Menu

ಕಡೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತನ ಕೊಲೆ: ಮತ್ತೊಬ್ಬ ಅರೆಸ್ಟ್‌

ಕಡೂರು ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್​ ಕೊಲೆ ಪ್ರಕರಣದಲ್ಲಿ ಬಜರಂಗ ದಳ ಕಾರ್ಯಕರ್ತರು ಭಾಗಿಯಾಗಿದ್ದು, ಮತ್ತೊಬ್ಬ ಆರೋಪಿ  ಮಿಥುನ್​​ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೊಲೆಯಲ್ಲಿ ಮಿಥುನ್ ಪಾತ್ರ ದೃಢಪಟ್ಟಿದ್ದು, ಚಿಕ್ಕಮಗಳೂರು ನಗರದ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ. ಆರೋಪಿ ಮಿಥುನ್‌ ಪ್ರಕರಣದ ಮೊದಲ ಆರೋಪಿ ಸಂಜಯ್ ಸ್ನೇಹಿತನಾಗಿದ್ದು, ಆರೆಸ್ಸೆಸ್‌ ಮತ್ತು ಬಜರಂಗದಳದಲ್ಲಿ‌ ಸಕ್ರಿಯ ಕಾರ್ಯಕರ್ತ ಎಂಬುದು ಗೊತ್ತಾಗಿದೆ. ಆರೋಪಿಗಳಾದ

ಕಡೂರಿನಲ್ಲಿ ಪೋಷಕರೆದುರೇ ಮಗುವನ್ನು ಹೊತ್ತೊಯ್ದ ಚಿರತೆ: ಗುಡ್ಡದಲ್ಲಿ ಶವ ಪತ್ತೆ

ಕಡೂರು ತಾಲೂಕಿನ ನವಿಲೇಕಲ್ ಪ್ರದೇಶದಲ್ಲಿ ಚಿರತೆಯು ಪೋಷಕರೆದುರೇ ಮಗುವನ್ನು ಹೊತ್ತೊಯ್ದಿದ್ದು, ನವಿಲೇಕಲ್ ಗುಡ್ಡದಲ್ಲಿ ಶವ ಪತ್ತೆಯಾಗಿದೆ. ಚಿರತೆಯು ಐದು ವರ್ಷದ ಮಗು ಸಾನ್ವಿಯನ್ನು ಹೊತ್ತೊಯ್ದಿತ್ತು. ಮನೆಯ ಹಿಂದೆ ಕೊಟ್ಟಿಗೆಯಲ್ಲಿ ಮಗುವಿನ ಮೇಲೆ ಚಿರತೆ ದಾಳಿ ಮಾಡಿದಾಗ ಚೀರಾಟ ಕೇಳಿ ಪೋಷಕರು ಬಂದಿದ್ದಾರೆ.