Wednesday, February 04, 2026
Menu

ಅಮೆರಿಕದಲ್ಲಿ 500 ಶತಕೋಟಿ ಡಾಲರ್ ಹೂಡಿಕೆಗೆ ಭಾರತ ಬದ್ಧ: ಕ್ಯಾರೋಲಿನ್ ಲೀವಿಟ್

ಭಾರತದೊಂದಿಗಿನ ಹೊಸ ವ್ಯಾಪಾರ ಒಪ್ಪಂದದ ಬಳಿಕ ಸಾರಿಗೆ, ಇಂಧನ ಮತ್ತು ಕೃಷಿ ಕ್ಷೇತ್ರಗಳನ್ನು ಒಳಗೊಂಡಂತೆ ಅಮೆರಿಕದಲ್ಲಿ 500 ಶತಕೋಟಿ ಡಾಲರ್ ಹೂಡಿಕೆ ಮಾಡಲು ಹಾಗೂ ರಷ್ಯಾದಿಂದ ತೈಲ ಖರೀದಿಸದಿರಲು ಭಾರತ ಬದ್ಧವಾಗಿದೆ ಎಂದು ವೈಟ್‌ ಹೌಸ್‌ ಪ್ರೆಸ್‌ ಸೆಕ್ರಟರಿ ಕ್ಯಾರೋಲಿನ್ ಲೀವಿಟ್ ಹೇಳಿಕೆ ನೀಡಿದ್ದಾರೆ.

ಅಧ್ಯಕ್ಷ ಟ್ರಂಪ್‌ ಭಾರತದೊಂದಿಗೆ ಮತ್ತೊಂದು ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಂಡರು. ಭಾರತದ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತವು ರಷ್ಯಾದ ತೈಲವನ್ನು ಖರೀದಿಸದಿರಲು ಮತ್ತು ಅಮೆರಿಕ ಮತ್ತು ವೆನೆಜುವೆಲಾದಿಂದ ತೈಲವನ್ನು ಖರೀದಿಸಲು ಬದ್ಧವಾಗಿದೆ. ಇದರಿಂದ ಅಮೆರಿಕದ ಜನರಿಗೆ ನೇರ ಪ್ರಯೋಜನ ಸಿಗುತ್ತದೆ ಎಂದು ಹೇಳಿದ್ದಾರೆ.

ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ಲೀವಿಟ್, ಇಬ್ಬರು ನಾಯಕರು ಉತ್ತಮ ಮಾತುಕತೆ ನಡೆಸಿದ ಬಳಿಕ ದ್ವಿಪಕ್ಷೀಯ ಒಪ್ಪಂದವನ್ನು ಘೋಷಿಸಲಾಯಿತು. ಅಧ್ಯಕ್ಷರು ಪ್ರಧಾನಿ ಮೋದಿ ಮತ್ತು ಭಾರತದ ಬಗ್ಗೆ ಆಳವಾದ ಗೌರವ ಹೊಂದಿದ್ದಾರೆ ಎಂದು ತಿಳಿಸಿದರು.

ಡೊನಾಲ್ಡ್ ಟ್ರಂಪ್ ಮತ್ತು ಅವರ ರಾಷ್ಟ್ರೀಯ ಭದ್ರತಾ ತಂಡವು ವೆನೆಜುವೆಲಾದ ತೈಲ ವಾಣಿಜ್ಯ ಮತ್ತು ಮಾರಾಟವನ್ನು ಈಗ ನಿರ್ದೇಶಿಸುತ್ತಿದೆ. ಭಾರತದ ಮೇಲಿನ ಅಮೆರಿಕದ ಸುಂಕವು ಶೇಕಡಾ 18ಕ್ಕೆ ಇಳಿಸಲಾಗಿದೆ. ಭಾರತಕ್ಕೆ ಅಮೆರಿಕದ ರಫ್ತುಗಳಿಗೆ ಸುಂಕ ಇರುವುದಿಲ್ಲ ಎಂದು ಲೀವಿಟ್ ಹೇಳಿದರು. ಇದು ಅಮೆರಿಕದ ಕಾರ್ಮಿಕರು, ವ್ಯವಹಾರಗಳು ಮತ್ತು ಗ್ರಾಹಕರಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದರು.

Related Posts

Leave a Reply

Your email address will not be published. Required fields are marked *