Saturday, October 10, 2026
Menu

ಜೈಲಿನಲ್ಲಿ ಸಹ ಕೈದಿಗಳಿಗೆ ಚಿತ್ರಹಿಂಸೆ: ದರ್ಶನ್‌ ವಿರುದ್ಧ ಆರೋಪ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ಅವರು ಅಲ್ಲಿನ ಕಠಿಣ ನಿಯಮಗಳಿಂದ ರೋಸಿದ್ದು, ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಜೈಲಿನ ಪಾರ್ಟಿ ವೀಡಿಯೊ ವೈರಲ್ ಆಗುತ್ತಿದ್ದಂತೆ ಜೈಲಿನಲ್ಲಿ ನಿಯಮಗಳು ಮತ್ತಷ್ಟು ಬಿಗಿಯಾಗಿವೆ. ಅಂಶು ಕುಮಾರ್ ಜೈಲಿನ ಮುಖ್ಯ ಅಧೀಕ್ಷಕರಾಗಿ ಆಗಿ ನೇಮಕಗೊಂಡಿದ್ದು, ಜೈಲಿನಲ್ಲಿ ಕಠಿಣ ನಿಯಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ಈಗ ದರ್ಶನ್ ಸಾಲಿನಲ್ಲಿ ನಿಂತು ತಾವೇ ಊಟ

ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ, ಪ್ರತಿಪಕ್ಷದಿಂದ ಅವಿಶ್ವಾಸ ನಿರ್ಣಯ ಮಂಡನೆ ಸಿದ್ಧತೆ, ಸರ್ಕಾರದಿಂದ 33 ಮಸೂದೆ ಮಂಡನೆ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ವಿಧಾನ ಮಂಡಲ ಉಭಯ ಸದನಗಳ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಆಡಳಿತಾರೂಢ ಹಾಗೂ ಪ್ರತಿಪಕ್ಷ ಸದಸ್ಯರ ಮಧ್ಯೆ ಕಾವೇರಿದ ಚರ್ಚೆ, ಜಟಾಪಟಿ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.  ಸರ್ಕಾರದಿಂದ 30ಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗಲಿದ್ದು, ಒಂದಷ್ಟು ಮಸೂದೆಗಳು ಅಧಿವೇಶನದಲ್ಲಿ

ಗಂಗಾವತಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೊಶೂಟ್‌ ಮುಗಿಸಿ ವಾಪಸಾಗುತ್ತಿದ್ದ ಜೋಡಿ ಅಪಘಾತಕ್ಕೆ ಬಲಿ

ಮದುವೆಗೆ ಎರಡು ವಾರವಿದ್ದು, ಸಿದ್ಧತೆಯಲ್ಲಿದ್ದ ಜೋಡಿ, ಸಂಭ್ರಮದಿಂದ ಪ್ರೀ ವೆಡ್ಡಿಂಗ್ ಫೋಟೊಶೂಟ್‌ ಮಾಡಿಸಿಕೊಂಡು ಮನೆಗೆ ವಾಪಸ್ ಆಗುವಾಗ ರಸ್ತೆ ಅಪಘಾತ ಸಂಭವಿಸಿ ಮೃತಪಟ್ಟಿರುವ ಘಟನೆ ಕೊಪ್ಪಳದ ಗಂಗಾವತಿ ಬಳಿ ನಡೆದಿದೆ. ಬೈಕ್​ಗೆ ಲಾರಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿದ್ದು, ಕರಿಯಪ್ಪ‌ ಮಡಿವಾಳ

ಗಂಡು ಮಗುವಿಗೆ ಹಂಬಲ: ವಿಜಯಪುರದಲ್ಲಿ ಮಾಟಗಾತಿ ಸಲಹೆಯಂತೆ ರಕ್ತ ಬರುವಂತೆ ಪತ್ನಿಯ ಕೂದಲು ಕಿತ್ತ ಗಂಡ

ವಿಜಯಪುರ ಜಿಲ್ಲೆಯ ಹೊನ್ನುಟಗಿ ಗ್ರಾಮದಲ್ಲಿ ಗಂಡು ಮಗು ಬೇಕೆಂದು ಬಯಸುತ್ತಿದ್ದ ವ್ಯಕ್ತಿ ಮಾಟಗಾತಿಯ ಮಾತು ಕೇಳಿ ಪತ್ನಿಯ ನೆತ್ತಿಯಲ್ಲಿ ರಕ್ತ ಬರುವಂತೆ ಬಲವಂತವಾಗಿ ಕೂದಲನ್ನು ಕತ್ತರಿಸಿರುವ ಘಟನೆ ನಡೆದಿದೆ. ದುಂಡೇಶ್‌ ಮತ್ತು ಜ್ಯೋತಿ ದಳವಾಯಿ ದಂಪತಿಗೆ ಮೂರು ಹೆಣ್ಣು ಮಕ್ಕಳಿದ್ದು, ನಾಲ್ಕನೇಯದಾಗಿ

ವಿಜಯೇಂದ್ರನನ್ನು ಅಧ್ಯಕ್ಷಗಿರಿಯಿಂದ ಇಳಿಸದಿದ್ದರೆ ಜೆಸಿಬಿ ಪಕ್ಷ ಕಟ್ಟುತ್ತೇನೆ: ಬಿಜೆಪಿಯ ಉಚ್ಚಾಟಿತ ಶಾಸಕ ಯತ್ನಾಳ

ಯಡಿಯೂರಪ್ಪನ ಚೇಲಾಗಿರಿ ಮಾಡಿ ಅಪ್ಪಾಜಿ‌ ಎಂದು ಹೇಳುವುದಿಲ್ಲ. ನಾನು ಸ್ವಾಭಿಮಾನದಿಂದ ಇದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ಯೋಗಿ ಆದಿತ್ಯನಾಥ, ಆರೆಸ್ಸೆಸ್‌  ನಮ್ಮ ಆದರ್ಶಗಳು. ಭ್ರಷ್ಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರನವರನ್ನು ಅಧ್ಯಕ್ಷಗಿರಿಯಿಂದ ಇಳಿಸಿ, ಮನೆಯಲ್ಲಿ ಕೂರಿಸುವವರೆಗೆ ನಾನು ಬಿಜೆಪಿಗೆ ಹೋಗುವುದಿಲ್ಲ. ಜೆಸಿಬಿ

ನನ್ನದು ಕೃಷ್ಣ ತತ್ತ್ವ, ಕಾಂಗ್ರೆಸ್ ಪಕ್ಷದ್ದು ಕಂಸ ತತ್ತ್ವ: ಹೆಚ್‌ಡಿ ಕುಮಾರಸ್ವಾಮಿ

ಭಗವದ್ಗೀತೆಯನ್ನು ಶಾಲಾ ಮಕ್ಕಳಿಗೆ ಬೋಧಿಸಬೇಕು ಎಂದು ಪುನರುಚ್ಚರಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ , ನಾನು ಕೃಷ್ಣತತ್ತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ. ಕಾಂಗ್ರೆಸ್‌ ಕಂಸನಲ್ಲಿ ನಂಬಿಕೆ ಇಟ್ಟಿದೆ ಎಂದು ಹೇಳಿದ್ದಾರೆ. ತಮ್ಮನ್ನು ಮನುವಾದಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸೈದ್ಧಾಂತಿಕ

ಪತ್ನಿಯೊಂದಿಗೆ ಜಗಳ: ಮಕ್ಕಳ ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

ಉತ್ತರ ಪ್ರದೇಶದ ಬಿಜ್ನೋರ್​ನಲ್ಲಿ ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಜಗಳವಾಡಿ ಸಿಟ್ಟಿನ ಭರದಲ್ಲಿ ಮಕ್ಕಳನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಕ್ಕಳಿಗೆ ವಿಷಕೊಟ್ಟು ಬಳಿಕ ಆತ ವಿಷ ಸೇವಿಸಿದ್ದಾನೆ. ಮೃತ ಬಾಬುರಾಮ್ ಕುಟುಂಬ ಕೆಲವು ಸಮಯದಿಂದ ವೈವಾಹಿಕ ಬಿಕ್ಕಟ್ಟಿನಲ್ಲಿದೆ. ಪತ್ನಿ ಹೆತ್ತವರ ಮನೆಯಲ್ಲಿ

ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯ ಸ್ಥಳಾಂತರಕ್ಕೆ ಬಿಡಲ್ಲ: ಡಿಕೆ ಶಿವಕುಮಾರ್

ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ. ಪಂದ್ಯಗಳು ಇಲ್ಲೇ ನಡೆಸುವಂತೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಕೆಎಸ್ ಸಿಎ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಆರ್ ಸಿಬಿ

ತವರು ಮನೆಗೆ ಹೋಗಿರುವ ಪತ್ನಿಯ ಕರೆತನ್ನಿ ಎಂದ ಮಗನ ಕೊಲೆಗೈದ ಪೋಷಕರು

ಮನೆಯಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳಿಂದ ಮುನಿಸಿಕೊಂಡು ತವರಿಗೆ ಹೋಗಿದ್ದ ಪತ್ನಿಯನ್ನು ಕರೆ ತರುವಂತೆ ಹೇಳಿದ ಮಗನನ್ನು ಪೋಷಕರೇ ಹತ್ಯೆಗೈದ ಘಟನೆ ಪಂಜಾಬ್​ನ ಅಮೃತಸರದಲ್ಲಿ ನಡೆದಿದೆ. ಸಿಮ್ರಂಜಂಗ್ ಸಿಂಗ್ ಎಂವರ ಪತ್ನಿ ನವಪ್ರೀತ್ ಕೌರ್ ತವರು ಮನೆಗೆ ಹೋಗಿದ್ದರು. ಕೋಪ, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಆಕೆಯನ್ನು

ದಾವಣಗೆರೆ ಆಸ್ಪತ್ರೆ ಆವರಣದಲ್ಲಿ ಕುಸಿದು ಪುರಸಭೆ ಅಧ್ಯಕ್ಷ ಸಾವು

ದಾವಣಗೆರೆ ಆಸ್ಪತ್ರೆಯ ಆವರಣದಲ್ಲಿ ಹೃದಯಘಾತದಿಂದ ಕುಸಿದು ಬಿದ್ದು ಪುರಸಭೆ ಅಧ್ಯಕ್ಷ ಮೃತಪಟ್ಟಿದ್ದಾರೆ. ಹರಿಹರ ತಾಲೂಕಿನ ಮಲೆಬೆನ್ನೂರು ಪುರಸಭೆ ಅಧ್ಯಕ್ಷ ಹನುಮಂತಪ್ಪ(47) ಮೃತಪಟ್ಟವರು. ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಳಗಿನ ಜಾವ ಹನುಮಂತಪ್ಪ ಆಸ್ಪತ್ರೆಗೆ ತೆರಳಿದ್ದರು. ಒಬ್ಬರೇ ಬೈಕ್ ನಲ್ಲಿ ತೆರಳಿದ್ದ ಹನುಮಂತಪ್ಪ