Killer Security Guard
ರಜೆ ನೀಡಲು ಕಿರಿಕ್, ಸಂಬಳ ಕಟ್ ಮಾಡಿದ ಮ್ಯಾನೇಜರ್‌ಗೆ ಗುಂಡಿಕ್ಕಿ ಫಿನಿಶ್ ಮಾಡಿದ ಸೆಕ್ಯುರಿಟಿ
ರಜೆಯನ್ನೂ ನೀಡದೆ, ಸಂಬಳದಲ್ಲೂ ಕಟ್ ಮಾಡಿದ್ದಕ್ಕೆ ರೊಚ್ಚಿಗೆದ್ದ ಸೆಕ್ಯುರಿಟಿ ಸಿಬ್ಬಂದಿ ಬ್ಯಾಂಕ್ ಮ್ಯಾನೇಜರ್‌ಗೆ ಶೂಟ್ ಮಾಡಿ ಕೊಂದು ಹಾಕಿರುವ ಘಟನೆ ಗಾಜಿಯಾಬಾದ್ನ ಲೋನಿ ಗಡಿಯಲ್ಲಿರುವ ಬಲರಾಮ್ ನಗರ ಬ್ಯಾಂಕ್ ಕಚೇರಿಯಲ್ಲಿ ನಡೆದಿದೆ. ಬ್ಯಾಂಕಿನೊಳಗೆ ನಡೆದ ಮಾತಿನ ಚಕಮಕಿಯ ನಂತರ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (ಪಿಎಸ್‌ಬಿ)ನ 36 ವರ್ಷದ ಮ್ಯಾನೇಜರ್ ಅನ್ನು ಸೆಕ್ಯುರಿಟಿ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯ ಆರೋಪಿ ಮತ್ತು ಸಹಚರರಿಬ್ಬರನ್ನು ಬಂಧಿಸಲಾಗಿದೆ. ರಜೆ


