Tuesday, September 15, 2026
Menu

ಎರಡು ಸಾವಿರ ರೂ. ಮೀರಿ UPI ಪಾವತಿ ಸ್ವೀಕೃತಿಗೆ 0.4% ಶುಲ್ಕ

ಇನ್ನು ಮುಂದೆ ಎರಡು ಸಾವಿರ ರೂ. ಮೀರಿದ UPI ಪಾವತಿಗೆ ವ್ಯಾಪಾರಿಗಳು 0.4% ಶುಲ್ಕ ಭರಿಸಬೇಕಾಗುತ್ತದೆ. ಈ ನಿಯಮ ಇದೇ ಅಕ್ಟೋಬರ್‌ 15ರಿಂದ ಜಾರಿಗೆ ಬರಲಿದೆ. ಹೊಸ ನಿಯಮದ ಅಡಿ ಎರಡು ಸಾವಿರಕ್ಕಿಂತ ಕ್ಕಿಂತ ಹೆಚ್ಚಿನ ಆಯ್ದ UPI ವಹಿವಾಟುಗಳಿಗೆ ಶೇಕಡ 0.4 MDR ಶುಲ್ಕ ವಿಧಿಸಲಾಗುತ್ತದೆ. UPI ಬಳಸಿ ವ್ಯಕ್ತಿಗಳ ನಡುವೆ ಹಣ ವರ್ಗಾಯಿಸಿದರೆ ಈ ಶುಲ್ಕ ಅನ್ವಯಿಸುವುದಿಲ್ಲ. ಆಯ್ದ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಕ್ಯೂಆರ್‌ ಕೋಡ್‌ಗಳ ಮೂಲಕ ತಿಂಗಳಿಗೆ ಒಂದು ಲಕ್ಷ ರೂ.ವರೆಗೆ ಗಳಿಸುವ ಸಣ್ಣ ವ್ಯಾಪಾರಿಗಳು ಯಾವುದೇ ಎಂಡಿಆರ್‌ ಪಾವತಿಸಬೇಕಾಗಿಲ್ಲ. ರೈಲ್ವೆ ಮತ್ತು ಇಂಧನದಂತಹ ಕ್ಷೇತ್ರಗಳಲ್ಲಿ ರಡು ಸಾವಿರ ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಐದು ರೂಪಾಯಿ ಸ್ಥಿರ ಶುಲ್ಕ ವಿಧಿಸಲಾಗುತ್ತದೆ. ಇತರ ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಗರಿಷ್ಠ 300 ರೂ.ವರೆಗೆ 0.4% ಶುಲ್ಕ ವಿಧಿಸಲಾಗುತ್ತದೆ.

ಗ್ರಾಹಕರುಎರಡು ಸಾವಿರ ರೂ.ಗಿಂತ ಹೆಚ್ಚಿನ ಮೊತ್ತ ಪಾವತಿಸಿದರೆ ಸ್ವೀಕರಿಸಿದವರು ಗರಿಷ್ಠ 300 ರೂಪಾಯಿ ಪಾವತಿಸಬೇಕಾಗುತ್ತದೆ. ವ್ಯಾಪಾರಿಗಳಿಗೆ ಈ ಮೊತ್ತಕ್ಕಿಂತ ಹೆಚ್ಚಿನ ಎಂಡಿಆರ್‌ ವಿಧಿಸಲಾಗುವುದಿಲ್ಲ. ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನಗಳ ವ್ಯಾಪಾರಿಗಳು UPI ಮೂಲಕ ಗರಿಷ್ಠ 5 ರೂಪಾಯಿ ಎಂಡಿಆರ್‌ ಪಾವತಿಸಬೇಕಾಗುತ್ತದೆ.

ಈ ನಿಯಮವು ಎರಡು ಸಾವಿರ ರೂಪಾಯಿಗಿಂತ ಕಡಿಮೆ ಪಾವತಿಗಳನ್ನು ಪಡೆಯುವ ವ್ಯಾಪಾರಿಗಳಿಗೆ ಈ ಹೊಸ ಶುಲ್ಕ ವಿಧಿಸಲಾಗುವುದಿಲ್ಲ, 5% ವ್ಯಾಪಾರಿಗಳಿಗೆ ಮಾತ್ರ ಈ ಶುಲ್ಕ ವಿಧಿಸಲಾಗುತ್ತದೆ. ಸರ್ಕಾರವು ಯುಪಿಐ ಪಾವತಿಗಳ ಮೇಲೆ ಎಂಡಿಆರ್ ಅನ್ನು ಜಾರಿಗೆ ತರುವ ಮೂಲಕ ಹಣ ಸಂಗ್ರಹಿಸಲು ಮುಂದಾಗಿದೆ.

Related Posts

Leave a Reply

Your email address will not be published. Required fields are marked *