ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಕಮಲಾಕರ ಭಟ್ ಗುರೂಜಿ ಶಿವಮೊಗ್ಗದ ಮಹಿಳೆ ಜೊತೆ ಅಕ್ರಮ ಸಂಬಂಧ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ.
ಮಹಿಳೆಯ ಪತಿ ದೂರು ನೀಡಿದ ಕಾರಣಕ್ಕೆ ಮಹಿಳೆ, ಗುರೂಜಿ ಹಾಗೂ ಇತರರು ಸೇರಿ ಮೂವರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಗುರೂಜಿ ಜೊತೆ ಮಹಿಳೆಯ ಅನೈತಿಕ ಸಂಬಂಧದ ಬಗ್ಗೆ ದೂರು ನೀಡಿದ್ದಕ್ಕೆ ದಾಳಿ ನಡೆಸಲಾಗಿದೆ ಎನ್ನಲಾದೆ.
ಶಿವಮೊಗ್ಗದ ಸುಚಿತ್ರಾ ಎಂಬ ಮಹಿಳೆ ಕಮಲಾಕರ ಭಟ್ ಗುರೂಜಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು. ಕಮಲಾಕರ ಸಿದ್ದಾಪುರ ಹೆಮ್ಮನಬೈಲ್ ಗ್ರಾಮದವರು. ಸ್ವಾಮೀಜಿ ಜೊತೆ ತಾಯಿಯ ಅಕ್ರಮ ಸಂಬಂಧದ ವಿಚಾರ ಸುಚಿತ್ರಾ ಪುತ್ರಿಗೆ ಗೊತ್ತಾಗಿದ್ದು, ವಿಚಾರವನ್ನು ತಂದೆ ಮಹೇಶ್ ನಾಯ್ಕಗೆ ತಿಳಿಸಿದ್ದಳು. ಈ ವಿಚಾರವಾಗಿ ಮಹೇಶ್ ನಾಯ್ಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಇದನ್ನು ತಿಳಿದ ಕಮಲಾಕರ್ ಗುರೂಜಿ, ಸುಚಿತ್ರಾ, ಸುಚಿತ್ರಾ ತಂದೆ ಲೋಕನಾಥ್ ಮತ್ತು ಸಹಚರ ಹಲ್ಲೆ ನಡೆಸಿದ್ದಾರೆ. ಸುಚಿತ್ರಾ ಪತಿ ಮಹೇಶ್, ಕುಮಾರ್ ಗಂಭೀರ ಗಾಯಗೊಂಡಿದ್ದು, ವಸಂತ್ ನಾಯ್ಕ ಮೃತಪಟ್ಟಿದ್ದಾರೆ.
ಕೃತ್ಯವೆಸಗಿ ಪರಾರಿಯಾಗುತ್ತಿದ್ದ ಕಮಲಾಕರ ಭಟ್ ಸೇರಿ ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


