Thursday, February 05, 2026
Menu

ನೈಜೀರಿಯಾದಲ್ಲಿ ಕಟ್ಟಿ ಹಾಕಿ 162 ಮಂದಿಯ ಬಲಿ ಪಡೆದ ಉಗ್ರರು, ಮನೆಗಳು ಭಸ್ಮ

ಪಶ್ಚಿಮ ನೈಜೀರಿಯಾದ ಎರಡು ಹಳ್ಳಿಗಳಲ್ಲಿ ಇಸ್ಲಾಮಿಕ್ ಉಗ್ರರು ಜನರನ್ನು ಕಟ್ಟಿಹಾಕಿ 162 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಮನೆಗಳನ್ನು ಸುಟ್ಟು ಭಸ್ಮ ಮಾಡಿದ್ದು, ಅಂಗಡಿಗಳನ್ನು ಲೂಟಿ ಮಾಡಿದ್ದಾರೆ.

ಕ್ವಾರಾ ರಾಜ್ಯದ ವೊರೊ ಮತ್ತು ನುಕು ಗ್ರಾಮಗಳನ್ನು ಗುರಿಯಾಗಿಸಿಕೊಂಡು ಈ ಭೀಕರ ದಾಳಿಗಳು ನಡೆದಿವೆ. ಇಸ್ಲಾಮಿಕ್ ಸ್ಟೇಟ್ ಗುಂಪಿಗೆ ಸಂಬಂಧಿಸಿದ ಸಶಸ್ತ್ರ ಗುಂಪು ಲಕುರಾವಾ ಈ ದಾಳಿಗಳನ್ನು ನಡೆಸಿದೆ ಎಂದು ಹೇಳಲಾಗಿದ್ದು, ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

ಸ್ಥಳೀಯ ದೂರದರ್ಶನದಲ್ಲಿ ದಾಳಿಯ ಭೀಕರ ದೃಶ್ಯಗಳು ಪ್ರಸಾರ ಆಗಿವೆ, ರಕ್ತಸಿಕ್ತ ದೇಹಗಳು ನೆಲದ ಮೇಲೆ ಬಿದ್ದಿರುವುದು, ಕೆಲವರ ಕೈಗಳನ್ನು ಕಟ್ಟಿಹಾಕಿರುವುದು, ಮನೆಗಳು ಬೆಂಕಿಗೆ ಆಹುತಿ ಯಾಗುತ್ತಿರುವುದು ಕಾಣಿಸಿವೆ. ನೈಜೀರಿಯಾ ಗಂಭೀರ ಭದ್ರತಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈಶಾನ್ಯದಲ್ಲಿ ಇಸ್ಲಾಮಿಕ್‌ ಉಗ್ರರ ದಂಗೆ, ವಾಯುವ್ಯ ಮತ್ತು ಉತ್ತರ-ಮಧ್ಯ ಪ್ರದೇಶಗಳಲ್ಲಿ ಬಂದೂಕು ಧಾರಿಗಳಿಂದ ಸುಲಿ, ಅಪಹರಣ ಕೃತ್ಯಗಳು ಹೆಚ್ಚುತ್ತಿವೆ.

ಕಟ್ಸಿನಾದ ಡೋಮಾ ಗ್ರಾಮದಲ್ಲಿ ಬಂಧೂಕುಧಾರಿಗಳು 13 ಜನರನ್ನು ಕೊಂದಿದ್ದಾರೆ ಎಂದು ಪೊಲೀಸ್ ವಕ್ತಾರ ಅಬುಬಕರ್ ಸಾದಿಕ್ ಅಲಿಯು ಹೇಳಿದ್ದಾರೆ. ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ .ಸೇನಾ ನೆಲೆಯ ಮೇಲೆ ನಡೆದ ಪ್ರತ್ಯೇಕ ದಾಳಿಗಳಲ್ಲಿ ಉಗ್ರರು ಕನಿಷ್ಠ 36 ಜನರ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *