Menu

ದುಬಾರೆಯಲ್ಲಿ ಮಹಿಳೆ, ಆನೆ ಸಾವು: ವರದಿ ಕಡೆಗಣಿಸಿ ಬೇಜವಾಬ್ದಾರಿ ತೋರಿದ ಅರಣ್ಯ ಇಲಾಖೆ ಕಾರಣ

ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಆನೆ ಶಿಬಿರದಲ್ಲಿ ಎರಡು ದಿನಗಳ ಹಿಂದೆ ಆನೆಗಳ ನಡುವಿನ ಕಾದಾಟಕ್ಕೆ ಚೆನ್ನೈನ ಪ್ರವಾಸಿ ಮಹಿಳೆ ತುಳಸಿ (33) ಬಲಿಯಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಎಂಬ ಸಾಕಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಈ ದುರಂತಕ್ಕೆ ಅರಣ್ಯ ಇಲಾಖೆಯ ಬೇಜವಾಬ್ದಾರಿತನ ಮತ್ತು ತಜ್ಞರ ವರದಿಯ ಕಡೆಗಣನೆಯೇ ಮುಖ್ಯ ಕಾರಣ ಎಂಬ ಆರೋಪ ಸದ್ದು ಮಾಡುತ್ತಿದೆ. ಹೈಕೋರ್ಟ್ ಆದೇಶದಂತೆ ವನ್ಯಜೀವಿ ತಜ್ಞ ಕೆ.ಎಂ. ಚಿಣ್ಣಪ್ಪ, ಪಶುವೈದ್ಯ ಸರ್ಜನ್ ಡಾ.

ಜಿಬಿಎ ಚುನಾವಣೆ: ಗಡುವು ಆಗಸ್ಟ್ 31ರವರೆಗೆ ವಿಸ್ತರಿಸಿದ ಸುಪ್ರೀಂಕೋರ್ಟ್‌

ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ಜೂನ್​​ 30ರವರೆಗೆ ನೀಡಿದ್ದ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದೆ. ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ಮನವಿಯಂತೆ ಕೋರ್ಟ್ ಈ ಕ್ರಮ ಕೈಗೊಂಡಿದೆ. ಇದೇ ಅಂತಿಮ ಅವಕಾಶ. ಮತ್ತಷ್ಟು ವಿಸ್ತರಣೆ ನೀಡಲಾಗುವುದಿಲ್ಲ

ಆಭರಣ ಖರೀದಿಸುವುದಾಗಿ ಉದ್ಯಮಿಯಿಂದ ಮೂರು ಕೋಟಿ ರೂ. ಮೌಲ್ಯದ ಚಿನ್ನ ದೋಚಿದ ವಂಚಕರು

ಬೆಂಗಳೂರಿನ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಹೋಲ್‌ಸೇಲ್ ದರದಲ್ಲಿ ಚಿನ್ನ ಖರೀದಿಸುವುದಾಗಿ ನಂಬಿಸಿ ಮೂರು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಉದ್ಯಮಿಗೆ ವಂಚಿಸಿರುವ ಘಟನೆ ನಡೆದಿದೆ. ವಂಚಕರು ಒಂದು ಕೆಜಿ 850 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ನಗರ್ತ ಪೇಟೆಯಲ್ಲಿರುವ ‘ಮೆಹ್ತಾ ಜ್ಯುವೆಲ್ಲರಿ’

ಅಮೆರಿಕದಿಂದ ಜೀವಂತ ಗುಂಡುಗಳನ್ನು ತಂದಿದ್ದಾತ ಬೆಂಗಳೂರಿನಲ್ಲಿ ಅರೆಸ್ಟ್‌

ವಿದೇಶದಿಂದ ಅಕ್ರಮವಾಗಿ ರಿವಾಲ್ವಾರ್‌ನ ಏಳು ಜೀವಂತ ಗುಂಡುಗಳನ್ನು ತಂದಿದ್ದ ಆರೋಪದಡಿ ಅನಿವಾಸಿ ಭಾರತೀಯನೊಬ್ಬನನ್ನು ಬೆಂಗಳೂರು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್‌.ಟಿ.ನಗರದ ಮುತ್ತಾವರ್ ಅರ್ಮಾನ್ ಬಂಧಿತ. ಆರೋಪಿಯಿಂದ ರೂಗರ್ ಕಂಪನಿಯ ಏಳು ಜೀವಂತ ಗುಂಡುಗಳ ಮ್ಯಾಗ್ಜಿನ್‌ ಜಪ್ತಿ ಮಾಡಲಾಗಿದೆ. ಸ್ನೇಹಿತನ ಜತೆ

ಮತ್ತೆ ದಾಳಿ ಶುರು ಮಾಡಿದ್ರೆ ಪ್ರತಿದಾಳಿಯನ್ನು ಅಮೆರಿಕ ತಾಳಿಕೊಳ್ಳಲಾಗದು: ಇರಾನ್‌ ಎಚ್ಚರಿಕೆ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆ ಯಾವುದೇ ಕ್ಷಣದಲ್ಲಿ ಇಡೀ ಜಾಗತಿಕ ಆರ್ಥಿಕತೆಯನ್ನು ಛಿದ್ರಗೊಳಿಸಬಹುದು ಎನ್ನುವಂತಿದೆ. ಇರಾನ್‌ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೇನಾ ದಾಳಿಯ ಬೆದರಿಕೆಯ ನಂತರ, ಇರಾನ್ ಸೇನೆ ನೀಡಿದ ಎಚ್ಚರಿಕೆ ಜಾಗತಿಕ ತೈಲ ಮಾರುಕಟ್ಟೆಯನ್ನು ಬೆಚ್ಚಿ

ಏರ್‌ಟೆಲ್‌: 5ಜಿ ನೆಟ್‌ ವರ್ಕ್ ಮೇಲ್ದರ್ಜೆಗೆ, ಯಾವುದೇ ಸಮಯದಲ್ಲೂ ಸಿಗಲಿದೆ ಹೈ-ಸ್ಪೀಡ್ ಇಂಟರ್ನೆಟ್

ದೇಶದ ಪ್ರಮುಖ ದೂರಸಂಪರ್ಕ ಸಂಸ್ಥೆಯಾದ ಭಾರ್ತಿ ಏರ್‌ ಟೆಲ್, ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಅತ್ಯುನ್ನತ ಹಾಗೂ ಸ್ಥಿರವಾದ ನೆಟ್‌ ವರ್ಕ್ ಅನುಭವವನ್ನು ನೀಡುವ ಸಲುವಾಗಿ ಅತ್ಯಾಧುನಿಕ 5ಜಿ ಸ್ಲೈಸಿಂಗ್ ತಂತ್ರಜ್ಞಾನ ಆಧಾರಿತ ಹೊಸ ಪ್ರಯಾರಿಟಿ ಪೋಸ್ಟ್‌ ಪೇಯ್ಡ್ ಸೌಲಭ್ಯವನ್ನು ಮಾರುಕಟ್ಟೆಗೆ ಬಿಡುಗಡೆ

17 ಜನಾನ ಇಟ್ಕೊಂಡು ಹರೀತಿನಿ, ಹರೀತಿನಿ ಅಂದ್ರೆ ಆಗುತ್ತಾ ಕುಮಾರಣ್ಣ: ಡಿಕೆ ಶಿವಕುಮಾರ್‌

ಮೊನ್ನೆ ತಾನೆ ಕುಮಾರಸ್ವಾಮಿಯವರು ಬೆಂಗಳೂರು ನಗರದಲ್ಲಿ ಬಿ ಖಾತೆಯಿಂದ ಎ ಖಾತೆ ಮಾಡಿಸಬೇಡಿ, ನಮ್ಮ ಸರ್ಕಾರ ಬಂದು ಬಿಡುತ್ತದೆ. ನೀವು ಯಾರೂ ದುಡ್ಡು ಕೊಡಲು ಹೋಗಬೇಡಿ. ನಾವು ಮಾಡುತ್ತೇವೆ ಎಂದು ಮಾತಾಡಿದ್ದಾರೆ. ಅಧಿಕಾರ ಕೊಟ್ಟಾಗ ನಿಮಗೇನೂ ಮಾಡುವುದಕ್ಕೆ ಆಗಲಿಲ್ಲ. ಅಧಿಕಾರ ಇಲ್ಲದೆ

ತಾಯಿ ಬೈದರೆಂದು ಪತ್ರ ಬರೆದಿಟ್ಟು ಮನೆ ತೊರೆದ ಮಂಡ್ಯದ ಬಾಲಕಿಯರು

ತಾಯಿ ಬೈದಿದ್ದಕ್ಕೆ ಸಿಟ್ಟಾಗಿ ಸೋದರಿ ಬಾಲಕಿಯರಿಬ್ಬರು ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ರಾಮಚಂದ್ರ ಎಂಬವರ ಮಕ್ಕಳಾದ ಸುಜಾತಾ(16), ರುಕ್ಮಿಣಿ(14) ಮನೆಬಿಟ್ಟು ಹೋಗಿರುವ ಸೋದರಿಯರು. ಯಾವುದೋ ವಿಷಯಕ್ಕೆ ತಾಯಿ ಬೈದಿದ್ದಾರೆ. ಇದರಿಂದ ನೊಂದು ಭಾವುಕ

ರಾಜ್ಯದಲ್ಲಿ ನಾಳೆ ಮೆಡಿಕಲ್‌ ಶಾಪ್‌ಗಳು ಬಂದ್‌

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಾಳೆ (ಮೇ 20) ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್ ಸಂಚಾರ ಸ್ಥಗಿತಗೊಳ್ಳುವ ಆತಂಕ ಒಂದೆಡೆ, ಮತ್ತೊಂದೆಡೆ ರಾಜ್ಯದಲ್ಲಿ ನಾಳೆ ಮೆಡಿಕಲ್‌ ಶಾಪ್‌ಗಳು ಬಂದ್‌ ಇರಲಿವೆ. ಔಷಧ ಮಳಿಗೆಗಳ ಬಂದ್‌ಗೆ ಕರೆ ನೀಡಲಾಗಿದ್ದು, ಇದಕ್ಕೆ ಬೆಂಬಲ ವ್ಯಕ್ತವಾಗಿದೆ.ತುರ್ತು ಸಂದರ್ಭಗಳಲ್ಲಿ

ಇರಾನ್‌ ಮೇಲಿನ ದಾಳಿ ಗಲ್ಫ್‌ ರಾಷ್ಟ್ರಗಳ ಮನವಿಯಂತೆ ಮುಂದೂಡಿಕೆ ಎಂದ ಟ್ರಂಪ್‌

ಇಂದು (ಮಂಗಳವಾರ) ಇರಾನ್‌ ಮೇಲೆ ನಡೆಸಬೇಕಿದ್ದ ದಾಳಿಯನ್ನು ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಾಯಕರ ಮನವಿಯಂತೆ ತಾತ್ಕಾಲಿಕವಾಗಿ ಮುಂಝದೂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಒಪ್ಪಂದಕ್ಕೆ ಬರದಿದ್ದರೆ ಯುದ್ಧ ಮತ್ತೆ ಆರಂಭವಾಗಬಹುದು ಎಂದು ಟ್ರಂಪ್‌ ಈ