ಬೆಂಗಳೂರು: ನಗರದಲ್ಲಿ ಬಿಬಿಎಂಪಿ ಖಾತಾ ಹೊಂದಿರದ ಸುಮಾರು 5 ಲಕ್ಷಕ್ಕೂ ಹೆಚ್ಚು ಸ್ವತ್ತುಗಳು ಇರಬಹುದೆಂದು ನಿರೀಕ್ಷಿಸಲಾಗಿದ್ದು, ಈ ಸ್ವತ್ತುಗಳು ಇಲ್ಲಿಯವರೆಗೆ ಯಾವುದೇ ಖಾತಾವಿಲ್ಲದೆ ಸಬ್ ರಿಜಿಸ್ಟಾರ್ ಕಛೇರಿಗಳಲ್ಲಿ ವಹಿವಾಟು ನಡೆಸುತ್ತಿದ್ದು, ಅವುಗಳಲ್ಲಿ ಹಲವು ಸ್ವತ್ತುಗಳು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ.
ಸನ್ಮಾನ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ 5 ಲಕ್ಷಕ್ಕೂ ಹೆಚ್ಚು ಸ್ವತ್ತುಗಳನ್ನು ಪಾಲಿಕೆಯ ತೆರಿಗೆ ವ್ಯಾಪ್ತಿಗೆ ತರುವ ಮತ್ತು ಅರ್ಹತೆ ಹೊಂದುವ ಎಲ್ಲಾ ಸ್ವತ್ತುಗಳಿಗೂ ಬಿಬಿಎಂಪಿ ವತಿಯಿಂದ ಹೊಸ ಖಾತಾ ನೀಡುವ ದೂರದೃಷ್ಟಿಯೊಂದಿಗೆ ಮುನ್ನಡೆದಿದ್ದಾರೆ.
ಅದರಂತೆ, ಪಾಲಿಕೆಯು ಆನ್ಲೈನ್ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ನಾಗರೀಕರು ಹೊಸ ಖಾತಾ ಪಡೆಯುವ ಸಲುವಾಗಿ ತಮ್ಮ (i) ಮಾರಾಟ/ನೋಂದಣಿ ಪತ್ರ (ii) ಆಧಾರ್ (iii) ಇಸಿ ಪ್ರಮಾಣ ಪತ್ರ (iv) ಆಸ್ತಿ ಫೋಟೊ (v) ಬೆಸ್ಕಾಂ ಐಡಿಗಳನ್ನು ಸಲ್ಲಿಸಬಹುದಾಗಿದೆ.
ನೀವು ಬಿಬಿಎಂಪಿಯ ಖಾತೆಯನ್ನು ಹೊಂದಿರದಿದ್ದಲ್ಲಿ ದಯವಿಟ್ಟು ಆನ್ಲೈನ್ ಮೂಲಕ ಅರ್ಜಿಯನ್ನು ಬಿಬಿಎಂಪಿಯ ಜಾಲತಾಣವಾದ @ https://bbmp.karnataka.gov.in/newkhata ರಲ್ಲಿ ಸಲ್ಲಿಸಬಹುದು.
(ಸೂಚನೆ: ಒಂದು ವೇಳೆ ನೀವು ಈಗಾಗಲೇ ನಿಮ್ಮ ಸ್ವತ್ತಿಗಾಗಿ ಬಿಬಿಎಂಪಿಯಿಂದ ಪಡೆದಿರುವ ಕೈಬರಹ ಖಾತೆಗಾಗಿ ಇ-ಖಾತಾ ಪಡೆಯಲು ಬಯಸುತ್ತಿದ್ದರೆ ಅಂತಹ ಸಂದರ್ಭದಲ್ಲಿ ಹೊಸ ಖಾತಾ ಪಡಿಯಲು ಅರ್ಜಿಯನ್ನು ಸಲ್ಲಿಸಬಾರದು. ತಪ್ಪಿದಲ್ಲಿ ಅಂತಹವವರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದು.)
ಬಿಬಿಎಂಪಿಯ ಖಾತಾಗಾಗಿ ಯಾರನ್ನೂ ಭೇಟಿ ಮಾಡಬೇಡಿ ಮತ್ತು ನಿಮ್ಮ ಆನ್ಲೈನ್ ಅರ್ಜಿಯನ್ನು ಸರಾಗವಾಗಿ ಪ್ರಕ್ರಿಯೆಗೊಳಿಸಲಾಗುವುದು.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸಿಗಳಿಗೆ ಖಾತಾ ಇಲ್ಲವೇ? ಕೈಬರಹ ಖಾತಾ ಕೂಡ ಇಲ್ಲವೇ? ಹೊಸ ಬಿಬಿಎಂಪಿ ಆಸ್ತಿ ಖಾತಾವನ್ನು ಹೇಗೆ ಪಡೆಯುವುದು ಎಂಬುದು ಇಲ್ಲಿದೆ. ಆನ್ಲೈನ್ ಮೂಲಕ ಸ್ವಯಂಚಾಲತವಾಗಿ ಯಾವುದೇ ತೊಂದರೆಯಿಲ್ಲದೆ ಪಡೆಯಬಹುದು.
1. ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕರು ಬಿಬಿಎಂಪಿ ಖಾತಾ ಹೊಂದಿಲ್ಲ. ಕೈಬರಹ ಖಾತಾ ಕೂಡ ಇಲ್ಲ. ಈ ಆಯ್ಕೆಯು ಅಂತಹ ನಾಗರಿಕರಿಗೆ ಆಗಿದೆ.
2. ಖಾತಾ ಇಲ್ಲದ ನಾಗರೀಕರು
https://BBMP.karnataka.gov.in/NewKhata ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ನೀವು ಬಿಬಿಎಂಪಿ ಖಾತಾ ಹೊಂದಿಲ್ಲದಿದ್ದರೆ ನೀವೇ ಹೊಸ ಬಿಬಿಎಂಪಿ ಖಾತಾವನ್ನು ರಚಿಸಬಹುದು.
3. ನೀವು ಬಿಬಿಎಂಪಿ ಖಾತಾ ಹೊಂದಿದ್ದರೆ ಮತ್ತು ಇ-ಖಾತಾ ಬಯಸಿದರೆ – ಹೊಸ ಖಾತಾ ಪಡೆಯಲು ಪ್ರಯತ್ನಿಸಬೇಡಿ. ನಕಲಿ ಖಾತಾಕ್ಕಾಗಿ ಪ್ರಯತ್ನ ಮಾಡುವಂತಹ ವ್ಯಕ್ತಿಯನ್ನು ಕ್ರಿಮಿನಲ್ ಪ್ರಕರಣಕ್ಕೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
4. ಹೊಸ ಬಿಬಿಎಂಪಿ ಖಾತಾ ಪಡೆಯಲು ಅಗತ್ಯವಿರುವ ದಾಖಲೆಗಳು:
ಆಧಾರ್ ಸಂಖ್ಯೆ
ನಿಮ್ಮ ಮಾರಾಟ/ನೋಂದಣಿ ಪತ್ರ ಸಂಖ್ಯೆ
ಆಸ್ತಿ ಛಾಯಾಚಿತ್ರ
ಮಾರಾಟ/ನೋಂದಣಿ ಪತ್ರಕ್ಕೆ ಕನಿಷ್ಠ ಒಂದು ದಿನ ಮೊದಲು ಆಸ್ತಿಯ ಋಣಭಾರ ಪ್ರಮಾಣಪತ್ರವನ್ನು ದಿನಾಂಕ: 31-10-2024 ರವರೆಗೆ ಅಥವಾ ನಂತರದವರೆಗೆ.
5. ಕೆಳಗಿನ ತರಬೇತಿ ವೀಡಿಯೊವನ್ನು ನೋಡುವ ಮೂಲಕ, ಹೊಸ ಬಿಬಿಎಂಪಿ ಖಾತಾ ನೀವೇ ಮಾಡಿಕೊಳ್ಳಬಹುದಾಗಿದೆ.