Menu

ಪರಿಷತ್‌ನಲ್ಲಿ ಅಶೋಕ ಮತ್ತು ವಿಜಯೇಂದ್ರ ಅಡ್ಡ ಮತದಾನ ಮಾಡಿಸಿರಬೇಕು: ಶಾಸಕ ಸೋಮಶೇಖರ್‌

ಬಿಜೆಪಿ ಶಾಸಕರಿಂದ ಅಡ್ಡ ಮತದಾನಕ್ಕೆ ಆಂತರಿಕ ಕಲಹವೇ ಕಾರಣ ಎಂದು ಆರೋಪಿಸಿದ್ದಾರೆ. ಪ್ರತಿಪಕ್ಷ ನಾಯಕ ಆರ್ ಅಶೋಕ ಅವರು ವಿಜಯೇಂದ್ರ ಕಡೆಯ ಅಭ್ಯರ್ಥಿ ಸೋಲಿಸಬೇಕೆಂದು, ಅಶೋಕ ಕಡೆ ಅಭ್ಯರ್ಥಿ ಸೋಲಿಸಲು ವಿಜಯೇಂದ್ರ ಅಡ್ಡ ಮತದಾನ ಮಾಡಿಸಿರಬೇಕು ಎಂದು ಬಿಜೆಪಿ ಉಚ್ಚಾಟಿತ ಶಾಸಕ ಎಸ್‌ಟಿ ಸೋಮಶೇಖರ್‌ ಹೇಳಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಬೆಳವಣಿಗೆಯು ರಾಜ್ಯ ಬಿಜೆಪಿಯನ್ನು ತಳಮಳಗೊಳಿಸಿದ್ದು, ಸಂಬಂಧಿಸಿದಂತೆ ವರದಿ ನೀಡುವಂತೆ ಹೈಮಾಂಡ್‌ ಕಟ್ಟಪ್ಪಣೆ ಮಾಡಿದೆ. ಈ ನಡುವೆ ಅಡ್ಡ ಮತದಾನ ಮಾಡಿದವರ ವಿರುದ್ಧ ರಾಜ್ಯ ಬಿಜೆಪಿ ನಾಯಕರ ವಾಗ್ದಾಳಿ ಮುಂದುವರಿದಿದ್ದು, ಅಂತವರ ವಿರುದ್ಧ ಪಕ್ಷ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬ ಹೇಳಿಕೆ ಹೊರ ಬರುತ್ತಿದೆ.

ರಾಜ್ಯ ಬಿಜೆಪಿ ನಾಯಕರ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ  ಶಾಸಕ ಸೋಮಶೇಖರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಶಾಸಕರಿಂದ ಅಡ್ಡ ಮತದಾನಕ್ಕೆ ಆಂತರಿಕ ಕಲಹವೇ ಕಾರಣ ಎಂದು ಆರೋಪಿಸಿದ್ದಾರೆ. ಪ್ರತಿಪಕ್ಷ ನಾಯಕ ಆರ್ ಅಶೋಕ ಅವರು ವಿಜಯೇಂದ್ರ ಕಡೆಯ ಅಭ್ಯರ್ಥಿ ಸೋಲಿಸಬೇಕೆಂದು, ಅಶೋಕ ಕಡೆ ಅಭ್ಯರ್ಥಿ ಸೋಲಿಸಲು ವಿಜಯೇಂದ್ರ ಅಡ್ಡ ಮತದಾನ ಮಾಡಿಸಿರಬೇಕು. ಹೀಗಾಗಿ ಇವರಿಬ್ಬರು ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡಿದರೆ ಸಾಕು ಎಂದಿದ್ದಾರೆ.

ನಮ್ಮನ್ನು ಉಚ್ಛಾಟನೆ ಮಾಡಿ ಗೂಬೆ ಕೂರಿಸಲು ಹೊರಟಿದ್ದಾರೆ. ಇವರಿಬ್ಬರೂ 63 ಶಾಸಕರನ್ನು ಕರೆದು ಮಾತಾಡಿ ಸುಪರ್ದಿಯಲ್ಲಿ ಇರಿಸಬೇಕಿತ್ತು. ಕಾಂಗ್ರೆಸ್​ ಪಕ್ಷದಲ್ಲಿ ಎಲ್ಲಾ ಶಾಸಕರಿಗೂ ಟ್ರೈನಿಂಗ್ ಕೊಟ್ಟಿದ್ದರು, ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರು. ಬಿಜೆಪಿಯವರು ಶಾಸಕರಿಗೆ ವಿಪ್ ಕೂಡ ಜಾರಿ ಮಾಡಲಿಲ್ಲ. ಬೆಳಗ್ಗೆ 9ಕ್ಕೆ ಚುನಾವಣೆ ಇದೆ ಅಂದಾಗ 8 ಗಂಟೆಗೆ ಹೇಳಿದ್ದಾರೆ. ಬಿಜೆಪಿಯವರ ಆಂತರಿಕ ಕಲಹದಿಂದ ಅಡ್ಡ ಮತದಾನ ಆಗಿದೆ ಎಂದು ಹೇಳಿದ್ದಾರೆ.

ಸೋಮಶೇಖರ್, ಶಿವರಾಮ ಹೆಬ್ಬಾರ್​ ರಾಜೀನಾಮೆ ನೀಡಲಿ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೂ ಸೋಮಶೇಖರ್ ತಿರುಗೇಟು ನೀಡಿದ್ದು, ಶೋಭಾಗೆ ಅಶೋಕ ಅವರನ್ನು ಕಂಡರಾಗಲ್ಲ. ವಿಜಯೇಂದ್ರ ಅವರನ್ನು ಕಂಡರೂ ಆಗಲ್ಲ, ಬಿಜೆಪಿಯಲ್ಲಿ ಇಷ್ಟೆಲ್ಲ ಅಲ್ಲೋಲ ಕಲ್ಲೋಲಕ್ಕೆ ಅವರೇ ಕಾರಣ. ಮೊದಲು ಅವರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ನಿಲ್ಲಿಸಲಿ. ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದಾರೆ, ನಾವು ಅವರಿಗೆ ಮತ ಹಾಕಿದ್ದೇವೆ ಎಮಬುದನ್ನು ಬಹಿರಂಗವಾಗಿಐಏ ಹೇಳಿದ್ದೇವೆ. ಬಿಜೆಪಿಯಲ್ಲಿ ಅಡ್ಡ ಮತ ಹಾಕಿದವರು ಯಾರೆಂದು ಕಂಡು ಹಿಡಿಯಲಿ. ಅದು ಬಿಟ್ಟು ನನ್ನ ಕೆಣಕಿದರೆ ತಕ್ಕ ಉತ್ತರ ಕೊಡುವುದಾಗಿ ವಾಗ್ದಾಳಿ ನಡೆಸಿದ್ದಾರೆ.

ಅಡ್ಡಮತದಾನ ವಿಚಾರವನ್ನು ಬಿಜೆಪಿ ಹೈಕಮಾಂಡ್​​ ಗಂಭೀರವಾಗಿ ಪರಿಗಣಿಸಿದೆ. ಹೀಗೆ ಮಾಡಿದವರು ಯಾರೆಂದು ಪತ್ತೆ ಹಚ್ಚಲು ರಾಜ್ಯ ಬಿಜೆಪಿ ಅಧ್ಯಕ್ಷರ ಆದೇಶದಂತೆ ಸಿ.ಟಿ. ರವಿ ನೇತೃತ್ವದ ಸಮಿತಿ ಮಾಹಿತಿ ಸಂಗ್ರಹಿಸುತ್ತಿದೆ.

Related Posts

Leave a Reply

Your email address will not be published. Required fields are marked *