Menu

ಬೆಂಗಳೂರಿನ ಹಲವೆಡೆ ಇಂದು ಸಂಜೆ 5 ರವರೆಗೆ ವಿದ್ಯುತ್‌ ವ್ಯತ್ಯಯ

ಬೆಂಗಳೂರಿನ ಹಲವೆಡೆ ಇಂದು (ಶನಿವಾರ) ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್‌ ವ್ಯತ್ಯಯ ಇರಲಿದೆ. KPTCL ಮತ್ತು BESCOM ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆ ಸೆಂಟ್ರಲ್‌, ಪೂರ್ವ, ಈಶಾನ್ಯ ಮತ್ತು ಉತ್ತರ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ನಿರ್ವಹಣಾ ಕಾಮಗಾರಿಗಳು ಪೂರ್ಣಗೊಂಡಲ್ಲಿ ಮುನ್ಸೂಚನೆ ಇಲ್ಲದೆ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲಾಗುವುದು, ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲೆಲ್ಲಿ ವಿದ್ಯುತ್‌ ಅಡಚಣೆ?
ಮಧ್ಯ ಬೆಂಗಳೂರು ಮತ್ತು ಕಮರ್ಷಿಯಲ್ ಏರಿಯಾ: ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಲ್ಯಾವೆಲ್ಲೆ ರಸ್ತೆ, ರೆಸಿಡೆನ್ಸಿ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆ ಕ್ರಾಸ್, ವಿಠ್ಠಲ್ ಮಲ್ಯ ರಸ್ತೆ, ವಾಲ್ಟನ್ ರಸ್ತೆ, ಚರ್ಚ್ ಸ್ಟ್ರೀಟ್, ಕಸ್ತೂರಬಾ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕ್ವೀನ್ಸ್ ವೃತ್ತ, ಹೊಂಡೈ ಆರ್‌ಎಂಯು, ಐಟಿಸಿ ಹೋಟೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಐಟಿ ಕಾರಿಡಾರ್ ಮತ್ತು ಟೆಕ್ ಪಾರ್ಕ್‌ಗಳು: ಮಾನ್ಯತಾ ಟೆಕ್ ಪಾರ್ಕ್ ಮತ್ತು ಮಾನ್ಯತಾ ರೆಸಿಡೆನ್ಸಿ, ಇಪಿಐಪಿ ಲೇಔಟ್ ಮತ್ತು ಇಪಿಐಪಿ ಇಂಡಸ್ಟ್ರಿಯಲ್ ಏರಿಯಾ, ಸಾಲಾರ್‌ಪುರಿಯಾ ಟೆಕ್ ಪಾರ್ಕ್, ಬಾಗ್ಮನೆ ನಿಯಾನ್ ಬಿಲ್ಡಿಂಗ್ ಮತ್ತು ಬಾಗ್ಮನೆ ನಿಯಾನ್ ಬ್ಲಾಕ್, ಎಸ್‌ಜೆಆರ್ ಟೆಕ್ ಪಾರ್ಕ್, ಟಿಸಿಎಸ್ ಸಾಫ್ಟ್‌ವೇರ್ ಸಂಸ್ಥೆ, ಕಾರ್ಲೆ ಟೌನ್ ಸೆಂಟರ್, ಗೋಪಾಲನ್ ಗ್ಲೋಬಲ್ ಆಕ್ಸೆಸ್ ಮತ್ತು ಗೋಪಾಲನ್ ಎಂಟರ್‌ಪ್ರೈಸಸ್ ಕ್ಯಾಂಪಸ್‌
ಪೂರ್ವ ಮತ್ತು ಈಶಾನ್ಯ ಭಾಗದ ಬಡಾವಣೆಗಳು: ದೊಮ್ಮಲೂರು 2ನೇ ಹಂತ, ದೊಮ್ಮಲೂರು ಗ್ರಾಮ, ಕೋಡಿಹಳ್ಳಿ, ಯೋಗಾನಂದ ಲೇಔಟ್, ಪರಮಹಂಸ ರಸ್ತೆ, ಧೂಪನಹಳ್ಳಿ, ಎಚ್‌ಎಎಲ್ 2ನೇ ಹಂತ, ಇಎಸ್‌ಐ ಆಸ್ಪತ್ರೆ , ಜೆಆರ್‌ಆರ್ ಲೇಔಟ್, ಕುಂದಲಹಳ್ಳಿ ಮುಖ್ಯ ರಸ್ತೆ, ಗ್ರಾಫೈಟ್ ವೃತ್ತ, ಚೆನ್ನಮ್ಮ ಲೇಔಟ್, ಆರ್‌ಜಿ ಹಳ್ಳಿ–ಸಿದ್ದಾಪುರ ಗೇಟ್.

ಉತ್ತರ ಬೆಂಗಳೂರು ಮತ್ತು ಅಪಾರ್ಟ್‌ಮೆಂಟ್‌ಗಳು: ಹೆಬ್ಬಾಳ ಅಪಾರ್ಟ್ಮೆಂಟ್ ಲೇಔಟ್, ವೆಂಕಟೇಗೌಡ ಲೇಔಟ್, ಬಿ.ಟಿ.ಎಸ್. ಲೇಔಟ್, ಗೋದ್ರೇಜ್ ಅಪಾರ್ಟ್ಮೆಂಟ್, ವಿಕಾನಯ ಅಪಾರ್ಟ್ಮೆಂಟ್, ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ಸ್, ಜೆಎನ್‌ಸಿ, ಮಧುವನ ಎಂ 2 ಬ್ಲಾಕ್, ರಾಚೇನಹಳ್ಳಿ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್, ರಾಯಲ್ ಎನ್‌ಕ್ಲೇವ್, ಮೇಸ್ತ್ರಿ ಪಾಳ್ಯ, ಥಣಿಸಂದ್ರ, ಬಿ. ನಾರಾಯಣಪುರ ಕ್ರಾಸ್, ಬಿಡಿಎಸ್ ಲೇಔಟ್, ಅಮರಜ್ಯೋತಿ ಲೇಔಟ್ ಹಾಗೂ ಮರಿಯಣ್ಣಪಾಳ್ಯ.

Related Posts

Leave a Reply

Your email address will not be published. Required fields are marked *