kannada news
ಮಕ್ಕಳಿಬ್ಬರ ರಕ್ಷಿಸಲು ಬಾವಿಗೆ ಜಿಗಿದ ತಂದೆಯೂ ನಾಪತ್ತೆ
ವಿಜಯಪುರದ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆಯೊಂದರ ತೆರೆದ ಬಾವಿಗೆ ಬಿದ್ದು ಬಾಲಕಿಯರಿಬ್ಬರು ಮೃತಪಟ್ಟಿದ್ದಾರೆ. ಬಾಲಕಿಯರ ರಕ್ಷಣೆಗೆಂದು ಬಾವಿಗಿಳಿದ ತಂದೆಯೂ ನಾಪತ್ತೆಯಾಗಿರುವ ಘಟನೆ ನಡೆದಿದೆ. ೧೫ ವರ್ಷದ ಸಾಕ್ಷಿ ಮತ್ತು ೧೦ ವರ್ಷದ ರಕ್ಷಿತಾ ಬಾವಿಗೆ ಬಿದ್ದ ಬಾಲಕಿಯರು. ಅವರನ್ನು ರಕ್ಷಿಸಲು ತಂದೆ ೪೦ ವರ್ಷದ ಸಾಬನ್ಣ ಬಾವಿಗೆ ಜಿಗಿದಿದ್ದು ನಾಪತ್ತೆಯಾಗಿದ್ದಾರೆ. ಸಾಬಣ್ಣ ಅವರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಮಕ್ಕಳ ಮೃತದೇಹ ಪತ್ತೆಯಾಗಿದ್ದು, ಸಾಬಣ್ಣ ಅವರಿಗಾಗಿ ಶೋಧ ಕಾರ್ಯ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ: ನೋಟಿಸ್ ನೀಡಿ ಚರ್ಚೆಗೆ ಬನ್ನಿ ಎಂದು ವಿಪಕ್ಷಗಳಿಗೆ ಸಿಎಂ ಚಾಟಿ
ಸಚಿವ ನಾಗೇಂದ್ರ ಅವರಿಂದ ಇಂತಹ ಕಾರಣಕ್ಕೆ ರಾಜಿನಾಮೆ ಕೇಳುತ್ತಿದ್ದೇವೆ ಎಂದು ವಿಪಕ್ಷಗಳು ಹೋರಾಟ ಮಾಡಿದರೆ ಅದಕ್ಕೆ ಅರ್ಥವಿರುತ್ತದೆ. ನೋಟಿಸ್ ನೀಡದೆ, ಸದನದ ಬಾವಿಗೂ ಬರದೇ ರಾಜಿನಾಮೆ ಕೊಡಿ ಎಂದರೆ ಅರ್ಥವಿದೆಯೇ ಎಂದು ಸಿಎಂ ಡಿಕೆ ಶಿವಕುಮಾರ್ ಪ್ರತಿಪಕ್ಷಗಳ ನಡೆಗೆ ಚಾಟಿ ಬೀಸಿದರು.
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ 2500 ಕೋಟಿ ರೂ. ಯೋಜನೆ
ಕರ್ನಾಟಕದ 500 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ (KPS) ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಸಹಯೋಗದೊಂದಿಗೆ ₹2500 ಕೋಟಿ ರೂ. ಮೊತ್ತದ ಮಹತ್ವಾಕಾಂಕ್ಷಿ ಯೋಜನೆಯ ಒಪ್ಪಂದಕ್ಕೆ ಸಿಎಂ ಡಿಕೆ ಶಿವಕುಮಾರ್ ಸಮ್ಮುಖ ವಿಧಾನಸೌಧದಲ್ಲಿ ಸಹಿ ಹಾಕಲಾಯಿತು. ಡಿಸಿಎಂ
KEO AI PC-2026 ಲೋಕಾರ್ಪಣೆ ಮೂಲಕ ಒಂದು ಕನಸಿಗೆ ಚಾಲನೆ: ಸಿಎಂ
ನಾವು ಕೇವಲ ಒಂದು ಉಪಕರಣವನ್ನು ಲೋಕಾರ್ಪಣೆ ಮಾಡುತ್ತಿಲ್ಲ. ನಾವು ಒಂದು ಕನಸಿಗೆ ಚಾಲನೆ ನೀಡುತ್ತಿದ್ದೇವೆ . ಗ್ರಾಮೀಣ ಹಳ್ಳಿಗಳಿಂದ ಹಿಡಿದು ನಗರ ಕೇಂದ್ರಗಳವರೆಗೆ ಕರ್ನಾಟಕದ ಪ್ರತಿಯೊಂದು ಮಗುವೂ ಕಲಿಯಬೇಕು, ಮತ್ತು ಕೃತಕ ಬುದ್ಧಿಮತ್ತೆಯ (AI) ಭವಿಷ್ಯವನ್ನು ರೂಪಿಸಬೇಕು ಎಂಬ ಕನಸು ಎಂದು
ರಾಜ್ಯದಲ್ಲಿ ಅನಧಿಕೃತ ಬಡಾವಣೆಗಳ ನಿವಾಸಿಗಳಿಗೆ ಎ ಖಾತೆ
ರಾಜ್ಯದಲ್ಲಿ ಕಳೆದ ೩೦-೪೦ ವರ್ಷಗಳಿಂದ ಅನಧಿಕೃತ ಬಡಾವಣೆಗಳಲ್ಲಿ ಮನೆ, ನಿವೇಶನ ಹೊಂದಿರುವವರಿಗೆ ಎ ಖಾತೆ ನೀಡಲು ಸರ್ಕಾರ ಮುಂದಾಗಿದೆ. ಬಿ ಖಾತೆ ಕಾರಣ ಸಂಕಷ್ಟದಲ್ಲಿದ್ದ ಲಕ್ಷಾಂತರ ಕುಟುಂಬಗಳಿಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಹೊಸ ಕಾಯ್ದೆ ಅಂಗೀಕರಿಸಿದೆ. ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿಗಳಿಗೆ
ಹಗರಣದ ಎಲ್ಲ ದಾಖಲೆಗಳಿದ್ದರೂ ಸಚಿವ ನಾಗೇಂದ್ರ ರಾಜೀನಾಮೆ ನೀಡುತ್ತಿಲ್ಲ: ಆರ್ ಅಶೋಕ
ಸಚಿವ ಬಿ.ನಾಗೇಂದ್ರ 187 ಕೋಟಿ ರೂ. ಹಗರಣ ನಡೆಸಿರುವುದಕ್ಕೆ ಸೂಕ್ತ ದಾಖಲೆಗಳಿದ್ದರೂ ಅವರನ್ನು ವಜಾ ಮಾಡುತ್ತಿಲ್ಲ. ಅಂದರೆ ಈ ಹಗರಣದಲ್ಲಿ ಕೋಟ್ಯಂತರ ರೂಪಾಯಿ ಕಾಂಗ್ರೆಸ್ ಹೈಕಮಾಂಡ್‌ಗೆ ಸಂದಾಯವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು. ಶಾಸಕರ ಭವನದ ಆವರಣದ ಶ್ರೀ
ಸರ್ಕಾರದ ತಪ್ಪು, ಸೋರಿಕೆ ಸರಿಪಡಿಸಿಕೊಳ್ಳಲು ಸಲಹೆ ನೀಡಿ: ಸಿಎಗಳಿಗೆ ಸಿಎಂ ಕರೆ
ಹಣಕಾಸಿನ ವಿಚಾರದಲ್ಲಿ ಸರ್ಕಾರಕ್ಕೆ ಸಲಹೆ ಹಾಗೂ ಆದಾಯ ಸಂಗ್ರಹ ಹೆಚ್ಚಳಕ್ಕೆ ಮಾರ್ಗದರ್ಶನವಿರಲಿ ಎಂದು ಲೆಕ್ಕ ಪರಿಶೋಧಕರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಆಯೋಜಿಸಿದ್ದ “ಸಂವಾದ ಸಮ್ಮೇಳನ”ದಲ್ಲಿ ಸಿಎಂ
ಸಾರ್ವಜನಿಕರಿಲ್ಲದ ಕಡೆ ಜಾತಿ ನಿಂದನೆ: ಎಸ್ಸಿಎಸ್ಟಿ ಕಾಯ್ದೆಯಡಿ ಅಪರಾಧವಾಗದು ಎಂದ ಸುಪ್ರೀಂ
ಸಾರ್ವಜನಿಕರು ಇರುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿದೆ ಎಂಬುದು ಸಾಬೀತು ಆಗದಿದ್ದರೆ ಅದು ಎಸ್ಸಿಎಸ್ಟಿ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ ಮೆಹ್ತಾ ಅವರನ್ನು ಒಳಗೊಂಡಿರುವ ಪೀಠವು ಈ ಆದೇಶ ನೀಡಿದೆ,
ಹನೂರು ಎನ್‌ಕೌಂಟರ್: ಬಲಿಯಾದವರು ಬೇಟೆಗಾರರು ಎಂದು ಸಾಕ್ಷಿ ನೀಡಿದ ಅರಣ್ಯ ಇಲಾಖೆ
ಹನೂರು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಎನ್‌ಕೌಂಟರ್‌ಗೆ ಬಲಿಯಾಗಿರುವ ಪ್ರಕರಣದ ತನಿಖೆ ಮುಂದುವರಿದಿದ್ದು, ಎನ್‌ಕೌಂಟರ್‌ನಲ್ಲಿ ಸತ್ತಿರುವ ಮೂವರು ಬೇಟೆಗೆ ಹೋಗಿದ್ದವರು, ದನ ಮೇಯಿಸಲು ಹೋಗಿದ್ದವರು ಅಲ್ಲ ಎಂದು ಇಲಾಖೆ ಸಾಕ್ಷಿ ಸಮೇತ ಹೇಳಿದೆ. ಸ್ಥಳದಲ್ಲಿ ಸಿಕ್ಕ ಬ್ಯಾಗ್, ಮಾಂಸ, ಅಡುಗೆ
ರಾಜ್ಯದ ಮತದಾರರ ಪಟ್ಟಿಯಲ್ಲಿ 11 ವಿದೇಶಿ ಪ್ರಜೆಗಳು
ರಾಜ್ಯದ ಮತದಾರರ ಪಟ್ಟಿಯಲ್ಲಿ ಹನ್ನೊಂದು ವಿದೇಶಿ ಪ್ರಜೆಗಳ ಹೆಸರು ಸೇರ್ಪಡೆಗೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ, ಕರ್ನಾಟಕದ ಮತದಾರರ ಗುರುತಿನ ಚೀಟಿ ಹೊಂದಿರುವ 11 ವಿದೇಶಿ ಪ್ರಜೆಗಳ ವಿವರಗಳನ್ನು ವಿದೇಶಿಗರ ನೋಂದಣಿ ಕಚೇರಿಯು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಕೇಳಿದೆ. ಈ 11




