Menu

ಸ್ವಜಾತಿ ನಾಯಕರಿಂದ ನನ್ನ ಅಧಃಪತನಕ್ಕೆ ಯತ್ನ, ಬಿಜೆಪಿಯಿಂದ ದೂರ: ಬಂಡಾಯ ಶಾಸಕ ಶಿವರಾಮ್ ಹೆಬ್ಬಾರ್!

ಉದಯಕಾಲ ನ್ಯೂಸ್,ಕಾರವಾರ: ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಕಲಹ ಮತ್ತೊಮ್ಮೆ ಭುಗಿಲೆದ್ದಿದ್ದು, ಪಕ್ಷದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ಬಂಡಾಯ ಶಾಸಕ ಶಿವರಾಮ್‌ ಹೆಬ್ಬಾರ್, ಸ್ವಜಾತಿ ನಾಯಕರೇ ತಮ್ಮನ್ನು ರಾಜಕೀಯವಾಗಿ ಮುಗಿಸಲು ನೋಡಿದ ಕಾರಣ ತಾನು ಪಕ್ಷದಿಂದ ಹೊರ ಬಂದೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣವಿಲ್ಲದೆ ಯಾರೂ ಪಕ್ಷ ಬಿಡುವುದಿಲ್ಲ. ಅದರ ಹಿಂದೆ ಬಲವಾದ ಕಾರಣಗಳಿರುತ್ತವೆ ಎಂದು ಸ್ಪಷ್ಟಪಡಿಸಿದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ