Menu

ತಮಿಳುನಾಡಿನಲ್ಲಿ ವಿಶ್ವಾಸಮತ ಗೆದ್ದು ಭದ್ರಗೊಂಡ ವಿಜಯ್‌ ಸರ್ಕಾರ

ವಿಜಯ್ ಅವರ ಟಿವಿಕೆ ಪಕ್ಷ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಡಿಎಂಕೆ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಮುಖ್ಯಮಂತ್ರಿ ವಿಜಯ್‌ಗೆ ವಿಶ್ವಾಸಮತ ಪರೀಕ್ಷೆ ಎದುರಾಗಿದ್ದು, ಅವರು ಅದರಲ್ಲಿ ಗೆಲುವು ಕಾಣುವ ಮೂಲಕ ಸರ್ಕಾರ ಭದ್ರವಾಗಿದೆ. ವಿಧಾನಸಭೆಯಲ್ಲಿ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ವಿಜಯ್ ವಿಶ್ವಾಸ ಮತ ಯಾಚಿಸಿದ್ದರು. ಕಾಂಗ್ರೆಸ್ ಸೇರಿದಂತೆ ಹಲವು ಮೈತ್ರಿ ಪಕ್ಷಗಳು ಬೆಂಬಲ ಸೂಚಿಸಿವೆ. ಹಾಜರಿದ್ದ ಶಾಸಕರ ಒಟ್ಟು ಮತಗಳ ಆಧರಿಸಿ ಬೆಂಬಲ ನಿರ್ಧರಿಸಲಾಗಿದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಬಿಜೆಪಿ ಸಂಸದರು, ಕೇಂದ್ರ ಸಚಿವರು ಮಾತನಾಡಿ: ಡಿಕೆ ಶಿವಕುಮಾರ್

“ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ನೀಟ್ ಪರೀಕ್ಷೆ ರದ್ದಾಗಿರುವುದು ದೊಡ್ಡ ಅಪಮಾನ. ಇದರ ಬಗ್ಗೆ ಸಂಸದರು ಹಾಗೂ ಕೇಂದ್ರ ಸಚಿವರು ಮಾತನಾಡಬೇಕು” ಎಂದು ಡಿಕೆ ಶಿವಕುಮಾರ್  ಆಗ್ರಹಿಸಿದರು. ಬಿಡಿಎ ಕಚೇರಿ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೀಟ್

ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಬ್ಯಾನರ್ ಹಾಗೂ ಪೋಸ್ಟರ್‌ ಹಾಕಬೇಡಿ: ಟಿವಿಕೆ ಪಕ್ಷ ಮನವಿ

ತಮಿಳುನಾಡಿನಲ್ಲಿ ರಾಜಕೀಯ ಬ್ಯಾನರ್ ಹಾಗೂ ಪೋಸ್ಟರ್‌ಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಸಿಎಂ ವಿಜಯ್‌ ಅವರ ಟಿವಿಕೆ ಪಕ್ಷವು, ಚುನಾವಣೆಯಲ್ಲಿ ಗೆದ್ದ ಬಳಿಕ ವಿಜಯೋತ್ಸವದ ಹೆಸರಿನಲ್ಲಿ ರಸ್ತೆ, ಸಾರ್ವಜನಿಕ ಸ್ಥಳ ಹಾಗೂ ಫುಟ್‌ಪಾತ್‌ಗಳಲ್ಲಿ ಬ್ಯಾನರ್, ಪೋಸ್ಟರ್ ಹಾಕಬಾರದು ಎಂದು ರಾಜಕೀಯ ಪಕ್ಷಗಳಿಗೆ

ನಾನು ಧಾರವಾಡ ಪ್ರತ್ಯೇಕ ಪಾಲಿಕೆ ಪರವೆಂದ ಸಚಿವ ಸಂತೋಷ್‌ ಲಾಡ್‌

ಈ ಹಿಂದೆ  ಧಾರವಾಡ  ಪ್ರತ್ಯೇಕ ಪಾಲಿಕೆ ಕ್ಯಾಬಿನೆಟ್‌ನಲ್ಲಿ ಪಾಸ್ ಆಗಿ ರಾಜ್ಯಪಾಲರ ಬಳಿ ಹೋಗುವಂತೆ ಮಾಡುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈಗಲೂ ನಾನು ಪ್ರತ್ಯೇಕ ಪಾಲಿಕೆ ಪರವಾಗಿದ್ದೇನೆ.  ಕ್ಯಾಬಿನೆಟ್ ಸಭೆ ಇದ್ದು, ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡುವುದಾಗಿ ಸಚಿವ

ಶಾಲೆ-ಕಾಲೇಜುಗಳು, ದೇವಸ್ಥಾನಗಳು, ಬಸ್ ನಿಲ್ದಾಣಗಳ ಬಳಿ ಮದ್ಯದಂಗಡಿ ಮುಚ್ಚಲು ತಮಿಳುನಾಡು ಸಿಎಂ ವಿಜಯ್‌ ಆದೇಶ

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ರಾಜ್ಯದ ಶಾಲೆ-ಕಾಲೇಜುಗಳು, ದೇವಸ್ಥಾನಗಳು, ಬಸ್ ನಿಲ್ದಾಣಗಳ ಬಳಿ ಇರುವ 717 ಟಾಸ್ಮ್ಯಾಕ್ ಮದ್ಯದಂಗಡಿಗಳನ್ನು ತಕ್ಷಣ ಮುಚ್ಚುವಂತೆ ಆದೇಶಿಸಿದ್ದಾರೆ. ಮುಂದಿನ ಎರಡು ವಾರಗಳೊಳಗೆ ಈ ಎಲ್ಲ ಅಂಗಡಿಗಳಿಗೆ ಬೀಗ ಹಾಕುವಂತೆ ಸಿಎಂ ವಿಜಯ್ ಖಡಕ್ ಆಗಿ ಸೂಚಿಸಿದ್ದಾರೆ.

ಕೇಂದ್ರ ಸಚಿವರು, ಅಧಿಕಾರಿಗಳು ಸಾರ್ವಜನಿಕ ಸಾರಿಗೆ ಬಳಸಲಿ, ಬಿಜೆಪಿಯಿಂದ ತ್ಯಾಗ ಶುರುವಾಗಲಿ

“ಚಿನ್ನ ಖರೀದಿ ಮಾಡಬೇಡಿ, ಇಂಧನ ಬಳಕೆ ಕಡಿಮೆ ಮಾಡಿ ಎಂದು ಸಲಹೆ ನೀಡುತ್ತಿರುವ ಪ್ರಧಾನ ಮಂತ್ರಿಗಳು, ಇವುಗಳ ಬೆಲೆ ಏರಿಕೆಯಾಗಿದ್ದು ಯಾಕೆ? ಯಾರಿಂದ ಬೆಲೆ ಏರಿಕೆಯಾಗಿದೆ ಎಂಬುದನ್ನು ವಿವರಿಸಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಬೆಂಗಳೂರಿನ ಸರ್ಕಾರಿ ನಿವಾಸ ಕುಮಾರಪಾರ್ಕ್

ಸಂಪುಟ ಬದಲಾವಣೆ: ಹೈಕಮಾಂಡ್ ಉತ್ತರ ನೀಡಬೇಕಿದೆ ಎಂದ ಶಾಸಕ ಕೋನರಡ್ಡಿ

ಮೇ 15 ರ ನಂತರ ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಹೈಕಮಾಂಡ್ ಹೇಳಬೇಕಿದೆ. ಕೇರಳ ಮತ್ತು ತಮಿಳುನಾಡಿನ ಸ್ಥಿತಿಗತಿ ನೋಡಿ ಹೈಕಮಾಂಡ್ ಸಿಎಂ ಅವರನ್ನು ಕರೆಯಬೇಕು. ಕರೆದು ಅವರ ಜೊತೆ ಹೈಕಮಾಂಡ್ ಮಾತಾಡಬೇಕು ಎಂದು ನವಲಗುಂದ ಶಾಸಕ ಎಚ್.ಕೋನರೆಡ್ಡಿ ಹೇಳಿದರು ಸಿಎಂ 

ಶೃಂಗೇರಿ ಮರು ಮತ ಎಣಿಕೆ ರದ್ದುಗೊಳಿಸಿದ ಸುಪ್ರೀಂ: ಕಾಂಗ್ರೆಸ್‌ನ ರಾಜೇಗೌಡ ಶಾಸಕರಾಗಿ ಮುಂದುವರಿಕೆ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಆದೇಶ ನೀಡಿದೆ. ಹೈಕೋರ್ಟ್ ಸೂಚನೆಯಂತೆ ಇತ್ತೀಚೆಗೆ ನಡೆದಿದ್ದ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಗೆಲುವು ಸಾಧಿಸಿದ್ದರು. ಈಗ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ.

ಗೆಲುವಿನ ಅಂತರ: ಹೊಸದಾಗಿ ಅರ್ಜಿ ಸಲ್ಲಿಸಲು ಮಮತಾ ಬ್ಯಾನರ್ಜಿಗೆ ಸುಪ್ರೀಂ ಸೂಚನೆ

ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಸಮಯದಲ್ಲಿ ಗೆಲುವಿನ ಅಂತರವು ಡಿಲಿಟ್‌ ಮಾಡಲಾಗಿರುವ ಮತಗಳಿಗಿಂತ ಕಡಿಮೆಯಾಗಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಇತರರು ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಸುಪ್ರೀಂ

ಮಾದಪ್ಪನ ಭಕ್ತರಿಗೆ ಭದ್ರತೆ ನೀಡಲು ರಾಜ್ಯಸರ್ಕಾರ ವಿಫಲ: ಆರ್‌ ಅಶೋಕ

ಮಾದಪ್ಪನ ಭಕ್ತರಿಗೆ ಭದ್ರತೆ ನೀಡಲು ರಾಜ್ಯ @INCKarnataka ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇವಲ ಕೆಲವು ದಿನಗಳ ಅಂತರದಲ್ಲಿ ಮೂರು ಚಿರತೆ ದಾಳಿಗಳು, ಎರಡು ಅಮಾಯಕ ಭಕ್ತರ ಸಾವು, ಇದು ಆಡಳಿತ ವೈಫಲ್ಯ ಅಲ್ಲವೇ? ಇದು ಸರ್ಕಾರದ ಘೋರ ನಿರ್ಲಕ್ಷ್ಯ ಅಲ್ಲವೇ ಎಂದು