ ಕ್ರಮದಿಂದ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ.

ರಾಜ್ಯ ಸರ್ಕಾರವು ಮೀಸಲಾತಿ ಮಿತಿ 50% ಮೀರದಂತೆ ಒಳಮೀಸಲಾತಿಯೊಂದಿಗೆ ಇಲಾಖೆಗಳ 56 ಸಾವಿರ ಖಾಲಿ ಹುದ್ದೆ ನೇಮಕಕ್ಕೆ ತೀರ್ಮಾನಿಸಿದ್ದು, 15% ಎಸ್ಸಿ ಮೀಸಲಾತಿಗೆ ಒಳಮೀಸಲು ನೀಡಲು ಮುಂದಾಗಿದೆ. ಎಸ್‌ಸಿ ಒಳಮೀಸಲಾತಿ 17% ನೇಮಕಾತಿ ತಕ್ಷಣಕ್ಕೆ ಅಸಾಧ್ಯ. 17% ಎಸ್ಸಿ ಮೀಸಲಾತಿ ಜಾರಿಗೆ ಕಾನೂನು ಹೋರಾಟಕ್ಕೆ ಸರ್ಕಾರ ಮುಂದಾಗಬೇಕು. ರಾಜ್ಯಪಾಲರು ಒಳ ಮೀಸಲಾತಿ ಮಸೂದೆಗೆ ಒಪ್ಪಿಗೆ ಕೊಟ್ಟಿದ್ದರೂ ಕಾನೂನು ಸಂಘರ್ಷ ಮುಂದುವರಿಸಬೇಕಿದೆ. ಹೀಗಾಗಿ ಹಿಂದಿನಂತೆ 15% ಎಸ್ಸಿ, 3% ಎಸ್ಟಿ ಮೀಸಲಾತಿಯೋಂದಿಗೆ ನೇಮಕಾತಿಗೆ ತೀರ್ಮಾನಿಸಿದೆ.

ಖಾಲಿ ಇರುವ ಎರಡೂವರೆ ಲಕ್ಷ ಉದ್ಯೋಗ ಭರ್ತಿಗೆ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಒಳ ಮೀಸಲಾತಿ ಬಿಲ್‌ಗೂ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಬಗ್ಗೆಯೂ ಕ್ಯಾಬಿನೆಟ್‌ನಲ್ಲಿ ಚರ್ಚಿಸಲಾಗಿದೆ.

Related Posts

Leave a Reply

Your email address will not be published. Required fields are marked *