Menu

ಬಿಡದಿ ಅಧಿಕಾರಿಗಳಿಗೆ ಪೊರಕೆ ಏಟು ಸಿಎಂ ಧೋರಣೆಗೆ ಹಿಡಿದ ಕೈಗನ್ನಡಿ: ಬಿವೈ ವಿಜಯೇಂದ್ರ

ಬಿಡದಿಯಲ್ಲಿ ಸರ್ವೆಗೆ ಹೋದ ಅಧಿಕಾರಿಗಳ ಕಾರು ತಡೆದು ಪೊರಕೆಯಲ್ಲಿ ಹೊಡೆದಿದ್ದಾರೆ. ರಾಜ್ಯದ ಸಿಎಂ ಧೋರಣೆಗೆ ಅಧಿಕಾರಿಗಳು ಬಿಸಿ ಅನುಭವಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈವಿಜಯೇಂದ್ರ ಹೇಳಿದರು.

ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಡಿಕೆಶಿ ಅವರಿಗೆ ರೈತರ ಹಿತಾಸಕ್ತಿ ಬೇಕಿಲ್ಲ. ಅವರಿಗೆ ರಿಯಲ್ ಎಸ್ಟೇಟ್ ಬೇಕಾಗಿದೆ ಎಂದು ಆರೋಪಿಸಿದರು.

ಹಿಂದಿನ ಸಿಎಂ ಕೂಡ ಉತ್ತರ ಕರ್ನಾಟಕದ ಬಗ್ಗೆ ಆಸಕ್ತಿ ತೋರಿರಲಿಲ್ಲ. ಈ ಸಿಎಂಅದನ್ನೇ ಮಾಡ್ತಿದ್ದಾರೆ.  ಬಿಡದಿ ಟೌನ್ ಶಿಪ್ ಬಗ್ಗೆ ಇರೋ‌ ಕಾಳಜಿ ಕಲ್ಯಾಣ ಕರ್ನಾಟಕ ಭಾಗದ ಕಾಳಜಿ ಇಲ್ಲ ಎಂದರು.

ಪ್ರಿಯಾಂಕ್ ಖರ್ಗೆ ಅವರಿಗೆ  ಕ್ಷೇತ್ರದ ಬಗ್ಗೆ ಕಾಳಜಿ ಇಲ್ಲ. ಅವರು ಅಂತರಾಷ್ಟ್ರೀಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.‌ ಉಕ್ರೇನ್-ರಷ್ಯಾ,ಇರಾನ್ ಅಮೇರಿಕಾ ಯುದ್ದ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.  ಅವರದ್ದೇ ಕ್ಷೇತ್ರದಲ್ಲಿ ಮಕ್ಕಳು ಕಲುಷಿತ ಆಹಾರ ಸೇವಿಸಿ ಆಸ್ಪತ್ರೆ ಸೇರಿದ್ದರೂ ತಲೆ‌ ಕೆಡಿಸಿಕೊಂಡಿಲ್ಲ ಎಂದು  ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಬರ ಇದ್ರೂ ಇಲ್ಲಿಯವರೆಗೆ ಕೃಷಿ ಸಚಿವರು ನೇಮಕ ಆಗಿಲ್ಲ. ಸಿಎಂ ಡಿಕೆಶಿ ಸರ್ಕಾರ ರಾಜ್ಯದ ಅಭಿವೃದ್ದಿ ಮರೆತು ಕೇವಲ  ರಿಯಲ್ ಎಸ್ಟೇಟ್‌ ಮಾಡ್ತಿದ್ದಾರೆ.    ಬೀದರ್ – ಕಲಬುರಗಿಗೆ ಬಂದು ಸಿಎಂ ಪೋಟೋ ಶೂಟ್ ಮಾಡಿ ಹೋಗಿದ್ದಾರೆ. ಸಿಎಂ ಡಿಕೆಶಿ ಕಥೆ ಹೇಳೋದನ್ಬಿನುಟ್ಟು ರೈತರ ಸಮಸ್ಯೆ ಆಲಿಸಬೇಕು. ಬಿಡದಿ ಟೌನ್ ಶಿಪ್ ಬಗ್ಗೆ ಇವರಿಗೆ ತಲೆಕೆಡಿಸಿಕೊಳ್ಳೋಕೆ ಸಮಯವಿದೆ.‌ ಯಾಕೆ ರೈತರ ಬಗ್ಗೆ ಇಲ್ಲ ಎಂದು ಕಿಡಿಕಾರಿದರು.

ಎಸ್ ಐ ಆರ್ ಪ್ರಕ್ರಿಯೆಯನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ.  ವಲಸಿಗರಿಗೆ ಎಫ್‌ ಆರ್ ಸಿ ಸರ್ಟಿಫಿಕೆಟ್ ಕೊಡ್ತಿದೆ. ಇದೊಂದು ದೇಶದ್ರೋಹದ ಕೆಲಸ.  ಅನ್ಯದೇಶದವರಿಗೆ ಎಫ್ ಆರ್ ಸಿ‌ ಪ್ರಮಾಣ ಪತ್ರ‌ ನೀಡ್ತಿದೆ ಎಂದರು.

ಮಾಜಿ ಎಂಪಿ ಡಾ. ಉಮೇಶ ಜಾಧವ್, ಶಾಸಕ ಬಸವರಾಜ ಮತ್ತಿಮಡು, ಬಿ.ಜಿ ಪಾಟೀಲ, ಸುಭಾಸ್ ಗುತ್ತೇದಾರ್,ರಾಜಕುಮಾರ ಪಾಟೀಲ ತೇಲ್ಕೂರ್ , ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಚಂದು ಪಾಟೀಲ, ಅಮರನಾಥ ಪಾಟೀಲ, ಶಿವರಾಜ ಪಾಟೀಲ ರದ್ದೇವಾಡಗಿ, ಮಹೇಂದ್ರ ಪೂಜಾರಿ ,ಸಂತೋಷ ಹಾದಿಮನಿ ಸೇರಿದಂತೆ ಇನ್ನಿತರರಿದ್ದರು.

Related Posts

Leave a Reply

Your email address will not be published. Required fields are marked *