Menu

ಕೇರಳದಲ್ಲಿ ಕೀನ್ಯಾ ಮಾಜಿ ಪ್ರಧಾನಿ ಒಡಿಂಗಾ ನಿಧನ

ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಹೃದಯಾಘಾತದಿಂದ ಕೇರಳದ ಎರ್ನಾಕುಲಂ ಜಿಲ್ಲೆಯ ಕೂಥಾಟುಕುಳಂನಲ್ಲಿ ಇಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಆಯುರ್ವೇದ ಚಿಕಿತ್ಸೆ ಪಡೆಯಲು ಕೇರಳಕ್ಕೆ ಆಗಮಿಸಿದ್ದ ಒಡಿಂಗಾ ಬೆಳಗ್ಗೆ ವಾಕಿಂಗ್ ಮಾಡುವ ವೇಳೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ವಾಕಿಂಗ್  ವೇಳೆ ಕುಸಿದು ಬಿದ್ದ ಅವರನ್ನು ತಕ್ಷಣವೇ ಶ್ರೀಧರಿಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆತರಲಾಯಿತು. ಆದರೆ, 9.52ರ ವೇಳೆಗೆ ಅವರು ಕೊನೆಯುಸಿರೆಳೆದರು ಎಂದು