lifts stay
ಋತುಚಕ್ರ ರಜೆಗೆ ಸದ್ಯ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ಕಡ್ಡಾಯ ರಜೆಯನ್ನು ನೀಡಿ ಸರ್ಕಾರ ಜಾರಿಗೊಳಿಸಿದ್ದ ಆದೇಶಕ್ಕೆ ಹೈಕೋರ್ಟ್ನಿಂದ ಬೆಳಗ್ಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ. ಸರ್ಕಾರದ ಪರ ವಕೀಲರು ಮನವಿ ಸಲ್ಲಿಸಿದ ಕಾರಣ ಬುಧವಾರ ಮರು ವಿಚಾರಣೆ ನಿಗದಿಪಡಿಸಿದ್ದು, ಸದ್ಯಕ್ಕೆ ಋತುಚಕ್ರ ರಜೆಗೆ ತಡೆ ಇಲ್ಲವಾಗಿದೆ. ಋತುಚಕ್ರ ರಜೆ ವಿಚಾರದಲ್ಲಿ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ಕೋರಿ ಎಜಿ ಶಶಿಕಿರಣ್ ಶೆಟ್ಟಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಜೊತೆ ಕೇಳದೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.


