ಆನ್‌ಲೈನ್ ಗೇಮ್ ಆಡಬೇಡಿ, ಶಾಲೆ, ಓದಿನ ಕಡೆ ಗಮನಕೊಡಿ ಎಂದು ಮನೆಯಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಿ ಗದರಿದಕ್ಕೆ ಮೂವರು ಸೋದರಿಯರು ಅಪಾರ್ಟ್‌ಮೆಂಟ್‌ನ ಒಂಬತ್ತನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವ ದಾರುಣ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಪಖಿ (12), ಪ್ರಾಚಿ (14) ಮತ್ತು ವಿಶಿಕಾ (16) ಮೂವರೂ ಸೋದರಿಯರು ಆನ್‌ಲೈನ್ ಗೇಮಿಂಗ್ ವ್ಯಸನಕ್ಕೆ ಗುರಿಯಾಗಿದ್ದರು. ಪೋಷಕರುಆನ್‌ಲೈನ್ ಗೇಮ್ ಆಡಬೇಡಿ ಎಂದು ಬೈದಿದ್ದಕ್ಕೆ ಸಿಟ್ಟಾದ ಮೂವಊ ಅಪಾರ್ಟ್‌ಮೆಂಟ್ ಕಟ್ಟಡದ ಒಂಬತ್ತನೇ ಮಹಡಿಯಿಂದ ಜಿಗಿದಿದ್ದಾರೆ.
ಮೂವರು ಸಹೋದರಿಯರು ಸ್ನಾನ, ತಿನ್ನುವುದು, ಶಾಲೆಗೆ ಹೋಗುವುದು, ಮಲಗುವುದು ಮತ್ತು ಇತರ ದಿನನಿತ್ಯದ ಚಟುವಟಿಕೆ ಒಳಗೊಂಡಂತೆ ಎಲ್ಲವನ್ನೂ ಒಟ್ಟಿಗೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಅವರ ಕೈಗೆ ಮೊಬೈಲ್ ಸಿಕ್ಕಿದ ಬಳಿಕ ಆನ್‌ಲೈನ್ ಆಟಗಳ ಚಟಕ್ಕೆ ಬಿದ್ದಿದ್ದರು. ಆನ್‌ಲೈನ್ ಟಾಸ್ಕ್ ಆಧಾರಿತ ‘ಕೊರಿಯನ್ ಲವ್ ಗೇಮ್’ ಹೆಚ್ಚು ಆಡುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಸಾವುಗಳಿಗೆ ಸಂಬಂಧಿಸಿದಂತೆ ಬೇರೆ ಆಯಾಮಗಳಲ್ಲೂ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


