Wednesday, February 04, 2026
Menu

ಅಪರಿಚಿತರಿಂದ ಮುಅಮ್ಮರ್ ಗಡಾಫಿಯ ಪುತ್ರ ಸೈಪ್‌ಗೆ ಗುಂಡಿಕ್ಕಿ ಹತ್ಯೆ

ಲಿಬಿಯಾದ ಮಾಜಿ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯ ಪುತ್ರ ಸೈಫ್ ಅಲ್-ಇಸ್ಲಾಂರನ್ನು ಅಪರಿಚಿತ ಬಂದೂಕುಧಾರಿಗಳು ಜಿಂಟಾನ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 2021ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಯತ್ನಿಸಿದ್ದ ಸೈಪ್‌ಗೆ ತೀವ್ರ ವಿರೋಧ ಎದುರಾಗಿತ್ತು.

53 ವರ್ಷದ ಸೈಫ್ ತಮ್ಮ ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ತಂದೆಯ ಆಡಳಿತದಲ್ಲಿ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿ ಸೈಫ್‌ ಗುರುತಿಸಿಕೊಂಡಿದ್ದರು.  ಸೈಫ್ ಅವರ ವಕೀಲ ಖಲೀದ್ ಅಲ್-ಝೈದಿ ಮತ್ತು ರಾಜಕೀಯ ಪ್ರತಿನಿಧಿಗಳು ವಾಯುವ್ಯ ಲಿಬಿಯಾದ ಜಿಂಟಾನ್ ನಗರದಲ್ಲಿರುವ ಅವರ ಮನೆಯಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ದೃಢಪಡಿಸಿದ್ದಾಗಿ ಲಿಬಿಯಾದ ಮಾಧ್ಯಮ ವರದಿಗಳು ಹೇಳಿವೆ.

ಅವರ ರಾಜಕೀಯ ತಂಡದ ಮಾಹಿತಿ ಪ್ರಕಾರ, ನಾಲ್ವರು ಮುಸುಕುಧಾರಿ ಬಂದೂಕುಧಾರಿಗಳುವಾಸಕ್ಕೆ ಪ್ರವೇಶಿಸಿ, ಭದ್ರತಾ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿ ಗುಂಡು ಹಾರಿಸಿದ್ದಾರೆ. ಲಿಬಿಯಾದ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ. ದಾಳಿಕೋರರು ಕಮಾಂಡೋ ಘಟಕದವರೆಂದು ಹೇಳಲಾಗುತ್ತಿದೆ.

ಜೂನ್ 1972 ರಲ್ಲಿ ಟ್ರಿಪೋಲಿಯಲ್ಲಿ ಜನಿಸಿದ ಸೈಫ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪಿಎಚ್‌ಡಿ ಪದವಿ ಪಡೆದಿದ್ದರು. ನಾಲ್ಕು ದಶಕ ಅಧಿಕಾರದ ನಂತರ 2011 ರಲ್ಲಿ ನ್ಯಾಟೋ ಬೆಂಬಲಿತ ದಂಗೆಯಲ್ಲಿ ಮೊಅಮ್ಮರ್ ಗಡಾಫಿ ಅವರನ್ನು ಪದಚ್ಯುತಗೊಳಿಸಲಾಗಿತ್ತು. ಅದೇ ವರ್ಷ ದೇಶದಲ್ಲಿ ಸಂಘರ್ಷ ಉಲ್ಬಣಿಸಿದ್ದಾಗ ಅವರ ಕೊಲೆಯಾಗಿತ್ತು.

Related Posts

Leave a Reply

Your email address will not be published. Required fields are marked *