Thursday, October 08, 2026
Menu

ಬಿಎಂಟಿಸಿ ಟಿಕೆಟ್ ರೋಲ್ ಕದ್ದು ತರಕಾರಿ ಅಂಗಡಿಗೆ ಮಾರಾಟ

ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ನ ಪೇಪರ್ ಟಿಕೆಟ್ ರೋಲ್ ಹಣ್ಣು ಹಾಗೂ ತರಕಾರಿ ಅಂಗಡಿಯಲ್ಲಿ ಗ್ರಾಹಕರಿಗೆ ಬಿಲ್ ಕೊಡಲು ಬಳಕೆಯಾಗುತ್ತಿದೆ. ಯಲಹಂಕದ ಅಟ್ಟೂರು ಲೇಔಟ್​​ನ ಎಸ್​ಆರ್​ಎಸ್ ತರಕಾರಿ ಹಾಗೂ ಹಣ್ಣು ವ್ಯಾಪಾರಿ ಮಳಿಗೆಯಲ್ಲಿ ಟಿಕೆಟ್ ರೋಲ್ ಉಪಯೋಗಿಸಿ ತರಕಾರಿ ಹಾಗೂ ಹಣ್ಣಿನ ರೇಟ್ ಮುದ್ರಿಸಿ ಕೊಡಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಸೋಶಿಯಲ್ ಮೀಡಿಯಾದಲ್ಲಿ ಬಿಎಂಟಿಸಿಗೆ ಮಾಹಿತಿ ನೀಡಿದ ಬಳಿಕ ಬಿಎಂಟಿಸಿ ಅಧಿಕಾರಿಗಳು ಅಂಗಡಿಗೆ ಹೋಗಿ ಪರಿಶೀಲಿಸಿದಾಗ ಎರಡು ಟಿಕೆಟ್ ರೋಲ್ ಪತ್ತೆಯಾಗಿದೆ.

ಶಿಕ್ಷಕರ ನೇಮಕದ ಬದಲು ಶಾಲೆಗಳನ್ನೇ ಮುಚ್ಚಲು ಹೊರಟ ಸರ್ಕಾರದ ವಿರುದ್ಧ ಆಕ್ರೋಶ

ಕರ್ನಾಟಕದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಶಿಕ್ಷಕರ ನೇಮಕ ಮಾಡಿಕೊಳ್ಳುವ ಬದಲಿಗೆ ಕಡಿಮೆ ಹಾಜರಾತಿ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿದ್ದು, ಪ್ರತಿಭಟನೆ ಮೂಲಕ

ನಿಗಮಗಳಿಗೆ 5,000 ಕೋಟಿ ರೂ. ಅನುದಾನ ನೀಡಿ, ಜನರಿಗೆ ಸಾಲ ಕೊಡಿ: ಆರ್‌.ಅಶೋಕ

ಕಾಂಗ್ರೆಸ್‌ ಸರ್ಕಾರದಿಂದಾಗಿ ಕರ್ನಾಟಕ ಸೂತಕದ ಮನೆಯಾಗಿದೆ. ಆರ್ಥಿಕ ವ್ಯವಸ್ಥೆ ಹದಗೆಟ್ಟಿರುವುದರಿಂದ ಜನರು ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತಾಗಿ ನಿಗಮಗಳಿಗೆ 5,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ,

ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆಗೈದು ನಾಪತ್ತೆ ಪ್ರಕರಣ ದಾಖಲಿಸಿದಾಕೆ ಪೊಲೀಸ್‌ ಬಲೆಗೆ

ಚಾಮರಾಜನಗರ ತಾಲೂಕಿನ ಜನ್ನೂರು ಗ್ರಾಮದಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡಿ ಶವವನ್ನು ಬಿಸಾಡಿ ಪತಿ ನಾಪತ್ತೆ ಎಂದು ನಾಟಕವಾಡಿರುವ ಪ್ರಕರಣವೊಂದು ಬಯಲಾಗಿದೆ. ಜನ್ನೂರು ಗ್ರಾಮದ ರಮೇಶ್ (45) ಕೊಲೆಯಾದವರು, ಪತ್ನಿ ಗೀತಾ ಹಾಗೂ ಪ್ರಿಯಕರ ಗುರುಪಾದಸ್ವಾಮಿ ಬಂಧಿತ ಆರೋಪಿಗಳು. ದಂಪತಿಗೆ

ಕರ್ನಾಟಕ ದಿವಾಳಿ ಮಾಡುವುದೇ ಕಾಂಗ್ರೆಸ್‌ ಸರ್ಕಾರದ ಅಜೆಂಡಾ: ಆರ್‌. ಅಶೋಕ್‌

ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡಬೇಕೆಂಬುದೇ ಈ ಕಾಂಗ್ರೆಸ್‌ ಸರ್ಕಾರದ ಒನ್‌ ಲೈನ್‌ ಅಜೆಂಡಾ, ಸಾಲ ಮಾಡುವುದನ್ನೇ ಫುಲ್‌ ಟೈಂ ಕಾಯಕ ವನ್ನಾಗಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಪ್ರಸ್ತುತ ಕರ್ನಾಟಕದ ಒಟ್ಟು ಸಾಲವನ್ನು 6 ಲಕ್ಷ 65 ಸಾವಿರ ಕೋಟಿಗೆ ಮುಟ್ಟಿಸಿದ್ದಾರೆ. ಪ್ರತಿ ಕನ್ನಡಿಗನ

ಕರ್ನಾಟಕ ಮಾಹಿತಿ ಆಯೋಗಕ್ಕೆ ನೇಮಕ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಮುಖ್ಯ ಮಾಹಿತಿ ಆಯುಕ್ತ ಸೇರಿದಂತೆ ಎಂಟು ಮಂದಿ ಆಯುಕ್ತರನ್ನು ಕರ್ನಾಟಕ ಮಾಹಿತಿ ಆಯೋಗಕ್ಕೆ ನೇಮಕ ಮಾಡಿ ಸರಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಸುಪ್ರೀಂಕೋರ್ಟ್‌ ಆದೇಶ ಪಾಲಿಸದೆ ಈ ನೇಮಕ ನಡೆದಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಜೆ.ಪಿ.ನಗರದ ಕೆ.ಮಲ್ಲಿಕಾರ್ಜುನರಾಜು

ಬ್ಯಾಂಕ್‌ ಸಹಾಯವಾಣಿ ಹೆಸರಲ್ಲಿ ಬೆಂಗಳೂರಿನ ಮಹಿಳೆಗೆ 2 ಲಕ್ಷ ರೂ. ನಾಮ

ಬ್ಯಾಂಕ್‌ ಸಹಾಯವಾಣಿ ಹೆಸರಿನಲ್ಲಿ ಕರೆ ಮಾಡಿ ಮಹಿಳೆಯೊಬ್ಬರಿಗೆ 2 ಲಕ್ಷ ರೂ. ವಂಚಿಸಿರುವ ಪ್ರಕರಣ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ 58 ವರ್ಷದ ಮಹಿಳೆಯೊಬ್ಬರಿಗೆ ಬ್ಯಾಂಕ್ ಪ್ರತಿನಿಧಿಯ ಸೋಗಿನಲ್ಲಿ ವಂಚಕ ಕರೆ ಮಾಡಿ, ನಿಮ್ಮ ಖಾತೆಯಿಂದ ಬೇರೆ ಖಾತೆಗೆ

ಚಿಕ್ಕಮಗಳೂರಿನಲ್ಲಿ ಹೆಚ್ಚುತ್ತಿದೆ ಮಂಗನಕಾಯಿಲೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ 7 ಜನರಲ್ಲಿ ಮಂಗನ ಕಾಯಿಲೆ ಕಾಣಸಿಕೊಂಡಿದ್ದು ಆತಂಕ ಸೃಷ್ಟಿಯಾಗಿದೆ. ಖಾಂಡ್ಯ ಹೋಬಳಿಯ ಮತ್ತಿಖಂಡ‌ ಗ್ರಾಮದ 25 ವರ್ಷದ ಯುವಕನಲ್ಲಿ ಮೊದಲು ಈ ಕಾಯಿಲೆ ಕಾಣಿಸಿಕೊಂಡಿತ್ತು. ಈಗ ಎನ್​ಆರ್ ಪುರ ಗ್ರಾಮದ ಮೇಲ್ಪಾಲ್ ಗ್ರಾಮದಲ್ಲಿ ಮೂರು ಜನರಲ್ಲಿ ಕೆಎಫ್​ಡಿ ಕಾಣಿಸಿಕೊಂಡಿದ್ದು,

ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಕಲ ಸಿದ್ಧತೆ: 18 ದೇಶ ಭಾಗಿ, 10 ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷೆ

ಬೆಂಗಳೂರು: ಇದೇ ತಿಂಗಳ 12ರಿಂದ 14ರವರೆಗೆ ಇಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಕಲ ಸಿದ್ಧತೆಗಳೂ ಮುಗಿದಿದ್ದು, 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯನ್ನು ರಾಜ್ಯಕ್ಕೆ ಆಕರ್ಷಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಫೆ.11ರ ಸಂಜೆಯೇ ಸಮಾವೇಶವನ್ನು ಉದ್ಘಾಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ

ರಿಯಲ್ ಎಸ್ಟೇಟ್ ಗೆ ಎಚ್ಎಂಟಿ ಅರಣ್ಯ ಭೂಮಿ ಬಿಡಬೇಕೆ: ಎಚ್ ಡಿಕೆಗೆ ಈಶ್ವರ ಖಂಡ್ರೆ ತಿರುಗೇಟು

ಬೆಂಗಳೂರು, ಫೆ.3: ಕುದುರೇಮುಖ ಕಬ್ಬಿಣದ ಅದಿರು ಕಂಪನಿ ವಿಚಾರದಲ್ಲಿ ಕೆಐಓಸಿಎಲ್ ತಪ್ಪು ಮುಚ್ಚಿಕೊಳ್ಳಲು ಕರ್ನಾಟಕ ಸರ್ಕಾರದ ಮೇಲೆ ಎಚ್.ಡಿ. ಕುಮಾರಸ್ವಾಮಿ ಮಿಥ್ಯಾರೋಪ ಮಾಡುತ್ತಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ