Menu

ಸಂತ್ರಸ್ತೆ, ತಾಯಿ, ಅಜ್ಜಿ, ತನ್ನ ಪತ್ನಿ, ಮಕ್ಕಳಿಬ್ಬರನ್ನು ಕೊಲೆಗೈದ ಪೋಕ್ಸೊ ಆರೋಪಿ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ತಾಲೂಕಿನಲ್ಲಿ ಪೋಕ್ಸೊ ಪ್ರಕರಣದ ಆರೋಪಿಯು ಸಂತ್ರಸ್ತೆ, ಆಕೆಯ ತಾಯಿ, ಅಜ್ಜಿ ಮತ್ತು ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿ ಆರು ಮಂದಿಯನ್ನು ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ.

ಪೋಕ್ಸೊ ಆರೋಪಿ ರಾಜ್‌ಕುಮಾರ್ (28) ಎಂಬಾತ ಆರು ಮಂದಿಯನ್ನು ಹತ್ಯೆ ಮಾಡಿದಾತ. ಪೋಕ್ಸೋ ಪ್ರಕರಣದ 17 ವರ್ಷದ ಸಂತ್ರಸ್ತೆಯನ್ನು, ಆಕೆಯ ತಾಯಿ ಮತ್ತು ಅಜ್ಜಿಯನ್ನು ಆರೋಪಿಯು ಅವರ ಮನೆಯಲ್ಲಿಯೇ ಕೊಂದು, 17 ವರ್ಷದ ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಬಳಿಕ ಮನೆಗೆ ಬಂದ ಆರೋಪಿಯು ತನ್ನ ಪತ್ನಿ ಸರಿತಾ ಮತ್ತು ಮಕ್ಕಳಾದ ಪರೀಕ್ಷಿತ್ (3) ಮತ್ತು ಧೈವಿಕ್ಷಿತ್ (2) ಅವರನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಕೊಎಗಳ ನಂತರ ಆತ ತನ್ನ ಪೋಷಕರಿಗೆ ಕರೆ ಮಾಡಿ ಕುಟುಂಬವನ್ನು ಕೊಂದಿರುವುದಾಗಿ ತಿಳಿಸಿ ಪರಾರಿಯಾಗಿದ್ದಾನೆ.

ಮಾಹಿತಿ ಪಡೆದ ಫ್ಯೂಚರ್ ಸಿಟಿ ಆಯುಕ್ತ ತರುಣ್ ಜೋಶಿ, ಚೆವೆಲ್ಲಾ ಡಿಸಿಪಿ ಯೋಗೇಶ್ ಗೌತಮ್ ಮತ್ತು ಇತರ ಅಧಿಕಾರಿಗಳು, ಶ್ವಾನ ದಳಗಳು ಬಂದು ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸಿದ್ದು, ತನಿಖೆ ತೀವ್ರಗೊಂಡಿದೆ.

ಸಂತ್ರಸ್ತ ಬಾಲಕಿ ಮತ್ತು ಆಕೆಯ ತಾಯಿ ಮೇ 16ರಂದು ಪೊಲೀಸ್ ಠಾಣೆಯಲ್ಲಿ ರಾಜ್‌ಕುಮಾರ್ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಪೋಕ್ಸೋ ಪ್ರಕರಣದಡಿ ಪೊಲೀಸರು ಆತನನ್ನು ಬಂಧಿಸಿದ್ದರು. ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿಂದ ಹೊರ ಬಂದಿದ್ದ. ಪೊಲೀಸರ ಸಮಗ್ರ ತನಿಖೆಯ ಬಳಿಕ ಇಡೀ ಪ್ರಕರಣದ ಸತ್ಯಾಸತ್ಯತೆ ಏನೆಂಬುದು ಹೊರ ಬರಲಿದೆ.

Related Posts

Leave a Reply

Your email address will not be published. Required fields are marked *