rain and flood
ಉತ್ತರಪ್ರದೇಶದಲ್ಲಿ ಭಾರಿ ಮಳೆ, ಪ್ರವಾಹಕ್ಕೆ 56 ಮಂದಿ ಬಲಿ
ಉತ್ತರಪ್ರದೇಶದಲ್ಲಿ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆಗೆ ಈವರೆಗೆ ೫೬ ಮಂದಿ ಬಲಿಯಾಗಿದ್ದಾರೆ. ಧಾರಾಕಾರ ಮಳೆಯಿಂದ ಉಂಟಾಗಿರುವ ಪ್ರವಾಹ ಮತ್ತಿತರ ಅವಘಡಗಳಲ್ಲಿ ನಲ್ವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಾಜ್ಯದ ೬೩ ಜಿಲ್ಲೆಗಳ್ಲಲಿ ವ್ಯಾಪಕ ಮಳೆಯಾಗಿದೆ, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ೪೫.೧ ಮಿಲಿಮೀಟರ್ ಮಳೆ ಸುರಿದಿದ್ದು, ೧೦೨೧ ಮನೆಗಳು ಹಾನಿಗೊಂಡಿವೆ. ಇನ್ನೂ ಇಪ್ಪತ್ತು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಘಾಗ್ರಾ ಮತ್ತು ರಾಪ್ತಿ ನದಿ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ


