Nellikayi Rasam
ಚಳಿಗಾಲದಲ್ಲಿ ಆರೋಗ್ಯಕ್ಕೆ ನೆಲ್ಲಿಕಾಯಿ ರಸಂ
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅದ್ಭುತ ಆಹಾರಗಳಲ್ಲಿ ನೆಲ್ಲಿಕಾಯಿಯೂ ಒಂದು. ಇದು ನೆಗಡಿ, ಕೆಮ್ಮು ಮತ್ತು ಇತರ ಶೀತ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬಹಳಷ್ಟು ಪ್ರಯೋಜನಕಾರಿ. ನೆಲ್ಲಿಕಾಯಿ ಒಳಗೊಂಡಿರುವ ವಿಟಮಿನ್ ಸಿ ಅಂಶವು ಚಳಿಗಾಲದಲ್ಲಿ ಬರುವ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ನೆರವಾಗುತ್ತದೆ. ಚಳಿಗಾಲದಲ್ಲಿ ನೆಲ್ಲಿಕಾಯಿ ರಸಂ ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕೂಡ ನಿಧಾನಕ್ಕೆ ಪರಿಹರಿಸುತ್ತದೆ. ಹೀಗಾಗಿ ಚಳಿಗಾಲದಲ್ಲಿ ಕಾಡುವ ಅಲರ್ಜಿ, ಶೀತಗಳನ್ನು ನಿಯಂತ್ರಿಸಲು ವಾರದಲ್ಲೊಮ್ಮೆಯಾದರೂ ನೆಲ್ಲಿಕಾಯಿ


