India help
800 ಮಂದಿಯ ಬಲಿ ಪಡೆದ ಭೂಕಂಪ ಪೀಡಿತ ಆಫ್ಘನ್ಗೆ ಭಾರತ ನೆರವಿನ ಹಸ್ತ
ಅಫ್ಘಾನಿಸ್ತಾನದಲ್ಲಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 800 ದಾಟಿದ್ದರೆ. 2,500 ಮಂದಿ ಗಾಯಗೊಂಡಿದ್ದಾರೆ. ಈ ದುರಂತಕ್ಕೆ ವಿಷಾದ ವ್ಯಕ್ತಪಡಿಸಿರುವ ಭಾರತವು ಆ ರಾಷ್ಟ್ರಕ್ಕೆ ನೆರವಿನ ಹಸ್ತ ಚಾಚಿದೆ. ಭೂಕಂಪದಿಂದ ಕುಸಿದಿರುವ ಮನೆಗಳ ಅವಶೇಷಗಳಡಿ ಹೂತುಹೋಗಿರುವವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದು, ವೈಮಾನಿಕ ನೆರವು ಪಡಡೆ ಕೂಡ ಕಾರ್ಯೋನ್ಮುಖವಾಗಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಫ್ಘಾನ್ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಮಾತನಾಡಿ, ದುರಂತದಲ್ಲಿ ನಾಗರಿಕರ ಸಾವಿಗೆ ಸಂತಾಪ


