Saturday, September 05, 2026
Menu

ನೀರಿನ ವಿಚಾರಕ್ಕೆ ಸಮುದಾಯಗಳ ಮಧ್ಯೆ ಗಲಾಟೆ: ಗದಗಲ್ಲಿ 21 ಮಂದಿಯ ಬಂಧನ

ಗದಗ ಮುಂಡರಗಿ ತಾಲೂಕಿನ ಚಿಕ್ಕ ವಡ್ಡಟ್ಟಿ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ನೀರಿನ ವಿಚಾರಕ್ಕೆ ನಡೆದ ಗಲಾಟೆಗೆ ಸಂಬಂಧಿಸಿದಂತೆ 21 ಮಂದಿಯನ್ನು ಬಂಧಿಸಲಾಗಿದೆ. ಎಸ್‌ಟಿ ಸಮುದಾಯದ ರೈತನ ಜಮೀನಿನಲ್ಲಿ ಎಸ್‌ಸಿ ವ್ಯಕ್ತಿ ನೀರಿನ ಬಳಕೆ ಮಾಡಿದ ವಿಚಾರಕ್ಕೆ ಗಲಾಟೆ ನಡೆದಿತ್ತು. ಎರಡು ಗುಂಪಿನ 21 ಜನರನ್ನು ಬಂಧಿಸಿರುವುದಾಗಿ ಎಸ್ಪಿ ರೋಹನ್ ಜಗದೀಶ್ ಹೇಳಿದ್ದಾರೆ. ಎಸ್‌ಟಿ ರೈತನ ಜಮೀನಿನಲ್ಲಿ ನೀರಿನ ಹೊಂಡ ಇದೆ. ಅದರಲ್ಲಿ ಎಸ್‌ಸಿ ಯುವಕರು ಈಜಲು ಹೋಗಿದ್ದರು. ಬೇಸಿಗೆಯಲ್ಲಿ

ಬಾಲಕಿಯನ್ನು ವೇಶ್ಯಾವಾಟಿಕೆಗೆ ಕಳಿಸುತ್ತಿದ್ದ ತಾಯಿ, ಮಲತಂದೆ ಅರೆಸ್ಟ್‌

ಹಣಕ್ಕಾಗಿ 15 ವರ್ಷದ ಮಗಳನ್ನು ತಾಯಿ ಹಾಗೂ ಮಲತಂದೆ ಸೇರಿ ವೇಶ್ಯಾವಾಟಿಕೆಗೆ ಕಳಿಸುತ್ತಿದ್ದ ಪ್ರಕರಣವೊಂದು ಚಂದ್ರಾ ಲೇಔಟ್ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬಹಿರಂಗಗೊಂಡಿದೆ. ತಾಯಿ ಮತ್ತು ಮಲತಂದೆ, ಇನ್ನೊಬ್ಬ ಮಹಿಳೆಯನ್ನುಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಚಂದ್ರಾಲೇಔಟ್ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಈ

ಡಿಸಿ ಡಿಜಿಟಲ್ ಸಹಿ ದುರುಪಯೋಗ, ನಕಲಿ ಬಿಲ್‌: ಚಿತ್ರದುರ್ಗದಲ್ಲಿ ಐವರ ಬಂಧನ

ಜಿಲ್ಲಾಧಿಕಾರಿ ಮತ್ತು ಎಡಿಸಿ ಡಿಜಿಟಲ್ ಸಹಿ ದುರುಪಯೋಗಪಡಿಸಿಕೊಂಡು ನಕಲಿ ಬಿಲ್ ಸಲ್ಲಿಸಿದ ಆರೋಪದಡಿ ಚಿತ್ರದುರ್ಗ ನಗರಾಭಿವೃದ್ಧಿ ಕೋಶದ ಐವರು ಸಿಬ್ಬಂದಿ ಸೇರಿ ಒಟ್ಟು ಆರು ಜನರ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು,

ಅಡ್ರೆಸ್ ಕೇಳುವ ನೆಪದಲ್ಲಿ ಸರಗಳ್ಳತನ: ಏಳು ಪ್ರಕರಣದ ಮೂರು ಆರೋಪಿಗಳು ಅರೆಸ್ಟ್‌

ಮಾಗಡಿ ತಾಲೂಕಿನ ಕುದೂರು ಸಮೀಪದ ಕಳ್ಳಿಪಾಳ್ಯದಲ್ಲಿ ಅಡ್ರೆಸ್ ಕೇಳುವ ನೆಪದಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಭು (39), ವಸಂತಿ (37) ಮತ್ತು ಜ್ಯೋತಿ (32) ಬಂಧಿತ ಆರೋಪಿಗಳಾಗಿದ್ದಾರೆ. ಮಾ.3ರಂದು ಕುದೂರು ಸಮೀಪದ

ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ 10 ಕೋಟಿ ರೂ.ಗಳ ಡ್ರಗ್ಸ್‌ ವಶ, ಇಬ್ಬರ ಬಂಧನ

ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಸಿಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ 10 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.  ಎಲ್‌ಎಸ್‌ಡಿ, ಹೈಡ್ರೋ ಗಾಂಜಾ, ಚರಸ್ ಸೇರಿ ಹಲವು ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಕರ್ನಾಟಕದಲ್ಲಿ ಮೊದಲ ಬಾರಿಗೆ LSD ಸ್ಟ್ರಿಪ್ಸ್​​ಗಳನ್ನು ಸಿಸಿಬಿ

ಕಾರು ಚಲಾಯಿಸಿ ವ್ಯಕ್ತಿಯ ಹತ್ಯೆ: ಮೂವರು ವಿದ್ಯಾರ್ಥಿಗಳ ಬಂಧನ

ರಾಜ್ಯದ ಗಡಿಭಾಗ, ಬೆಂಗಳೂರು ಸಮೀಪವಿರುವ ತಮಿಳುನಾಡಿನ ಹೊಸೂರು ನಗರದಲ್ಲಿ ಕುಡಿದ ನಶೆಯಲ್ಲಿ ವಾಹನ ಚಾಲನೆ ಮಾಡಿದ್ದ ಕಾಲೇಜು ವಿದ್ಯಾರ್ಥಿಗಳು ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ್ದಾರೆ. ಹೊಸೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ ಶಿವಮೂರ್ತಿ (54)

ನಿರ್ದೇಶಕ ಅನೀಶ್‌ ಅಪಹರಣ, ದರೋಡೆ: ನಟಿ ಸೇರಿ 11ಆರೋಪಿಗಳ ಬಂಧನ

ನಿರ್ದೇಶಕ ಅನೀಶ್‌ ಅವರನ್ನು ಅಪಹರಿಸಿ ಚಿನ್ನಾಭರಣ ದೋಚಿದ್ದ ಗ್ಯಾಂಗ್‌ ಪೊಲೀಸ್‌ ಬೆಲೆಗೆ ಬಿದ್ದಿದೆ. ಭೀಮಾ ಸಿನಿಮಾ ನಟಿ ಸೇರಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತನಿಖೆ ಮುಂದುವರಿದಿದೆ. ನಿರ್ದೇಶಕ ಅನೀಶ್‌ ಇತ್ತೀಚೆಗೆ

ಕೊಳ್ಳೇಗಾಲದಲ್ಲಿ ಹುಲಿ ಶವ ಪತ್ತೆ: ಉರುಳಿಟ್ಟ ಆರೋಪಿ ಅರೆಸ್ಟ್‌

ಚಾಮರಾಜನಗರದ ಕೊಳ್ಳೇಗಾಲ ಗುಂಡಾಲ್ ಡ್ಯಾಂನಲ್ಲಿ ಗಂಡು ಹುಲಿಯ ಶವ ಪತ್ತೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ತನಿಖೆ ಕೈಗೊಂಡಿದ್ದು, ಉರುಳು ಹಾಕಿದ್ದ ಆರೋಪಿಯನ್ನು ಬಂಧಿಸಿದ್ದಾರೆ.  ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮದ ಕುಮಾರ್(35) ಬಂಧಿತ. ಆರೋಪಿಯು ವನ್ಯಜೀವಿ ಬೇಟೆಯಾಡಲು ಉರುಳು ಹಾಕಿದ್ದ. ಫೆಬ್ರವರಿ 15ರಂದು ಗಂಡು

ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್, ಆರಗ ಜ್ಞಾನೇಂದ್ರ ಆಪ್ತ ಸಹಾಯಕನ ಬಂಧನ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪದಡಿ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಹೊಸನಗರ ಭಾಗದ ಆಪ್ತ ಸಹಾಯಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇಲ್ಲಿನ ಹೊಸನಗರ ಜೆ.ಎಂ.ಎಫ್.ಸಿ ನ್ಯಾಯಾಲಯ

ಕೆಐಎನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳವಿತ್ತ ನಿಲ್ದಾಣ ಸಿಬ್ಬಂದಿ ಅರೆಸ್ಟ್‌

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಮಹಿಳೆಗೆ ವಿಮಾನಯಾನ ಸಂಸ್ಥೆಯ ಗ್ರೌಂಡ್-ಹ್ಯಾಂಡ್ಲಿಂಗ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.  ಮೊಹಮ್ಮದ್ ಅಫ್ಘಾನ್ ಅಹ್ಮದ್ ಬಂಧಿತ. ಮಾನ ನಿಲ್ದಾಣದ ಸಿಬ್ಬಂದಿಯೊಬ್ಬ ತಪಾಸಣೆಯ ನೆಪದಲ್ಲಿ ಅನುಚಿತ ಸ್ಪರ್ಶಿಸಿ ತಬ್ಬಿಕೊಂಡು ಲೈಂಗಿಕ