Menu

SIR : ಒಂದು ತಿಂಗಳು ವಿಸ್ತರಿಸಲು ಕೆಪಿಸಿಸಿ ಆಗ್ರಹ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಮತಗಟ್ಟೆ ಅಧಿಕಾರಿಗಳು ಮತದಾರರ ಮನೆಗೆ ಭೇಟಿ ನೀಡುವ ಅವಧಿಯನ್ನು ಇನ್ನೂ ಒಂದು ತಿಂಗಳು ವಿಸ್ತರಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್‌ ಬಾಬು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಎಸ್‌ಐಆರ್‌ ಹಿನ್ನೆಲೆ ಅನ್ಬುಕುಮಾರ್ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ನಡೆಸಿದ ಸಭೆಯಲ್ಲಿ ರಮೇಶ್‌ ಬಾಬು ಈ ಮನವಿ ಸಲ್ಲಿಸಿದ್ದಾರೆ. ಮತಗಟ್ಟೆ ಅಧಿಕಾರಿಗಳು ಬಿಎಲ್‌ಒ ಈವರೆಗೆ 1.11 ಕೋಟಿ ಮತದಾರರನ್ನು ಎಎಸ್‌ಡಿಡಿಒ ಎಂದು ವರ್ಗೀಕರಿಸಿದ್ದರು. ರೋಲ್‌ಬ್ಯಾಕ್‌ಗೆ ಅವಕಾಶ ನೀಡಿದ ನಂತರ ಎರಡು ಲಕ್ಷಕ್ಕೂ ಹೆಚ್ಚು ಮತದಾರರನ್ನು ಈ ವರ್ಗೀಕರಣದಿಂದ ಹೊರಗೆ ತೆಗೆಯಲಾಗಿದೆ. 1.08 ಕೋಟಿ ಮತದಾರರ ವಿವರ ಪರಿಶೀಲಿಸಿ ರೋಲ್‌ಬ್ಯಾಕ್‌ ಮಾಡಬೇಕಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ದಿನಗೂಲಿ ಕಾರ್ಮಿಕರು, ವಲಸಿಗರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಅಂಗವಿಕಲ ವ್ಯಕ್ತಿಗಳು ಸೇರಿದಂತೆ ಮತದಾರರು ಬಿಎಲ್ಒ ಭೇಟಿಗಳ ಸಮಯದಲ್ಲಿ ಲಭ್ಯವಿಲ್ಲದಿರಬಹುದು. ಹೀಗಾಗಿ ಅವರನ್ನು ಹೊರಗಿಡಬಾರದು. ಬಿಎಲ್‌ಒಗಳ ಮನೆ–ಮನೆ ಭೇಟಿ ಆಗಸ್ಟ್ 17ಕ್ಕೆ ಮುಗಿಯಲಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಎಲ್ಲ ಮತದಾರರ ಎಎಸ್‌ಡಿಡಿಒ ಪಟ್ಟಿಯನ್ನು ಪರಿಶೀಲಿಸಿ, ರೋಲ್‌ಬ್ಯಾಕ್‌ ಮಾಡಿಸುವುದು ಸಾಧ್ಯವಿಲ್ಲ. ಹೀಗಾಗಿ ಈ ಅವಧಿಯನ್ನು ವಿಸ್ತರಿಸಿ ಎಂದು ಕೋರಿದ್ದಾರೆ.

Related Posts

Leave a Reply

Your email address will not be published. Required fields are marked *