Menu

ನಂದಿನಿಗೆ ಸುಧಾ ರಾಣಿ ಪ್ರಚಾರ ರಾಯಭಾರಿ

ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ನಟಿ ಶ್ರೀಮತಿ ಸುಧಾ ರಾಣಿ ಆಯ್ಕೆಯಾಗಿದ್ದು, ಬಮೂಲ್‌ ಕುಟುಂಬಕ್ಕೆ ಅವರನ್ನು ಪ್ರೀತಿಯಿಂದ ಸ್ವಾಗತಿಸುವುದಾಗಿ ಬಮೂಲ್‌ ಅಧ್ಯಕ್ಷ ಡಿಕೆ ಸುರೇಶ್‌ ಹೇಳಿದ್ದಾರೆ.

ನಂಬಿಕೆಯ ಮೇಲೆ ನಿರ್ಮಿತವಾದ ನಂದಿನಿಯು ರೈತರ ಮೇಲಿನ ಬದ್ಧತೆ, ಶುದ್ಧ ಹಾಗೂ ಗುಣಮಟ್ಟದ ಪೌಷ್ಟಿಕ ಆಹಾರದೊಂದಿಗೆ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ತಿಳಿಸಿದ್ದಾರೆ.

ಬಹುಭಾಷಾ ನಟಿ ತಮನ್ನಾ ಭಾಟಿಯಾ ಮೈಸೂರು ಸ್ಯಾಂಡಲ್​ ಸೋಪ್​​ಗೆ ಪ್ರಚಾರ ರಾಯಭಾರಿಯಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳವಾರ ಭಾಗಿಯಾದರು. ಹೊಸ ರೂಪದ ಸೋಪನ್ನು ಬಿಡುಗಡೆ ಮಾಡಿದರು. ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲೇ ಹೇಳುವ ಮೂಲಕ ತಮನ್ನಾ ಮಾತು ಆರಂಭಿಸಿ, ಇಂಗ್ಲಿಷ್​​ನಲ್ಲಿ ಮುಂದುವರಿಸಿದರು.

ನನಗೆ ಇದು ತುಂಬಾ ದೊಡ್ಡ ಗೌರವ ಹಾಗೂ ಹೆಮ್ಮೆ. ಕೆಸ್‌ಡಿಎಲ್‌ ಕುಟುಂಬದಲ್ಲಿ ನಾನೂ ಒಬ್ಬಳಾಗಿದ್ದೇನೆ. ಎಷ್ಟೇ ಸೋಪ್​​ಗಳು ಮಾರುಕಟ್ಟೆಗೆ ಬಂದರೂ ಮೈಸೂರ್ ಸ್ಯಾಂಡಲ್​ ಸೋಪ್ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದೆ. ನಾನು ತುಂಬಾ ಅದೃಷ್ಟವಂತೆ. ಮೈಸೂರ್ ಸ್ಯಾಂಡಲ್​ ಸೋಪಿಗೆ ರಾಯಭಾರಿ ಆಗಿದ್ದೇನೆ’ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *