Thursday, January 30, 2025
Menu

ಫೈನಾನ್ಸ್​ ಕಿರುಕುಳಕ್ಕೆ ಬೇಸತ್ತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ 

ಫೈನಾನ್ಸ್​ ಕಿರುಕುಳಕ್ಕೆ ಬೇಸತ್ತು ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಯಮನಾಪುರ ಹೊರವಲಯದಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನ ಶಿರೂರಿನ ಸರೋಜಾ ಕಿರಬಿ(52) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೈನಾನ್ಸ್​​ನಲ್ಲಿ ಸಬ್ಸಿಡಿಗೆ 2.30 ಲಕ್ಷ ರೂ. ಸಾಲ ಕೊಡಿಸಿದ್ದ ಹೊಳೆಪ್ಪ ದಡ್ಡಿ, ಅರ್ಧದಷ್ಟು ಹಣ ನನಗೆ ಕೊಟ್ಟರೆ ಸಾಲ ಕಟ್ಟುವುದಾಗಿ ಹೇಳಿದ್ದರು. ಆತನ ನಂಬಿ ಸಾಲ ಪಡೆದು ಅರ್ಧದಷ್ಟು ಹಣ ನೀಡಿದ್ದ ಸರೋಜಾ. ಅರ್ಧ ಸಾಲ ಕಟ್ಟಿದ ಬಳಿಕ ಫೈನಾನ್ಸ್​ನಿಂದ ಪೂರ್ತಿ ಸಾಲ ಕಟ್ಟಲು ಸೂಚಿಸಲಾಗಿದೆ.

ಈ ವೇಳೆ ಸಬ್ಸಿಡಿಯಾಗಿ ಸಾಲ ಪಡೆದಿದ್ದೇನೆ ಎಂದಿದ್ದ ಸರೋಜಾ, ತಾವು ಸಬ್ಸಿಡಿ ಸಾಲ ಕೊಟ್ಟಿಲ್ಲ ಪೂರ್ತಿ ಹಣ ಕಟ್ಟಿ ಅಂತ ನಿತ್ಯ ಕಿರುಕುಳ ಕೊಟ್ಟಿದ್ದಾರೆ. ಸಾಲ ಕಟ್ಟದೆ ಸರೋಜಾಗೆ ಹೊಳೆಪ್ಪ ದಡ್ಡಿ ಕೂಡ ವಂಚಿಸಿದ್ದ. ಇದರಿಂದ ಬೇಸತ್ತು ಬಾವಿಗೆ ಹಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಹೊಳೆಪ್ಪನ ವಿರುದ್ಧ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *