Featured
ಮೂರು ದಿನದ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಮಧುಗಿರಿ ತಾಲೂಕಿನಲ್ಲಿ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಮಧು (38) ಎಂಬ ವ್ಯಕ್ತಿ ಬೈಕ್ ಸಮೇತ ಶವವಾಗಿ ಪತ್ತೆಯಾಗಿದ್ದಾರೆ. ಮಧುಗಿರಿಯ ಹೊಸಕೆರೆ-ನೇರಳೆಕೆರೆ ರಸ್ತೆಯಲ್ಲಿರುವ ಲಕ್ಷ್ಮೀದೇವಿಪುರ ಗ್ರಾಮದ ಬಳಿ ಮೃತದೇಹ ಪತ್ತೆಯಾಗಿದೆ. ಇವರು ಕಾಣೆಯಾಗಿದ್ದ ಬಗ್ಗೆ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಸ್ತೆಯಲ್ಲಿರುವ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯಿಂದ ಕೆಳಗೆ ಬಿದ್ದು ಮಧು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
53ನೇ ಸಿಜೆಐ ಆಗಿ ಜಸ್ಟಿಸ್ ಸೂರ್ಯಕಾಂತ್ ಪ್ರಮಾಣ ವಚನ
ದೇಶದ 53ನೇ ಸಿಜೆಐ ಆಗಿ ಜಸ್ಟಿಸ್ ಸೂರ್ಯಕಾಂತ್ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಸೂರ್ಯಕಾಂತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು
ಅಧಿಕಾರ ಹಂಚಿಕೆ: ಹೈಕಮಾಂಡ್ ತೀರ್ಮಾನಕ್ಕೆ ನಾನೂ, ಶಿವಕುಮಾರ್ ಬದ್ಧರಾಗಬೇಕು ಎಂದ ಸಿಎಂ
ನಮ್ಮಲ್ಲಿ ಹೈ ಕಮಾಂಡ್ ಏನು ತೀರ್ಮಾನ ಮಾಡ್ತಾರೋ ಅದರಂತೆ ನಾನು ಹಾಗೂ ಡಿ ಕೆ ಶಿವಕುಮಾರ್ ಒಪ್ಪಬೇಕು, ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಡಿಕೆ ಶಿವಕುಮಾರ್ ಬದ್ಧರಾಗಬೇಕು ಎಂದು ಮುಖ್ಯಮಂತ್ರಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಕ್ಕಬಳ್ಳಾಪುರ- ಶಿಡ್ಲಘಟ್ಟದಲ್ಲಿ
ನ್ಯಾಯಾಂಗ ಬಂಧನ ಮುಗಿದರೂ ಹಾಜರುಪಡಿಸದ ಪೊಲೀಸ್: ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್
ನ್ಯಾಯಾಂಗ ಬಂಧನದ ಅವಧಿ ಮುಗಿದ ನಂತರ ಪೊಲೀಸರು ಕಸ್ಟಡಿ ವಿಸ್ತರಣೆಗೆ ಕೋರದ ಮತ್ತು ಬಂಧಿತನನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸದ ಕಾರಣ ಪ್ರಕರಣವೊಂದರಲ್ಲಿ ಯುವಕನಿಗೆ ಹೈಕೋರ್ಟ್ ಜಾಮೀನು ನೀಡಿದೆ. ನ್ಯಾಯಾಂಗ ಬಂಧನದಲ್ಲಿದ್ದ ಮಂಡ್ಯ ಹುಬ್ಬನಹಳ್ಳಿ ಗ್ರಾಮದ ಎಚ್.ವಿ.ಚರಣ್ ಜಾಮೀನು ಕೋರಿ ಸಲ್ಲಿಸಿದ್ದ
ಮಾಲೂರಿನಲ್ಲಿ ಬ್ರಿಡ್ಜ್‌ನಿಂದ ಉರುಳಿದ ಕಾರು: ಸ್ಥಳದಲ್ಲೇ ನಾಲ್ವರು ಯುವಕರ ಸಾವು
ಕೋಲಾರದ ಮಾಲೂರು ತಾಲೂಕಿನ ಅಬ್ಬೇನಹಳ್ಳಿ ಬ್ರಿಡ್ಜ್ ಬಳಿ ತಡರಾತ್ರಿ ಚೆನ್ನೈ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಾರು ಬ್ರಿಡ್ಜ್ ಮೇಲಿನಿಂದ ಉರುಳಿ ನಾಲ್ವರು ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟ ಯುವಕರು ಚೆನ್ನೈನವರಾಗಿದ್ದು, ಗೋಪಿ (38), ಗೌತಮ್ ರಮೇಶ್ (28), ಹರಿಹರನ್ (27),
ಡಿಕೆ ಶಿವಕುಮಾರ್ ಸಿಎಂ ಆಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ತವರಿನಲ್ಲಿ ಅಭಿಮಾನಿಗಳಿಂದ ಪೂಜೆ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಅಭಿಮಾನಿಗಳು ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಮಾಲಾಧಾರಿಗಳಾಗಿ ಶಬರಿಮಲೆ ಯಾತ್ರೆಗೆ ಸಿದ್ಧರಾಗಿರುವ ಭಕ್ತರು ಡಿಕೆ ಶಿವಕುಮಾರ್ ಅವರ ಭಾವಚಿತ್ರ
ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್‌ಗಳ ಮದುವೆಯಾಗಿ ಕೋಟಿ ಕೋಟಿ ದೋಚುತ್ತಿದ್ದ ಮಹಿಳೆ ಪೊಲೀಸ್ ಬಲೆಗೆ
ಪೊಲೀಸರು ಸೇರಿದಂತೆ ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್‌ಗಳನ್ನು ಒಲಿಸಿ ಮದುವೆಯಾಗಿ ನಂಬಿಸುವುದು, ಮತ್ತೆ ಕೆಲವರನ್ನು ಸಂಬಂಧ ಬೆಳೆಸಿ ಬಲೆಗೆ ಬೀಳಿಸುವುದು, ಬಳಿಕ ಅವರಲ್ಲಿದ್ದ ಹಣವನ್ನೆಲ್ಲ ದೋಚುವುದನ್ನೇ ಜೀವನವನ್ನಾಗಿಸಿಕೊಂಡಿದ್ದ ಉತ್ತರ ಪ್ರದೇಶದ ಮಹಿಳೆಯೊಬ್ಬಳು ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಕೆಲವು ಬ್ಯಾಂಕ್ ಮ್ಯಾನೇಜರ್ ಮತ್ತು
ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಕೇರಳದ ವಿದ್ಯಾರ್ಥಿಗಳಿಬ್ಬರ ಸಾವು, ಆತ್ಮಹತ್ಯೆ ಶಂಕೆ
ಬೆಂಗಳೂರಿನ ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಹೈಸ್ಪೀಡ್ ರೈಲಿಗೆ ಸಿಲುಕಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ, ಇದು ಆತ್ಮಹತ್ಯೆ ಆಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಕೇರಳದ ಸ್ಟೆರ್ಲಿನ್ ಎಲಿಜ ಶಾಜಿ (19), ಜಸ್ಟಿನ್ ಜೋಸೆಫ್ (20) ಮೃತಪಟ್ಟಿರುವ ವಿದ್ಯಾರ್ಥಿಗಳು.
ಸಿದ್ದರಾಮಯ್ಯರಿಗೆ ಕಪಟ ಬುದ್ಧಿ ಇಲ್ಲ, ಶಿವಕುಮಾರ್‌ಗೆ ಸಿಎಂ ಸ್ಥಾನ ಖಚಿತ: ಹುಲಿಗೆಮ್ಮದೇವಿ ಆರಾಧಕಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಅವರನ್ನು ತಮ್ಮನಂತೆ ನೋಡಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಹತ್ತಿರ ಕಪಟ ಬುದ್ಧಿ ಇಲ್ಲ. ಹೀಗಾಗಿ ಅವರು ಖುಷಿಯಿಂದಲೇ ಶಿವಕುಮಾರ್‌ಗೆ ಸ್ಥಾನ ಬಿಟ್ಟುಕೊಡುತ್ತಾರೆ, ಶಿವಕುಮಾರ್ ಸಿಎಂ ಆಗುವುದು ಖಚಿತ ಎಂದು ಗದುಗಿನ ದೇವಿ ಆರಾಧಕಿ ಭೈಲಮ್ಮ ಬಾಳಮಣ್ಣವರ ಭವಿಷ್ಯ ಹೇಳಿದ್ದಾರೆ.
ಕೋಲಾರದಲ್ಲಿ ಆಗಾಗ ತವರುಮನೆಗೆ ಹೋಗುತ್ತಿದ್ದಳೆಂದು ಪತ್ನಿಯ ಕೊಲೆಗೈದ ಪತಿ
ಕೋಲಾರದ ಜನ್ನಘಟ್ಟ ಗ್ರಾಮದಲ್ಲಿ ಆಗಾಗ ತವರು ಮನೆಗೆ ಹೋಗಿ ಬರುತ್ತಿದ್ದ ಪತ್ನಿಯ ಮೇಲೆ ಅನುಮಾನ ಪಟ್ಟ ಪತಿ ಆಕೆಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಹೆಂಡತಿಯನ್ನು ಕುತ್ತಿಗೆ ಹಿಸುಕಿ ಕೊಂದ ಗಂಡ ಸಹಜ ಸಾವೆಂದು ಬಿಂಬಿಸಲು ಹೊರಟಿದ್ದ. ಅನುಮಾನಗೊಂಡ ಮೃತಳ ಪೋಷಕರು




