Tuesday, September 22, 2026
Menu

ತಮ್ಮ ಅಪಘಾತಕ್ಕೆ ಬಲಿಯಾದ ಸುದ್ದಿ ತಿಳಿದು ಅಕ್ಕ ಹೃದಯಾಘಾತದಿಂದ ಸಾವು

ಅನಾರೋಗ್ಯದಿಂದ ಬಳಲುತ್ತಿದ್ದ ಸೋದರಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಬರುತ್ತಿದ್ದಾಗ ಬೈಕ್‌ ಅಪಘಾತದಲ್ಲಿ ಸಹೋದರ ಮೃತಪಟ್ಟ  ಸುದ್ದಿ ಕೇಳಿದ ಅಕ್ಕ ಹೃದಯಾಘಾತಗೊಂಡು ಮೃತಪಟ್ಟ ಘಟನೆ ಗದಗದ ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ಹೂವಿನಹಡಗಲಿ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಮ್ಮ (48) ಮೃತಪಟ್ಟವರು. ಅವರ ತಮ್ಮ ನಿಂಗಪ್ಪ ಜೆಸ್ಕಾಂ ಲೈನ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದರು. ವಾರದಿಂದ ಮಲ್ಲಮ್ಮ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಹೆಚ್ಚಿನ

ಎಸಿ ಆನ್‌ ಮಾಡಿ ವಿಂಡೋ, ಡೋರ್‌ ಮುಚ್ಚಿ ಕಾರಿನಲ್ಲಿ ಮಲಗಿದ್ದ ಚಾಲಕ ಸಾವು

ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗೆದರಹಳ್ಳಿ ಬಳಿ ಕಾರಿನ ಗ್ಲಾಸ್ ಏರಿಸಿ ಎಸಿ ಆನ್ ಮಾಡಿ ಮಲಗಿದ್ದ ಖಾಸಗಿ ಕಂಪನಿಯ ಕ್ಯಾಬ್ ಚಾಲಕರೊಬ್ಬರು ಕಾರಿನೊಳಗೆ ಮೃತಪಟ್ಟಿದ್ದಾರೆ. ಟಿ ದಾಸರಹಳ್ಳಿ ನಿವಾಸಿ ಸುನಿತ ಹೆಚ್.ಬಿ. (38) ಹೀಗೆ ದಾರುಣವಾಗಿ ಮೃತಪಟ್ಟವರು. ಖಾಸಗಿ

ಮನೆ ಮುಂದೆ ನಿಂತಿದ್ದ ಶಿಕ್ಷಕ ಗುಡುಗು ಸಿಡಿಲಿನ ಅಬ್ಬರಕ್ಕೆ ಬೆಚ್ಚಿ ಹೃದಯಾಘಾತಕ್ಕೆ ಬಲಿ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಏಕಾಏಕಿ ಆರಂಭಗೊಂಡ ಗುಡುಗು ಸಿಡಿಲಿನ ಅಬ್ಬರಕ್ಕೆ ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜಪ್ಪ (56) ಮೃತಪಟ್ಟವರು. ಅವರು

ಹಾಸನದಲ್ಲಿ ಪಾಠ ಮಾಡುತ್ತಿದ್ದಾಗಲೇ ಶಿಕ್ಷಕ ಕುಸಿದು ಸಾವು

ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗಲೇ ಮುಖ್ಯಶಿಕ್ಷಕರು ಹೃದಯಾಘಾತದಿಂದ ಮೃತಪಟ್ಟ ದುರ್ಘಟನೆ ಅರಕಲಗೂಡು ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕೆಬ್ಬೆಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೇರಳಾಪುರ ಗ್ರಾಮದ ಸತೀಶ್ (53) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ

ಅರಸೀಕೆರೆ ಅಂಗಡಿಯಲ್ಲೇ ಕುಸಿದು ವ್ಯಾಪಾರಿ ಸಾವು

ಹಾಸನದ ಅರಸೀಕೆರೆ ಪಟ್ಟಣದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗಲೇ ಹಠಾತ್ ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ. ಪ್ರವೀಣ್ (45) ಮೃತ ವ್ಯಕ್ತಿ. ಅರಸೀಕೆರೆ ತಾಲೂಕಿನ ದುಮ್ಮೇನಹಳ್ಳಿ ಗ್ರಾಮದ ಪ್ರವೀಣ್ ಅರಸೀಕೆರೆ ಪಟ್ಟಣದಲ್ಲಿ ಅಟೊಮೊಬೈಲ್

ಧಾರವಾಡ ಕೆಸಿಡಿ ಕಾಲೇಜ್‌ ಪ್ರೊಫೆಸರ್‌ ಅಂಡಮಾನ್‌ ಪ್ರವಾಸದಲ್ಲಿ ಹೃದಯಾಘಾತಕ್ಕೆ ಬಲಿ

ಅಂಡಮಾನ್, ನಿಕೋಬಾರ್ ಪ್ರವಾಸಕ್ಕೆ ತೆರಳಿದ್ದ ಧಾರವಾಡದ ಕೆಸಿಡಿ ಕಾಲೇಜ್‌ನ ಅಸಿಸ್ಟೆಂಟ್ ಪ್ರೊಫೆಸರ್‌ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅರ್ಥಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದ ಎಸ್.ಅನ್ನಪೂರ್ಣ ಮೃತಪಟ್ಟವರು. ಮೂರು ದಿನಗಳ ಹಿಂದೆ ಅನ್ನಪೂರ್ಣ ಅವರು ಕುಟುಂಬದ ಜೊತೆ ಅಂಡಮಾನ್ ನಿಕೋಬಾರ್‌ನ ಫೋರ್ಟ್‍ಬ್ಲೇರ್‌ಗೆ ಹೋಗಿದ್ದರು. ಕಳೆದ

ಶಿವಮೊಗ್ಗ ಹಾಸ್ಟೆಲ್‌ನಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿ ಕುಸಿದು ಸಾವು

ಶಿವಮೊಗ್ಗದ ಹಾಸ್ಟೆಲ್‌ವೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕುಸಿದುಬಿದ್ದು ಮೃತಪಟ್ಟಿದ್ದಾನೆ. ಶಿವಮೊಗ್ಗದ ವಾಜಪೇಯಿ ಬಡಾವಣೆಯ ಹಾಸ್ಟೆಲ್‌ನಲ್ಲಿ ಈ ದುರಂತ ನಡೆದಿದೆ. ಯುವಕ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಬಳ್ಳಾರಿ ಮೂಲದ ಗಣೇಶ್ (21) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಖಾಸಗಿ ಕಾಲೇಜೊಂದರಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್

ಗೋವಾ ನ್ಯೂ ಇಯರ್‌ ಪಾರ್ಟಿ: ಹಾಸನದ ಯುವಕ ಹೃದಯಾಘಾತಕ್ಕೆ ಬಲಿ

ನ್ಯೂ ಇಯರ್ ಪಾರ್ಟಿಗೆಂದು ಗೋವಾಗೆ ಹೋಗಿದ್ದ ಆಲೂರು ತಾಲೂಕಿನ ಹೊಸಳ್ಳಿ ಗ್ರಾಮದ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ರಕ್ಷಿತ್ (26) ಗೋವಾದಲ್ಲಿ ಮೃತಪಟ್ಟ ಯುವಕ. ಸಂಬಂಧಿಕರು ಹಾಗೂ ಸಹೋದರರಾದ ಚಿದಂಬರಂ, ಪ್ರವೀಣ್ ಜೊತೆ ಡಿ.31 ರಂದು ರಕ್ಷಿತ್ ಗೋವಾಗೆ ಹೋಗಿದ್ದ. 31 ರಂದು

ದಾವಣಗೆರೆ ಆಸ್ಪತ್ರೆ ಆವರಣದಲ್ಲಿ ಕುಸಿದು ಪುರಸಭೆ ಅಧ್ಯಕ್ಷ ಸಾವು

ದಾವಣಗೆರೆ ಆಸ್ಪತ್ರೆಯ ಆವರಣದಲ್ಲಿ ಹೃದಯಘಾತದಿಂದ ಕುಸಿದು ಬಿದ್ದು ಪುರಸಭೆ ಅಧ್ಯಕ್ಷ ಮೃತಪಟ್ಟಿದ್ದಾರೆ. ಹರಿಹರ ತಾಲೂಕಿನ ಮಲೆಬೆನ್ನೂರು ಪುರಸಭೆ ಅಧ್ಯಕ್ಷ ಹನುಮಂತಪ್ಪ(47) ಮೃತಪಟ್ಟವರು. ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಳಗಿನ ಜಾವ ಹನುಮಂತಪ್ಪ ಆಸ್ಪತ್ರೆಗೆ ತೆರಳಿದ್ದರು. ಒಬ್ಬರೇ ಬೈಕ್ ನಲ್ಲಿ ತೆರಳಿದ್ದ ಹನುಮಂತಪ್ಪ

ಸಿನಿಮಾ ಚಿತ್ರೀಕರಣ ವೇಳೆ ಕುಸಿದು ನಿರ್ದೇಶಕ ಸಂಗೀತ್‌ ಸಾಗರ್‌ ಸಾವು

ಕೊಪ್ಪದ ಹರಿಹರಪುದಲ್ಲಿ ಚಿತ್ರೀಕರಣದ ವೇಳೆಯೇ ‘ಪಾತ್ರಧಾರಿ’ ಸಿನಿಮಾದ ನಿರ್ದೇಶಕ ಸಂಗೀತ್ ಸಾಗರ್ ಕುಸಿದು ಮೃತಪಟ್ಟಿದ್ದಾರೆ. ನಿರ್ದೇಶಕ ಸಂಗೀತ್ ಸಾಗರ್ ಅವರ ಮೃತದೇಹ ನಿನ್ನೆ ರಾತ್ರಿಯಿಂದ ಆಸ್ಪತ್ರೆಯ ಶವಾಗಾರದಲ್ಲಿದೆ. ಈವರೆಗೆ ಖಾಸಗಿ ಆಸ್ಪತ್ರೆಯ ಬಿಲ್ ಪಾವತಿಯಾಗಿಲ್ಲ. ಸಿನಿಮಾ ತಂಡದವರು ಬಿಲ್ ಪಾವತಿಸುತ್ತಾರೆ ಎಂದು